Girl in a jacket

ಕಾಂಗ್ರೆಸ್ ನಾಯಕರೆಲ್ಲಾ ಜಡ್ಜ್ ಆಗಿದ್ದಾರೆ-ಚೆನ್ನಬಸಪ್ಪ



ಸುದ್ದಿಲೈವ್/ಶಿವಮೊಗ್ಗ

ಸಿಎಂ ರಾಜೀನಾಮೆ ವಿಷಯದಲ್ಲಿ ಕಾಂಗ್ರೆಸ್ ನ್ಯಾಯಾಧೀಶರಂತೆ ವರ್ತಿಸುವುದನ್ನ ಬಿಡಬೇಕೆಂದು ಶಾಸಕ ಚೆನ್ನಬಸಪ್ಪ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಮೇಲೆ ನ್ಯಾಯಾಲಯದ ಆದೇಶದ ಮೇರೆಗೆ  ಎಫ್ಐಆರ್ ದಾಖಲಾಗಿದೆ.  ಮೂಡದ ಎಲ್ಲಾದರ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬ ಆದೇಶವಾಗಿದೆ‌. ಆದರೆ  ಕಾಂಗ್ರೆಸ್ ಸಂವಿಧಾನವನ್ನ ಗಾಳಿಗೆ ತೂರಿ ಮೊಂಡತನ ಪ್ರದರ್ಶಿಸುತ್ತಿದೆ  ಎಂದು ಹೇಳಿದರು. 

ಸದನದಲ್ಲಿ ಮೂಡಾ ಚರ್ಚೆ ಮಾಡೋಣವೆಂದರೆ ಚರ್ಚೆಗೆ ಅವಕಾಶವೇ ನೀಡಲಿಲ್ಲ. ವಾಲ್ಮೀಕಿ ಹಗರಣದಲ್ಲಿ 187 ಕೋಟಿ ಅವ್ಯವಹಾರ ನಡೆದರೂ ಸೂಕ್ತ ತನಿಖೆಯಾಗಿಲ್ಲ. ಇಡಿ ಮಧ್ಯ ಪ್ರವೇಶಿಸಿದ ಕಾರಣ ಸಚಿವರ ರಾಜೀನಾಮೆ ಆಯಿತು. ಮೂಡಾದಲ್ಲಿ ಎಲ್ಲಾ ಮಂತ್ರಿ ಮಂಡಲ ಜಡ್ಜ್ ಮೆಂಟ್ ಕೊಡ್ತಾ ಇದ್ದಾರೆ. ತನಿಖೆಯಾಗದೆ ಜಡ್ಜ್ ಮೆಂಟ್ ಬರ್ತಾ ಇದೆ. ಸಿಎಂ ಸಿದ್ದರಾಮಯ್ಯ ಏನೂ ತಪ್ಪು ಮಾಡಿಲ್ಲ ಎಂದು ಕಾಂಗ್ರೆಸ್ ‌ನ ನಾಯಕರು ಹೇಳಿಕೆ ಕೊಡುತ್ತಿದ್ದಾರೆ. 

ಮೊದಲಿಗೆ ಲೋಕಾಯುಕ್ತ ತನಿಖೆಯಾಗಬೇಕು, ವಿಚಾರಣೆ ನಡೆಯಬೇಕು. ನಂತರ ನ್ಯಾಯಾಲಯ ಆದೇಶಿಸಬೇಕು. ಅದಕ್ಕೂ ಮುಂಚೆನೆ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂಬ ಕಾಂಗ್ರೆಸ್‌ನ. ಮೊಂಡುತನ ಪ್ರದರ್ಶಿಸುತ್ತಿದೆ. ಹಾಗಾದರೆ ತನಿಖಾತಂಡ, ನ್ಯಾಯಾಲಯ ಯಾಕೆ ಬೇಕು. ಇವರೆ  ಜಡ್ಜ್ ಆಗಿಬಿಡಲಿ ಎಂದರು. 

ಸಿಎಂ ರಾಜೀನಾಮೆ ನೀಡದೆ ಆ ಸ್ಥಾನಕ್ಕೆ  ನ್ಯಾಯ ಕೊಡಲು ಆಗಲ್ಲ. ರಾಮಕೃಷ್ಣ ಹೆಗಡೆ, ಬಂಗಾರಪ್ಪ ಸುಎಂ ಆಗಿದ್ದಾಗ ಆರೋಪ ಬಂದ ಹಿನ್ನಲೆಯಲ್ಲಿ  ರಾಜೀನಾಮೆ ನೀಡಿದ್ದರು. ತನಿಖೆ ಸಂಪೂರ್ಣ ಸಹಕಾರ ನೀಡಬೇಕು. ತಾವು ತಪ್ಪಿತಸ್ಥರಿಲ್ಲ ಎಂದು ಕಳಂಕ ಮುಕ್ತರಾಗಿ ಹೊರಗೆ ಬನ್ನಿ. ನಿಮಗೆ ರಾಜ್ಯಪಾಲರು ಆಗಿಬರೊಲ್ಲ, ನ್ಯಾಯಾದೀಶರ ಗೌರವವಿಲ್ಲ. ನೀವೆ ಜಡ್ಜ್ ಎಲ್ಲವೂ ಆಗಿಬಿಡಿ ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು