ಪ್ರಗತಿ ಆಪಲ್ ಎಜುಕೇಷನ್ ನಿಂದ ಎರಡು ದಿನ ಮೆಡಿಕಲ್ ಕೌನ್ಸಿಲಿಂಗ್ + ಸ್ಕಾಲರ್ ಸಪೋರ್ಟ್ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ


ಪಿಯುಸಿ. ಎಸ್ ಎಸ್ ಎಲ್ ಸಿ ಹಾಗೂ ಇಂಕಿನಿಯರ್ ಮಕ್ಕಳಿಗೆ 30 ಕೋಟಿಜ ಸ್ಕಾಲರ್ ಶಿಪ್‌ನ್ನ  ಕೊಡಿಸಿದ್ದೇವೆ ಎಂದು ಪ್ರಗತಿ ಆಪಲ್ ಎಜುಕೇಷನ್ ವಿಜಯ ಕುಮಾರ್ ಬಳಿಗಾರ್ ತಿಳಿಸಿದರು.


ಮೆಡಿಕಲ್ ಅಡ್ಮಿಷನ್ ಆರಂಭವಾದಾಗ ಅಡ್ಮಿಷನ್ ಕಷ್ಟವಾಗಿದೆ. ಸಿಇಟಿ ಪರೀಕ್ಷೆ ಬಹಳ ಕಷ್ಟವಾಗಿರುತ್ತದೆ. ಸೆ.19-20 ಕ್ಕೆ ಓದುವ ಖುಷಿ, ಪರೀಕ್ಷೆ ಸಂಭ್ರಮ ಮತ್ತು ಪರೀಕ್ಷೆ ಮತ್ತು ಪೋಷಕರು ವಿಶೇಷ ಉಪನ್ಯಾಸ ಮತ್ತು ಸಲಹಾ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 


ಸೆ.20 ರಂದು ಪ್ರತಿಭಾವಂತ 150 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಗತಿ ಸ್ಕಾಲರ್ ಶಿಪ್ , ಸಹಕಾರ ಪುರಸ್ಕಾರ, ನೂತನ ಸ್ಕಾಲರ್ ಶಿಪ್ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ನಂತರ ವೈದ್ಯಕೀಯ ವಿದ್ಯಾರ್ಥಿಗಳ ಸವಾಲುಗಳು ಮತ್ತು ಜನಸ್ನೇಹಿ ವೈದ್ಯನಾಗುವುದು ಹೇಗೆ ಎಂಬುದರ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.


ಎಲ್ಲಾ ಗೋಷ್ಠಿಗಳ ಪ್ರಮುಖ ಉಪನ್ಯಾಸಕರಾಗಿ ಡಾ.ಸಿ‌ಆರ್ ಚಂದ್ರಶೇಖರ್ ಆಗಮಿಸಲಿದ್ದಾರೆ. ಸಿಇಒ ಹೇಮಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶೋಭ ವೆಂಕಟರಮಣರವರು ಓದುವ ಖುಷಿ ಪರೀಕ್ಷೆ ಸಂಭ್ರಮ ಪುಸ್ತಕದ 11 ನೇ ಆವೃತ್ತಿಯ ಪುಸ್ತಕ ಬಿಡುಗಡೆಮಾಡಲಿದ್ದಾರೆ. 


ಸೆ.20 ರಂದು ಹೊಸ 6 ಸ್ಕಾಲರ್ ಶಿಪ್ ಆರಂಭವಾಗಲಿದೆ. ನಂತರ ಸಂವಾದ ನಡೆಯಲಿದೆ. ಆಟೋ ಚಾಲಕರ ಮಕ್ಕಳಿಗೆ ಸ್ಕಾಲರ್ ಶಿಪ್ ಸಹ ಚಾಲನೆ ನೀಡಲಾಗುತ್ತಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು