ಆ ಕಡೆ ಬಿಜೆಪಿಯಿಂದ ಹೊರ ಬಂದ ಸದಸ್ಯರು ಈ ಕಡೆಯಿಂದ ಕಾಂಗ್ರೆಸ್ ಸೇರ್ಪಡೆ



ಸುದ್ದಿಲೈವ್/ಭದ್ರಾವತಿ


ವಿಪ್ ಉಲ್ಲಂಘಿಸಿದ್ದ ಭದ್ರಾವತಿ‌ ನಗರ‌ಸಭೆಯ ಮೂವರು ಸದಸ್ಯರನ್ನ  ಬಿಜೆಪಿ ಉಚ್ಚಾಟನೆಗೊಳಿಸಿತ್ತು. ಪಕ್ಷದಿಂದ ಹೊರಬಂದ ಬೆರಳೆಣಿಕೆಯ ದಿನಗಳಲ್ಲೇ ಅವರೆಲ್ಲಾ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. 


ಭದ್ರಾವತಿ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರೂ, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷರಾಗಿದ್ದ ನಗರಸಭಾ ಸದಸ್ಯ ವಿ.ಕದಿರೇಶಿ  ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದೂ ಮಹಾಸಭಾ ತೊರೆದು ಶಾಸಕರಾದ ಬಿ.ಕೆ.ಸಂಗಮೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.


ಇವರ ಜೊತೆಗೆ ಪುತ್ರ BJP ಯ ಹಿಂದುಳಿದ ವರ್ಗ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಮಂಜುನಾಥ್,  ಹಾಲಿ ಬಿಜೆಪಿ ನಗರಸಭಾ ಸದಸ್ಯರಾದ ಅನಿತಾ ಮಲ್ಲೇಶ್, ಶಶಿಕಲಾ ನಾರಾಯಣಪ್ಪ ಅವರೂ ಕಾಂಗ್ರೆಸ್ ಸೇರ್ಪಡೆಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close