Suddilive/ಹೊಳೆಹೊನ್ನೂರು
ಅರಹತೋಳಲು ವಡ್ಡರಹಟ್ಟಿಯಲ್ಲಿ ಶನಿವಾರ ಮದ್ಯಾಹ್ನದ ವೇಳೆ ದಿಢೀರ್ ಮನೆ ಕುಸಿದು ವೃದ್ಧ ಮಂಜಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ವೃದ್ಧ ಮಂಜಪ್ಪ ಮಕ್ಕಳೊಂದಿಗೆ ಅರಹತೋಳಲು ವಡ್ಡರಹಟ್ಟಿ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಮಂಜಪ್ಪನ ಪತ್ನಿ ಹಾಗೂ ಮಕ್ಕಳು ಅಡಿಕೆ ಕೂಲಿ ಕೆಲಸಕ್ಕೆ ತೆರಳಿದ ವೇಳೆ ಏಕಾಏಕಿ ಮನೆ ಕುಸಿತವಾಗಿದೆ. ಕೆಂಪು ಹಂಚಿನ ಮನೆಯಲ್ಲಿ ಒಬ್ಬರೆ ಮಲಗಿದ್ದಾಗ ಮನೆ ಕುಸಿತವಾಗಿದೆ. ಅಕ್ಕಪಕ್ಕದ ನಿವಾಸಿಗಳು ಕೂಡಲೆ ದಾವಿಸಿ ಮನೆಯ ಅವಶೇಷಗಳಡಿ ಸಿಲುಕಿದ ವೃದ್ದ ಮಂಜಪ್ಪನನ್ನು ಹೋರ ತೆಗೆದು ಅಂಬುಲೆನ್ಸ್ನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.