ಪೋಷಕಾಂಶಗಳ ಮಹತ್ವದ ಕುರಿತು ಉಪನ್ಯಾಸ ಮತ್ತು ಪೋಷಕಾಂಶಗಳ ಕೊರತೆ ಇರುವ ಮಕ್ಕಳಿಗೆ ಪೋಷಕಾಂಶಯುಕ್ತ ಮಾತ್ರೆಗಳ ವಿತರಣೆ


ಸುದ್ದಿಲೈವ್/ಶಿವಮೊಗ್ಗ

ರೋಟರಿ ಶಿವಮೊಗ್ಗ ಮಲ್ನಾಡ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಂಯುಕ್ತಾಶ್ರಯದಲ್ಲಿ   ರಾಷ್ಟ್ರೀಯ ಪೋಷಕಾಂಶ ಸಪ್ತಾಹ ದಿನದ ಅಂಗವಾಗಿ ಶುಕ್ರವಾರ ನಗರದ ಗೋಪಾಲಗೌಡ ಬಡಾವಣೆ ಕೆ.ಎಚ್.ಬಿ ಕಾಲೋನಿಯ ರಾಜೇಶ್ವರಿ ಪ್ರೌಢ ಶಾಲೆಯಲ್ಲಿ ಪೋಷಕಾಂಶಗಳ ಮಹತ್ವದ ಕುರಿತು ಮತ್ತು ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗೆ ಸರ್ಜಿ ಆಸ್ಪತ್ರೆಯ ವೈದ್ಯರ ತಂಡದಿಂದ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿ ಪೋಷಕಾಂಶಗಳ ಕೊರತೆ ಇರುವ ಮಕ್ಕಳಿಗೆ ಪೋಷಕಾಂಶಯುಕ್ತ ಮಾತ್ರೆಗಳನ್ನು ವಿತರಿಸಲಾಯಿತು. 

ಈ ವೇಳೆ ಪೋಷಕಾಂಶಗಳ ಬಗ್ಗೆ ಸರ್ಜಿ ಆಸ್ಪತ್ರೆಯ ಡಯಟೀಶಿಯನ್ ಶ್ರೇಯಸ್ ಮತ್ತು ಬಾಯಿ ಆರೋಗ್ಯದ ಬಗ್ಗೆ ದಂತಚಿಕಿತ್ಸಾ ತಜ್ಞರಾದ ಶ್ರೀಮತಿ ಡಾ. ದೀಪ ಅರುಣ್ ರವರು ವಿಶೇಷ ಉಪನ್ಯಾಸ ನೀಡಿ ಪೋಷಕಾಂಶಗಳ ಮಾಹಿತಿಯನ್ನೊಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.  

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಯಾರಾದ  ಧನಂಜಯ, ರೋಟರಿ ಶಿವಮೊಗ್ಗ ಮಲ್ನಾಡ್ ನ ಅಧ್ಯಕ್ಷರಾದ ಮುಸ್ತಾಕ್, ಕಾರ್ಯದರ್ಶಿಗಳಾದ ಶ್ರೀಕಾಂತ್ ಹಾಗೂ ಸರ್ಜಿ ಆಸ್ಪತ್ರೆಯ ಸಿಬ್ಬಂದ್ದಿಗಳಾದ ಮಂಜಪ್ಪ, ದಿನೇಶ್ ಸೇರಿದಂತೆ ಶಾಲೆಯ ಆಡಳಿತ ವರ್ಗ, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket