Girl in a jacket

ಎಫ್ಎಸ್ಎಸ್ಎಐ ಅಧಿಕಾರಿಳಿಂದ ಎಪಿಎಂಸಿ ಮಾರುಕಟ್ಟೆಯ ಮೇಲೆ ದಾಳಿ



ಸುದ್ದಿಲೈವ್/ಶಿವಮೊಗ್ಗ

ನಿಷೇಧಿತ ಚೈನಾ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ಹೋಲ್ ಸೇಲ್ ಅಂಗಡಿಯ ಮೇಲೆ ನಿನ್ನೆ ಮತ್ತು ಇಂದು ಎಫ್ಎಸ್ಎಸ್‌ಎಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ನಿಷೇಧಿತ ಚೀನಾಬೆಳ್ಳುಳ್ಳಿಯ ಮಾರಾಟವನ್ನ 2021 ರಿಂದಲೇ ನಿಷೇಧವಾಗಿದ್ದರೂ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಗೆ ಹೇಗೆ ಲಗ್ಗೆ ಇಟ್ಟಿವೆ ಎಂಬುದೇ ಅಚ್ಚರಿಯಾಗಿದೆ. 

ಈ ಬೆನ್ನಲ್ಲೇ ಎಫ್ಎಸ್ಎಸ್ಐ ಅಧಿಕಾರಿ ಸದಾಶಿವ ನೇತೃತ್ವದ ತಂಡ ಇಂದು ನಾಲ್ಕೈದು ಅಂಗಡಿಗೆ ಹೋಗಿ ಚೈನಾ ಬೆಳ್ಳುಳ್ಳಿಯನ್ನ ವಶಕ್ಕೆ ಪಡೆದಿದೆ. ಈ ಬೆಳ್ಳುಳ್ಳಿಯನ್ನ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಕ್ರಮ ಜರುಗಿಸುವ ಬಗ್ಗೆ ಅಧಿಕಾರಿಗಳು ತಿಳಿಸಿವೆ. 

ನೈಜ ಬೆಳ್ಳುಳ್ಳಿಯ ದರ ಮಾರುಕಟ್ಟೆಯಲ್ಲಿ 350-400 ರೂ. ಕೆಜಿಗೆ ದೊರೆಯುತ್ತಿದೆ. ಆದರೆ ಚೈನಾ ಬೆಳ್ಳುಳ್ಳಿ 80 ರೂ.ಗೆ ಮಾರಾಟವಾಗುತ್ತಿದೆ. ಚೈನಾ  ಬೆಳ್ಳುಳ್ಳಿ ಆರೋಗ್ಯದ ಮೇಲೆ ಪರಿಣಾಮ ಬೀರುವ  ಹಿನ್ನಲೆಯಲ್ಲಿ ಇದರ ಮಾರಾಟವನ್ನ ಭಾರತ ದೇಶ ನಿಷೇಧಿಸಿತ್ತು. ನಿಷೇಧದ ನಡುವೆಯೂ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿರುವುದು ಅಚ್ಚರಿ ಮೂಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು