ಮೃತ ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ



ಸುದ್ದಿಲೈವ್/ಬೆಂಗಳೂರು

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಪರಿಹಾರವಾರವಾಗಿ ಇಂದು ಸಿಎಂ ಸಿದ್ದರಾಮಯ್ಯನವರೇ ಮೃತರ ಪತ್ನಿ ಕವಿತಾರಿಗೆ ಚೆಕ್ ವಿತರಿಸಿದರು. ಈ ವೇಳೆ ಸಚಿವ ಮಧು ಬಂಗಾರಪ್ಪ, ಶಾಸಕ ಚೆನ್ನಬಸಪ್ಪ ಉಸ್ಥಿತರಿದ್ದರು. 

ಜು.19 ರಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಕಛೇರಿ ಅಧೀಕ್ಷಕರಾದ ದಿವಂಗತ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದರು. 

ಸೆ.18 ರಂದು ಸರ್ಕಾರದ ಆದೇಶದಂತೆ ದಿವಂಗತ ಚಂದ್ರಶೇಖರನ್ ಪಿ ಇವರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಕುಟುಂಬಕ್ಕೆ ರೂ.25.00 ಲಕ್ಷಗಳ ಸಹಾಯಧನವನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಖಜಾನೆ ಬಿಲ್ ಸಲ್ಲಿಸಲಾಗಿದ್ದು, ಇಂದು ಸಂಜೆ 4.30ರ ಒಳಗಾಗಿ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.

ಶಿವಮೊಗ್ಗ ಜಿಲ್ಲೆ ವಿನೋಬನಗರ ಪೋಲಿಸ್ ಠಾಣೆ ಅಪರಾಧ ಸಂಖ್ಯೆ:83/2024 ಕಲಂ 360 ರೆ/ವಿ 34 ಐಪಿಸಿ ಹಾಗೂ ಕಲಂ:3(2)(v) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಷೇಧ ಕಾಯ್ದೆ-1989ರಡಿ ಸಿಐಡಿಯ ವಿಶೇಷ ತನಿಖಾ ತಂಡ(Special Investigation Team)ವು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುವ ಹಿನ್ನಲೆಯಲ್ಲಿ ದೌರ್ಜನ್ಯ ನಿಷೇಧ ಕಾಯ್ದೆಯ ನಿಯಮಗಳಂತೆ ರೂ.8.25 ಲಕ್ಷಗಳನ್ನು ದಿವಂಗತ ಚಂದ್ರಶೇಖರನ್ ಪಿ ಇವರ ಪತ್ನಿ ಶ್ರೀಮತಿ ಕವಿತಾ ರವರಿಗೆ ಮಂಜೂರುಮಾಡಲಾಗಿದೆ.

ದಿವಂಗತ ಚಂದ್ರಶೇಖರನ್ ಪಿ ಇವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಿಂದ ಪಾವತಿಸಬೇಕಾದ ಸಂಬಳ ಮತ್ತು ರಜೆ ನಗದೀಕರಣಗಳಿಗೆ ಸಂಬಂಧಿಸಿದ ರೂ.1,41,361ಗಳನ್ನು ಈಗಾಗಲೇ ಶ್ರೀಮತಿ ಕವಿತಾ ರವರ ಬ್ಯಾಂಕ್ ಖಾತೆಗೆ ಪಾವತಿಸಲಾಗಿರುತ್ತದೆ ಹಾಗೂ ಮೃತರ ಮಗನಿಗೆ ಉದ್ಯೋಗ ನೀಡುವ ಕುರಿತು ಕ್ರಮವಹಿಸಲಾಗುತ್ತಿದೆ ಎಂಬ ಭರವಸೆಯನ್ನ ಸಿಎಂ ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket