ಹಿಂದೂ ಯುವಕನನ್ನ ಅಪಹರಿಸಿ ಕೋಮಾಕ್ಕೆ ಹೋಗುವಂತೆ ಥಳಿಸಿದ ಮತಾಂಧರನ್ನ ಬಂಧಿಸುವಂತೆ ಹಿಂದೂ ಸಂಘಟನೆ ಆಗ್ರಹ

 


ಸುದ್ದಿಲೈವ್/ಶಿವಮೊಗ್ಗ


ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಮೆರಣಿಗೆ ವೇಳೆ ನಡೆದ ಘಟನೆಯನ್ನ ಖಂಡಿಸಿ ಹಾಗೂ ಭದ್ರಾವತಿಯಲ್ಲಿ  ಹಿಂದೂ ಯುವಕನನ್ನು  ಅಪಹರಿಸಿ ಕೈಯಲ್ಲಿದ್ದ ಹಣವನ್ನು ಕಸಿದುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸದೆ ಇರುವ ಭದ್ರಾವತಿ ಪೊಲೀಸರ ವಿರುದ್ಧ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.  


ಸೃಜನ್ ಗೌಡ ರವರನ್ನು ಕೋಮಾ ಸ್ಥಿತಿಗೆ ಹೋಗುವಂತದ ಹೊಡೆದ ಕೆಲ ಮುಸ್ಲೀಂ ಯುವಕರು, ನಂತರ ಅಪಘಾತವೆಂದು ಸುಳ್ಳು ಕಥೆ ಸೃಷ್ಟಿ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 


ಈ ವಿಚಾರದಿಂದ ಕುಟುಂಬದವರಿಗೆ ಹಾಗೂ ಸುತ್ತಮುತ್ತ ಎಲ್ಲಾ ಗ್ರಾಮಸ್ಥರಿಗೆ ಸ್ಥಳೀಯವಾಗಿ ತಿರುಗಾಡಲು ಭಯಭೀತರಾಗಿದ್ದಾರೆ. ಈ ಘಟನೆ ನಡೆದು 10 ದಿನಗಳ ಆದರೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇರುವುದರಿಂದ  ಆರೋಪಿಗಳು ಮತ್ತಷ್ಟು ಇಂತಹ ಕೃತ್ಯಗಳನ್ನು ಮಾಡಲು ಪ್ರೇರಿತವಾಗಿದೆ.  


ಹಾಗಾಗಿ ಜಿಲ್ಲಾಧಿಕಾರಿಗಳು  ಆರೋಪಿಗಳನ್ನು ಬಂಧಿಸುವಂತೆ, ಗ್ರಾಮಸ್ಥರಲ್ಲಿರುವಂತಹ ಆತಂಕವನ್ನು ದೂರಗೊಳಿಸಿ ಸೃಜನ್ ಗೌಡ ರವರಿಗೆ ನ್ಯಾಯ ಒದಗಿಸುವಂತೆ ಸಂಘಟನೆ ಒತ್ತಾಯಿಸಿದೆ. ಆರೋಪಿಗಳನ್ನು ತಕ್ಷಣ ಬಂಧಿಸದೆ ಹೋದರೆ ಪೊಲೀಸ್ ಠಾಣೆಯ ಮುಂದೆ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂಚ್ಚರಿಸಲಾಗಿದೆ. 


ಘಟನೆ


ಭದ್ರಾವತಿಯ ಹೊಸನೆರಳೆಕಟ್ಟೆ ಗ್ರಾಮದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಕಾಚಿನಕಟ್ಟೆಯ ಯುವಕ ಬೈಕ್ ನಲ್ಲಿ ಹೋಗುವಾಗ ಬುರ್ಖಾ ಹಾಕಿಕೊಂಡು ಬಂದ ಮಹಿಳೆಗೆ ಡಿಕ್ಕಿ ಹೊಡೆದ ಘಟನೆಗೆ ಯುವಕನನ್ನ ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಇದೊಂದು ಅಪಘಾತ ಎಂಬಂತೆ ಬಿಂಬಿಸಲಾಗಿದೆ. 


ಪ್ರಕರಣ ದಾಖಲಾದರೂ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಭದ್ರಾವತಿ ಪೊಲೀಸರು ವಿಫಲರಾಗಿದ್ದಾರೆ. ಘಟನೆಯಿಂದ ಯುವಕ ಸುಜನ್ ಗೌಡ ಐದು ದಿನಗಳ ವರೆಗೆ ಕೋಮಕ್ಕೆ ಹೋಗಿದ್ದು ಆತನಿಗೆ ನ್ಯಾಯಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸಂಘಟನೆ ಮನವಿಯಲ್ಲಿ ಒತ್ತಾಯಿಸಿಲಾಗಿದೆ. 


ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ್, ರಾಜೇಶ್ ಗೌಡ, ಸುರೇಶ್ ಬಾಬು, ಅಂಕುಶ್, ಕಾವ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close