ಸುದ್ದಿಲೈವ್/ರಿಪ್ಪನ್‌ಪೇಟೆ
ಇಲ್ಲಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ನಂತರ ಪಟಗುಪ್ಪ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಡೆದಿದ್ದೇನು ..???
ಕೋಡೂರು ಗ್ರಾಮದ ಸದಾನಂದ ಭಟ್ ಮತ್ತು ಪತ್ನಿ ಸಬೀತಾ ನಡುವೆ ಗುರುವಾರ ಕೌಟುಂಬಿಕ ಕಾರಣಗಳಿಗಾಗಿ ಜಗಳ ನಡೆದಿದೆ .. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಸಬೀತಾ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ತಲೆಗೆ ತೀವ್ರವಾದ ಗಾಯವಾದ ಹಿನ್ನಲೆಯಲ್ಲಿ ಸಬೀತಾ ರವರನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿತ್ತು...
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಿಪ್ಪನ್‌ಪೇಟೆ ಪೊಲೀಸರು ಆರೋಪಿ ಸದಾನಂದ ಭಟ್ ಶೋಧ ನಡೆಸಿದ್ದಾರೆ ಆದರೆ ಆರೋಪಿಯ ಕಾರು ಪಟಗುಪ್ಪ ಸೇತುವೆ ಬಳಿ ದೊರಕಿದ್ದು ಯಾವುದೇ ಸುಳಿವು ಸಿಕ್ಕಿರಲಿಲ್ಲ ನಂತರ ಕಾರನ್ನು ಹೊಸನಗರ ಪೊಲೀಸರು ವಶಪಡಿಸಿಕೊಂಡಿದ್ದರು...
ಶುಕ್ರವಾರ ಬೆಳಿಗ್ಗೆ ಆರೋಪಿ ಸದಾನಂದ ಭಟ್ ಮೃತ ದೇಹ ಪಟಗುಪ್ಪ ಸೇತುವೆ ಬಳಿಯಲ್ಲಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.