ಸುದ್ದಿಲೈವ್/ಶಿವಮೊಗ್ಗ
ನನ್ನ ಮೇಲಿನ ದ್ವೇಷಕ್ಕೆ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ರಾಜ್ಯ ಸರ್ಕಾರ ಇಳಿಯದಂತೆ ಬೃಹತ್ ಕೈಗಾರಿಕೆ ಸಚಿವ ಹೆಚ್ ಡಿ ಕುಮಾರ್ ಸ್ವಾಮಿ ತಿಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಬಾಡಿದ ಅವರು ಗ್ಯಾರೆಂಟಿ ಹೊಡೆತದಲ್ಲಿ ನೀರಾವರಿ, ಪ್ರಕೃತಿ ವಿಕೋಪದ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು ಹಾಗೂ ಕಾರ್ಯಕ್ರಮವೇನು? ಜನತೆ ಮುಂದೆ ಭ್ರಷ್ಠಾಚಾರ, ವರ್ಗಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಬಡವರಿಗೆಕೊಡುವ ಹಣದಲ್ಲೂಹಗರಣದ ಬಗ್ಗೆ ಚರ್ಚೆ ಆಗುತ್ತಿದೆ ವಿನಹ ಸಮಗ್ರ ಅಭಿವೃದ್ದಿ ಬಗ್ಗೆ ಚರ್ಚೆ ಆಗುತ್ತಿಲ್ಲ ಎಂದು ದೂರಿದರು
ಸಿಎಂ ನವರು ಸಂಗೊಳ್ಳಿ ರಾಯಣ್ಣನನ್ನ ಹೋಲಿಕೆ ಮಾಡಿಕೊಂಡು ಸ್ವಪಕ್ಷೀಯವರೇ ನನ್ನನ್ನ ಮುಗಿಸಲು ಹೊರಟಿದ್ದಾರೆ ಎಂದು ಹೇಳುತ್ತಿರುವ ಸಿಎಂ ಈಗ ವಿಪಕ್ಷಗಳ ವಿರುದ್ಧ ಮಾತನಾಡುತ್ತಿಲ್ಲ. ಅವರ ತಪ್ಪನ್ನ ಬಯಲಿಗೆ ಎಳೆದ ಮೇಲೆ ವಿಪಕ್ಷಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಅವರ ಹೇಳಿಕೆ ಬದಲಾಗಿದೆ. ಅವರ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ದೂರಿದರು.
ರಸ್ತೆಯ ಗುಂಡಿ ಮುಚ್ಚಲು ಸರ್ಜಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಙದೆ ಹಿಮಾಚಲ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಹಾಡಿಹೊಗಳಲಾಗುತ್ತಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗುತ್ತಿಲ್ಲ. ಅಲ್ಲಿನ ಕಾಂಗ್ರೆಸ್ ಜನರಿಗೆ ಬದುಕುವ ಕಾರ್ಯಕ್ರಮನೀಡಬೇಕು. ಇದೇ ಪರಿಸ್ಥಿತಿ ಮುಂದುವರೆದರೆ ಅದೇ ಪರಿಸ್ಥಿತಿ ಕರ್ನಾಟಕಕ್ಕೆ ಬರುವ ದಿನಗಳು ದೂರವಿಲ್ಲ ಎಙದರು.
visl ಸಂಸ್ಥೆ ಮಾರಾಟ ಮಾಡಲು ರಾಜ್ಯ ಸರ್ಕಾರ ಹವಣಿಸುತ್ತಿದೆ. ಅದನ್ನ ಉಳಿಸಲು ಹರಸಾಹಸ ಪಡುತ್ತಿರುವೆ. ರಾಜ್ಯದಲ್ಲಿ ಆಡಳಿತ ನಡೆಸಿದಂತೆ ಕೇಂದ್ರದಲ್ಲಿ ಆಡಳಿತ ನಡೆಸುವುದು ಕಷ್ಟ. ಪ್ರಧಾನಿಗೆ ಗೌರವ ತರಬೇಕು. 40 ಪಿಎಸ್ಎಲ್ ಯುನಿಟ್ ನಲ್ಲಿ 8 ಸಂಸ್ಥೆಗಳಿವೆ. ಇವುಗಳಿಗೆ ಶಕ್ತಿ ತುಂಬ ಬೇಕಿದೆ. ನನಗೆ ಒತ್ತಡವಿದೆ ನನ್ನ ಬಗ್ಗೆ ಲಘುವಾಗಿ ಮಾತನಾಡಲಾಗುತ್ತಿದೆ.
ನನ್ನ ಮತ್ತು ರಾಜ್ಯ ಸರ್ಕಾರದ ನಡುವೆ ಹೊಡೆದಾಟಗಳು ಏನೇ ಇದ್ದರೂ ಅಭಿವೃದ್ಧಿ ಕಡೆ ಹೋಗಬೇಕಿದೆ. ನಾನು ಸಿಎಂ ಆದಾಗ ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿದಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸಂಘರ್ಷಕ್ಕೆ ಇಳಿಯುತ್ತಿದೆ. ಉತ್ತಮ ಬೆಳವಣಿಗೆ ಅಲ್ಲ ಎಂದು ಕಿವಿ ಮಾತಾಡಿದರು.
visl ಉಳಿಸಲು ಹಗಲು ರಾತ್ರಿ ಪ್ರಯತ್ನ ಮುಂದುವರೆಸಿದ್ದೇನೆ. ನಮ್ಮ ಇಲಾಖೆಗೆ ದೊಡ್ಡಮಟ್ಟದ ಅನುದಾನ ಇಲ್ಲ. ವಿಐಎಸ್ಎಲ್ ನ್ನ 2016 ರಲ್ಲಿ ಮಾರಾಟ ಮಾಡಲು ತೀರ್ಮಾನವಾಗಿದೆ. ಪುನಶಚೇತನಕ್ಕೆ 10-15 ಸಾವಿರ ಕೋಟಿ ರೂ. ಹಣ ಬೇಕು.ಸೇಲ್ ನಿಂದ ಜೀವ ಕೊಡಬೇಕು. ಸಮಯ ತೆಗೆದುಕೊಳ್ಳಲಿದೆ. ನನ್ನ ಮೇಲೆ ಅನುಮಾನ ಬೇಡ, ಎಷ್ಟೆ ಕಷ್ಟಬಿದ್ದರೂ ಉಳಿಸಲು ಕಟಿಬದ್ದನಾಗಿರುವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ವೈಜಾಕ್ ಸ್ಟೀಲ್ ಪ್ಲಾಂಟ್ 6000 ಎಕರೆಯಲ್ಲಿದೆ. 12 ವರ್ಷ ನಿರಂತರವಾಗಿ ಲಾಭದಲ್ಲಿದ್ದ ಫ್ಯಾಕ್ಟರಿ ಈಗ ಮಾರಾಟಕ್ಕೆ ಇಡಲಾಗಿದೆ. ಪ್ರಧಾನಿ ವಿಷನ್ ಇದೆ. ವಿಕಸಿತ ಮತ್ತು ಆತ್ಮನಿರ್ಭರ ಭಾರತ ಕನಸು ಹೊಂದಿರುವ ಪ್ರಧಾನಿಗೆ ಈ ಕಾರ್ಖಾನೆಯನ್ನ ಲಾಭಕ್ಕೆ ತಂದು ಅದರ ಮೂಲಕ ವಿಐಎಸ್ಎಲ್ ಕಾರ್ಖಾನೆಯನ್ನ ಲಾಭಕ್ಕೆ ಕೊಙಡೊಯ್ಯುವ ಕಮಿಟ್ ಮೆಂಟ್ ಹೊಂದಿದ್ದೇನೆ. ಇದು ರಾತ್ರೋರಾತ್ರಿ ಆಗುವ ಕೆಲಸವಲ್ಲ ಎಂದು ವಿವರಿಸಿದರು.
ಈ ವೈಜಾಕ್ ಗೆ 35 ಸಾವಿರ ಕೋಟಿ ಹಣ ಬೇಕಿದೆ. ಇದನ್ನ ಜಾಣತನದಿಂದ ಅಭಿವೃದ್ಧಿ ಪಡಿಸಿ ನಂತರ ವಿಐಎಸ್ ಎಲ್ ಗೆ ಹಣತರಬೇಕಿದೆ. ತಪ್ಪು ಆಡಳಿತ ಮಂಡಳಿಯಿಂದ ನಡೆದಿದೆ. ಸುನಾಮಿ ವಿರುದ್ಧ ನಡೆಯಬೇಕಿದೆ ಎಂದರು.