ಪುರದಾಳುವಿನಲ್ಲಿ ಸುವರ್ಣ ಮಹೋತ್ಸವ ಶ್ರೀ ವಿನಾಯಕ ಸ್ವಾಮಿ ಪ್ರತಿಷ್ಠಾಪನಾ ಕಾರ್ಯಕ್ರಮ



ಸುದ್ದಿಲೈವ್/ಶಿವಮೊಗ್ಗ


ಪುರದಾಳಿನಲ್ಲಿ ಉದ್ಧವ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಗಣೇಶೋತ್ಸವ ಸೇವಾ ಸಮಿತಿಯು ಈ ಬಾರಿ 50 ನೇ ವರ್ಷದ ಗಣಪತಿ ಉತ್ಸವವನ್ನ ಆಚರಿಸಲಾಗುತ್ತಿದೆ. 


ಸುವರ್ಣ ಮಹೋತ್ಸವ ಶ್ರೀ ವಿನಾಯಕ ಸ್ವಾಮಿ ಪ್ರತಿಷ್ಠಾಪನೆಯು ನಾಳೆ ಬೆಳಿಗ್ಗೆ ಗಂಗಾಪೂಜೆಯೊಂದಿಗೆ ಆರಂಭವಾಗಲಿದೆ. ನಾಳೆಯಿಂದ ಸೆ.11 ರ ವರೆಗೆ ಸಿದ್ದಿವಿನಾಯಕ ಸ್ವಾಮಿ ಪ್ರಯಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ಸಾಗಲಿದೆ. ನಾಳೆ ಬೆಳಿಗ್ಗೆ 10-30 ರಿಂದ 11-30 ರ ವರೆಗೆ ಗಂಗಾಪೂಜೆ, ವಿನಾಯಕ ಸ್ವಾಮಿಯ ಪ್ರತಿಷ್ಠಾನ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. 


ಐದು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಪೂಜಾ ಕೈಂಕರ್ಯಗಳು ಜರುಗಿದರೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಮೊದಲನೇ ದಿನ ಸಂಜೆ 7 ಗಂಟೆಗೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸಹಕಾರದೊಂದಿಗೆ ಕಮಲೇಶ್ವರ ಬಾಲಮೇಳ ಯಕ್ಷಗಾನ ಮಙಡಳಿಯಿಂದ ಗದಾಯುದ್ಧ ಶರಸೇತು ಬಂಧನ ಯಕ್ಷಗಾನ ನಡೆಯಲಿದೆ.


ಸೆ. 8 ರಂದು ಸಂಜೆ 6 ಗಂಟೆಗೆ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.9 ರಂದು ಬೆಳಿಗ್ಗೆ ದೇವರ ಪೂಜೆ, ಪ್ರಸಾದ ವಿನಿಯೋಗದ ನಂತರ ಗ್ರಾಮಸ್ಥರಿಗೆ ಗ್ರಾಮೀಣ ಕ್ರೀಡೆ ಹಮ್ಮಿಕೊಳ್ಳಲಾಗಿದೆ. ಮಹಿಖೆಯರಿಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಸಂಜೆ 6 ಗಂಟೆಗೆ ಎಸ್ ಎಸ್ ಎಲ್ ಸಿ, ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,


ಬಹುಮಾನ ವಿತರಣೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸೆ.10 ರಂದು ಸಂಜೆ ಬ್ರದರ್ ಆರ್ಕೇಸ್ಡ್ರಾದಿಂದ ಸಂಗೀತ ಸಂಜೆ ಕಾರ್ಯಕ್ರಮ, ಸೆ.11 ರಂದು ಸಂಜೆ ಅದ್ಧೂರಿ ಗಣೇಶ ರಾಜಬೀದಿ ಉತ್ಸವದೊಂದಿಗೆ ವಿನಾಯಕ ಸ್ವಾಮಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close