ರೈತನ ಮೇಲೆ ಹಲ್ಲೆ ಮಾಡಿದ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಸ್ಥಳೀಯರು



ಸುದ್ದಿಲೈವ್/ಹೊಳೆಹೊನ್ನೂರು

ಗ್ರಾಮಾಂತರದ ಗುಡುಮಗಟ್ಟೆಯಲ್ಲಿ ಶನಿವಾರ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ರೈತರು ಅರಣ್ಯಾಧಿಕಾರಿಗಳ ಮಧ್ಯೆ ನಡೆದ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು ರೈತನ ಮೇಲೆ ಹಲ್ಲೆ ಅರಣ್ಯಾಧಿಕಾರಿ ಗಂಭೀರವಾಗಿ ಹಲ್ಲೆ ಮಾಡಿ ಗ್ರಾಮಸ್ಥರಿಂದ ತಪ್ಪಿಸಿಕೊಂಡು ಹೋಗಿರುವ ಘಟನೆ ಜರುಗಿದೆ. 

ಈ ಭಾಗದಲ್ಲಿ 3-4 ದಿನಗಳಿಂದ ಒತ್ತುವರಿ ತೆರವು ನಡೆಯುತ್ತಿದೆ. ಭದ್ರಾವತಿ ಆರ್‌ಎಫ್‌ಓ ದುಗ್ಗಪ್ಪ ಗುಡುಮಗಟ್ಟೆಯ ಭೋವಿ ಹನುಮಂತಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ ರೈತನ ಮೇಲೆ ಹಲ್ಲೆ ಮಾಡಿದ ಸುದ್ಧಿ ಹರಡಿ 2-3 ಗ್ರಾಮಗಳ ಗ್ರಾಮಸ್ಥರು ಗುಂಪಾಗಿ ಒತ್ತುವರಿ ನಡೆಯುತ್ತಿದ ಸ್ಥಳಕ್ಕೆ ದಾವಿಸಿದ್ದಾರೆ. ಸ್ಥಳಕ್ಕೆ ಹನುಮಂತಪ್ಪನ ಸಂಬಂದಿಗಳು ಬಂದು ದುಗ್ಗಪ್ಪನಿಗೆ ಬೇವರಿಳಿಸಿದ್ದಾರೆ.

ಸ್ಥಳದಲ್ಲಿ ಜನರ ಗುಂಪು ಹೆಚ್ಚಾಗುತ್ತಿದಂತೆ ಕಾಳಿಗೆ ಬುದ್ದಿ ಹೇಳಿದ ಅರಣ್ಯಾಧಿಕಾರಿ ದುಗ್ಗಪ್ಪ ಒತ್ತುವರಿ ಸ್ಥಳದಿಂದ ಹೋರ ನಡೆದಿದ್ದಾರೆ. ಕೆಲ ಮಹಿಳೆಯರು ಮಣ್ಣು ತೂರಿ ಆಕ್ರೋಶವ್ಯಕ್ತ ಪಡಿಸಿದರು ಎನ್ನಲಾಗುತ್ತಿದೆ. ಸ್ಥಳದಲ್ಲಿದ ಕೆಲ ನಾಯಕರು ಮಾತನಾಡಿ ಸಮಸ್ಯೆ ಬಗೆಹರಿಸಿದರು. ಪ್ರಭಾವಿ ಕುಟುಂಬವೊಂದು ಮಾಡಿಕೊಂಡಿರುವ 30-40 ಎಕರೆ ಒತ್ತುವರಿಯನ್ನು ಪ್ರದೇಶವನ್ನು ತೆರವು ಮಾಡುವುದು ಬಿಟ್ಟು ಸಣ್ಣಪುಟ್ಟ ರೈತರ ಪಹಣಿ, ಸಾಗುವಳಿ ಚೀಟಿ ಹೊಂದಿರುವ ಜಮೀನುಗಳನ್ನು ತೆರವು ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ಸಣ್ಣಪುಟ್ಟ ರೈತರಿಂದ ಕೆಲ ಅರಣ್ಯಾಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಪಡೆದು ಸಾಗುವಳಿ ಮಾಡಿಕೊಳ್ಳುವುದಕ್ಕೆ ಬಿಟ್ಟು ಇಂದು ಬಂದು ಏಕಾ ಏಕಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದ್ದಾರೆಂದು ಎಂದು ಆರೋಪಿಸಲಾಗಿದೆ. ಶನಿವಾರ ಬೆಳಗ್ಗಿನಿಂದ ಸಂಜೆಯ ವರೆಗೂ ಕೋಣನಸರದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿತ್ತು.



ಗುಡುಮಗಟ್ಟೆ ಕೋಣನಸರ ಪ್ರದೇಶದಲ್ಲಿ ಒತ್ತುವರಿ ತೆರವು ವೇಳೆ ರೈತನ ಮೇಲೆ ಹಲ್ಲೆ ಮಾಡಿದ ಅರಣ್ಯಾಧಿಕಾರಿ ದುಗ್ಗಪ್ಪನೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿ ಆಕ್ರೋಶವ್ಯಕ್ತ ಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket