ಸ್ವಚ್ಛಂಧದಿಂದ ಓಡಾಡಿದ ಕರಡಿ




ಸುದ್ದಿಲೈವ್/ಶಿವಮೊಗ್ಗ


ಬಾಣೆಲೆಯಿಂದ ಬೆಂಕಿಗೆ ಬಿದ್ದ ಎಂಬ ಗಾದೆ ಸ್ವಲ್ಪ ಸಂಕಷ್ಟವನ್ನ ತೋರುವ ಸಂಕೇತವಾಗಿದೆ. ಮೊದಲೇ ಕಷ್ಟದಲ್ಲಿರುವ ವ್ಯಕ್ತಿಗೆ ಇನ್ನಷ್ಟು ತೊಂದರೆ ಎದುರಾದಾಗ ಈ ಗಾದೆ ಮಾತು ಹೇಳಲಾಗುತ್ತದೆ. ಆದರೆ ಶಿವಮೊಗ್ಗ ಲಯನ್ ಸಫಾರಿಯಲ್ಲಿ ಕರಡಿಗೆ ಬೋನಿಙದ ಬಯಲಿಗೆ ಬಿಡಲಾಗಿದೆ. 


ಇಲ್ಲಿ ಬಾಣಲೆಯಂತಿದ್ದ ಬೋನಿನಲ್ಲಿದ್ದ ಕರಡಿಗಳಿಗೆ ಬಯಲಿನಂತಿರವ ವಿಶಾಲವಾದ ಜಾಗ ದೊರೆತಿದೆ. ಇಕ್ಕಟ್ಟಿನ ಜಾಗದಲ್ಲಿದ್ದ ಜಾಂಭವಂತನಿಗೆ ಬಯಲಿನಲ್ಲಿ ಬಿಡಲಾಗಿರುವ ಘಟನೆ ಇಂದು ಲಯನ್ ಸಫಾರಿಯಲ್ಲಿ ನಡೆದಿದೆ. 


ರಾಣಿ, ರ‌್ಯಾಂಬೋ, ಗಾಯಿತ್ರಿ, ಗಜೇಂದ್ರ ಎಂಬ ಸಫಾರಿಯಲ್ಲಿರುವ ಕರಡಿಗಳಿಗೆ ಬೋನಿನಿಂದ ಬಯಲಿಗೆ ಬಿಡಲಾಗಿದೆ. ಬಯಲು ಕಂಡಾಕ್ಷಣವೇ ಕರಡಿಗಳ ಆಟ ಹೇಳತೀರದು. ಹೊಸ ಗೃಹಪ್ತವೇಶದ ವೇಳೆ ಕರಡಿಯ ಸ್ವಚ್ಛಂಧನೆಯ ಓಡಾಟ ಶುರುವಾಗಿದೆ. 


2800 ಸ್ಕಯರ್ ಮೀಟರ್ ಅಳತೆಯ ಮೊದಲಿಗೆ ಎರಡು ಕರಡಿಗಳು ಅಲ್ಲಿರುವ ಹುತ್ತವನ್ನ ಒಡೆದುಹಾಕಿದೆ. ನೆಲವನ್ನ ಕೆರದು ಹಾಕಿದೆ. ನೀರಿನ ತೊಟ್ಟಿಗೆ ಇಳಿದು ಕುಣಿದಾಡಿವೆ.‌ ಇದನ್ನ ನೂರಾರು ಪ್ರೇಕ್ಷಕರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು