ರೈಲ್ವೆ ಬ್ರಿಡ್ಜ್ ಬಳಿ ವ್ಯಾನಿಟಿಬ್ಯಾಗ್ ಬಿಟ್ಟು ಯುವತಿ ನಾಪತ್ತೆ



ಸುದ್ದಿಲೈವ್/ಭದ್ರಾವತಿ


ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಿವರಾಮನಗರ, ಭದ್ರಾವತಿ ವಾಸಿ ಬೆಟ್ಟಸ್ವಾಮಿ ಎಂಬುವವರ ಮಗಳು 17 ವರ್ಷದ ರಂಜಿತಾ ಎಂಬ ಯುವತಿ ಸೆ.19 ರಂದು ಪ್ಯಾಕ್ಟರಿ ಕೆಲಸಕ್ಕೆಂದು ಹೋದವರು ಕಾಣೆಯಾಗಿದ್ದು, ಲಕ್ಷ್ಮೀಪುರ ರೈಲ್ವೆ ಬ್ರಿಡ್ಜ್ ಬಳಿಯಲ್ಲಿ ಆಕೆಯ ಬ್ಯಾಗ್, ಚಪ್ಪಲಿ ಮತ್ತು ಐ.ಡಿ.ಕಾರ್ಡ್ ಸಿಕ್ಕಿರುತ್ತದೆ.  


ಈಕೆಯ ಚಹರೆ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡನೆಯ ಮುಖ, ಕನ್ನಡ ಭಾಷೆ ಮಾತನಾಡುತ್ತಾಳೆ. ಮೈಮೇಲೆ ಕೆಂಪು ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಲಗ್ಗಿನ್ ಧರಿಸಿರುತ್ತಾಳೆ. 


ಈಕೆಯ ಕುರಿತು ಯಾವುದೇ ಸುಳಿವು ದೊರಕಿದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ದೂ.ಸಂ.: 08182-222974/ 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  (ಛಾಯಾಚಿತ್ರ ಲಗತ್ತಿಸಿದೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close