ಹಬ್ಬಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಮಾಡುವಂತೆ ಮನವಿ




ಸುದ್ದಿಲೈವ್/ಶಿವಮೊಗ್ಗ


ಗೌರಿ ಮತ್ತು ಗಣೇಶ ಹಬ್ಬದ ಅಂಗವಾಗಿ ಶಿವಮೊಗ್ಗ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಕಾರ್ಪರೇಟರ್ ಹೆಚ್. ಸಿ.ಯೋಗೇಶ್ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಕವಿತಾ  ಯೋಗಪ್ಪನವರ್ ರವರಿಗೆ ಹಾಗೂ ಒಳಚರಂಡಿ ಮತ್ತು ಕುಡಿಯುವ ನೀರಿನ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  


ಗಣಪತಿ ಹಬ್ಬ ವಯಸ್ಸಿನ ಮಿತಿ ಇಲ್ಲದೆ ಪ್ರತಿಯೊಬ್ಬರು ವಿಜೃಂಭಣೆಯಿಂದ ಸಂಭ್ರಮ ಸಡಗರೊಂದಿಗೆ ಪ್ರತಿ ಮನೆಯಲ್ಲೂ ಆಚರಿಸುವ ಹಬ್ಬವಾಗಿದೆ.  ಪ್ರಮುಖವಾಗಿ ನೀರಿನ ವ್ಯವಸ್ಥೆ 24/7 ನಲ್ಲಿ ನೀರು ವಿತರಿಸುವ ಬದಲು ಹಳೆ ನಲ್ಲಿಯಲ್ಲಿ ಹಬ್ಬ ಮುಗಿವವರೆಗೂ ನೀರನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಮನವಯಲ್ಲಿ ಒತ್ತಾಯಿಸಲಾಗಿದೆ.


ಗಣಪತಿ ವಿಸರ್ಜಿಸಲು ಅನುಕೂಲವಾಗುವಂತೆ ಟ್ರ್ಯಾಕ್ಟರ್ ಗಳಲ್ಲಿ ನೀರಿನ ಡ್ರಮ್ ತೆಗೆದುಕೊಂಡು ಪ್ರತಿ ವಾರ್ಡ್ ಗಳಿಗೂ ತಲುಪಿಸುವ ವ್ಯವಸ್ಥೆಯನ್ನು ಹಾಗೂ ಸುಸರ್ಜಿತವಾಗಿ ಹಬ್ಬ ಆಚರಿಸಲು ಜಲಮಂಡಳಿಯಿಂದ ಬೇಕಾದ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಹೆಚ್ಚಿಸಿಕೊಂಡು ಅವಶ್ಯಕತೆ ಇದ್ದವರಿಗೆ ಈ ಕೂಡಲೇ ನೀರನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಲಾಯಿತು.


ನಗರದಲ್ಲಿನ ಪ್ರತಿದಿನದ ನೀರಿನ ಅಭಾವದ ಕುರಿತು ಹಾಗೂ 24/7 ನೀರಿನ ವ್ಯವಸ್ಥೆಯ ಕುರಿತು ದೀರ್ಘಕಾಲದ ಚರ್ಚೆಯನ್ನು ನಡೆಸಲಾಯಿತು.‌ ಈ ಸಂದರ್ಭದಲ್ಲಿ ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ಮಾಜಿನಗರ ಸಭಾಧ್ಯಕ್ಷರು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ, ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ಆರ್.ಸಿ ನಾಯ್ಕ್, ಮೆಹಕ್ ಶರೀಫ್,  ರವರು, ಮಾಜಿ ಮಹಾಪೌರರಾದ  ವಿಜಯಲಕ್ಷ್ಮಿ ಸಿ ಪಾಟೀಲ್ ರವರು, 


ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕೆ ರಂಗನಾಥ್ ರವರು, ರಂಗೇಗೌಡರವರು, ನೂರುಲ್ಲಾ ರವರು, ಚಿನ್ನಪ್ಪ ರವರು, ಗಂಗಾಧರ್ ರವರು, ನವೀನ್ ಕುಮಾರ್ ರವರು, ಮಧು ಕುಮಾರ್ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close