ನಗರದಲ್ಲಿರುವ ಆಕರ್ಷಕ ಗಣಪತಿ ಪೆಂಡಾಲ್

ತಿಲಕ್ ನಗರದ ಧರ್ಮಸ್ಥಳ ಮಾದರಿಯ ಗಣಪತಿ ಪೆಂಡಾಲ್



ಸುದ್ದಿಲೈವ್/ಶಿವಮೊಗ್ಗ


ಗಣೇಶನ ಹಬ್ಬಕ್ಕೆ ನಗರದಲ್ಲಿ ಪೆಂಡಾಲ್ ಗಳಲ್ಲಿ ಕೂರಿಸುವ ಗಣಪತಿ ವಿಗ್ರಹಗಳು ಒಂದು ಕಡೆ ಆಕರ್ಷಣೆ ಉಂಟು ಮಾಡಿದರೆ. ಹಲವೆಡೆಯ ಗಣಪತಿ ಪೆಂಡಾಲ್ ಗಳಲ್ಲಿ ಆಕರ್ಷಣೆಯ ಡೆಕೋರೇಷನ್ ಮಾಡಲಾಗಿದೆ. 

ಎನ್.ಟಿ. ರಸ್ತೆಯ ಗಣಪ

ಎನ್ ಟಿ ರಸ್ತೆಯ ಗಣಪನ ಪೆಂಡಾಲ್‌ನವರು ಈ ಬಾರಿ ವೀರಾಂಜನೇಯನ ಅಲಂಕಾರ ಮಾಡುವ ಮೂಲಕ ರೋಮಾಂಜನ ಉಂಟು ಮಾಡಿದ್ದಾರೆ. ಎನ್ ಹೆಚ್  ರಸ್ತೆಗೆ ರಾಮ ಲಕ್ಷ್ಮಣರನ್ನ ಹೊತ್ತ ವೀರಾಂಜನೇಯ ಕಲಾಕೃತಿ ನಿರ್ಮಿಸಿದ್ದಾರೆ. ಅದರಂತೆ ಚಿಕ್ಕಲ್ ನಲ್ಲಿ ನಂದಿಯ ಕಲಾಕೃತಿಯನ್ನ ಕೂರಿಸಲಾಗಿದೆ. 


ಎಪಿಎಂಸಿ ಗಣಪ


ಅದರಂತೆ ಶಿವಮೊಗ್ಗ ಎಪಿಎಂಸಿ ಗೆಳೆಯರ ಗಣಪತಿಯ ಪೆಂಡಾಲ್  ಅದ್ಭುತವಾಗಿ ಮೂಡಿ ಬಂದಿದೆ. ಸಾರ್ವಜನಿಕರ ಆಕ್ಷಣೆಗೆ ಒಳಗಾಗಿದೆ.‌ ಮಣ್ಣಿನ ಗಣಪತಿಗೆ ಕೃಷಿ ಉತ್ಪನ್ನಗಳ ಅಲಂಕಾರ ಅದ್ಭುತವಾಗಿದೆ. ಹೂವಿನ ಅಲಂಕಾರ ಅದರ ಮಧ್ಯೆ ಲೈಟಿಂಗ್ ಡಿಸೈನ್ ಗಳು ಮನ ಸೂರೆಗೊಳ್ಳುತ್ತದೆ. 


ಅದರಂತೆ ಶಿವಮೊಗ್ಗದ ತಿಲಕ್ ನಗರದ 2 ನೇ ತಿರುವಿನಲ್ಲಿರುವ ಗಣಪತಿಯೂ ಸಕ್ಕತ್ತಾಗಿ ಮೂಡಿ ಬಂದಿದೆ. ಧರ್ಮಸ್ಥಳದಂತ ಕಲಾಕೃತಿಯ ಒಳಗೆ ಲಿಂಗ ಪೂಜೆ ಮಾಡುವ ಗಣಪನನ್ನ ಪ್ರತಿಷ್ಠಾಪಿಸಲಾಗಿದೆ. ಪೆಂಡಾಲ್ ನಲ್ಲಿ ಹೋದರೆ ಹಣತೆ ದೀಪದ ಬೆಳಕು ಸಹ ಮನ ಸೂರೆಗೊಳ್ಳವಂತೆ ಮಾಡಿದೆ. ಇದರಿಂದ ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಭೇಟಿ ನೀಡಿದ ಅನುಭವ ಮೂಡಿಸುತ್ತದೆ. 

ಮಲಗೊಪ್ಪದ ಗಣಪ


ಇವೆಲ್ಲದರ ಮಧ್ಯೆ ಶಿವಮೊಗ್ಗದ ಮಲಗೊಪ್ಪದಲ್ಲಿ ಸರ್ಕಾರಿ ಶಾಲೆಯನ್ನ ಉಳಿಸುವ ನಿಟ್ಟಿನಲ್ಲಿ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಪೆಂಡಾಲ್ ಒಳಗೆ ಮಾಹಿತಿಯನ್ನ ಇಡಲಾಗಿದೆ. ನನ್ನ ಶಾಲೆ ನನ್ನ ಜವಬ್ದಾರಿಯ ಸರ್ಕಾರಿ ಘೋಷವಾಕ್ಯವನ್ನ ಹಾಕಲಾಗಿದೆ. ಹೀಗೆ ಹಲವಾರು ಗಣಪತಿ ಪೆಂಡಾಲ್ ಗಳು ಒಂದಕ್ಕಿಂತ ಒಂದು ಅದ್ಬುತ ಕಲೆಯೊಂದಿಗೆ ಮೂಡಿ ಬಂದಿದೆ. ನಮಗೆ ಸದ್ಯಕ್ಕೆ ಇಷ್ಟು ಮಾಹಿತಿ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು