ಶನಿವಾರ, ಸೆಪ್ಟೆಂಬರ್ 7, 2024

ಡೊಳ್ಳು ಬಾರಿಸುವ ವಿಚಾರದಲ್ಲಿ ಗಲಾಟೆ-ಪೊಲೀಸರಿಂದಲೇ ಗಣಪತಿ ವಿಸರ್ಜನೆ


ಸಾಂದರ್ಭಿಕ ಚಿತ್ರ


ಸುದ್ದಿಲೈವ್/ಶಿವಮೊಗ್ಗ


ಗಣಪತಿ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದಿದೆ. ಅಕ್ಕಪಕ್ಕದ ಪೆಂಡಾಲ್ ನವರು ಒಂದೇ ತಂಡದವರನ್ನ ನೇಮಿಸಿದ ಪರಿಣಾಮ ಗಲಾಟೆ ನಡೆದಿರುವುದಾಗಿ ಹೇಳಲಾಗುತ್ತಿದೆ.‌ ಗಲಾಟೆಯಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯವಾಗಿದ್ದು, 


ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರ ಮಧ್ಯಪ್ರವೇಶಿಸಿ ಗಣಪತಿಯನ್ನ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅರಬಿಳಚಿ ಕ್ಯಾಂಪ್‌ನಲ್ಲಿ ಎರಡು ಗಣಪತಿ ಪೆಂಡಾಲ್‌ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ 6 ಮಂದಿಗೆ ಗಾಯವಾಗಿದೆ. 


ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಬಿಳಚಿ ಕ್ಯಾಂಪಿನ ಬೋವಿ ಕಾಲೋನಿ ಹಾಗು ತಮಿಳು ಕಾಲೋನಿಯಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆದಿದೆ. ಗಣಪತಿ ಪ್ರತಿಷ್ಠಾಪನೆ ಮೆರವಣಿಗೆಗೆ ಎರಡು ಕಡೆಯಿಂದ ಒಂದೇ ತಂಡದವರಿಂದ ಡೊಳ್ಳು ಬಾರಿಸಲು ಮಾತುಕತೆ ನಡೆದಿತ್ತು. ಎರಡು ಸಮುದಾಯದವರಿಂದ ಒಂದೇ ಸಮಯಕ್ಕೆ  ಮೆರವಣಿಗೆ ಹೊರಟಿತ್ತು. 


ನಮ್ಮ ಗಣಪತಿ ಮೆರವಣಿಗೆಗೆ ಡೊಳ್ಳು ಬಾರಿಸು ಎಂದು ಎರಡು ಗುಂಪಿನ ನಡುವೆ ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ