ಶಿಕ್ಷಕರನ ವಿರುದ್ಧ ಎಫ್ಐಆರ್ ಮತ್ತು ಅಮಾನತ್ತುಗೆ ಆಗ್ರಹಿಸಿ ಎಬಿವಿಪಿ ದಿಡೀರ್ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ

ನಗರದ ಪ್ರತಿಷ್ಠಿತ ಎನ್‌ಇಎಸ್‌ನ ಪಿಯು ಕಾಲೇಜಿನ ಎದುರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಿಡೀರನೇ ಪ್ರತಿಭಟನೆ ನಡೆಸಿದೆ. ಶಿಕ್ಷಕರೋರ್ವರ ಅಮಾನತ್ತಿಗೆ ಬೇಡಿಕೆ ಮುಂದಿಟ್ಟುಕೊಂಡು ಕಾಲೇಜಿನ ಮುಂಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಲಾಗಿದೆ. 

ಕಾಲೇಜಿನ ಶಿಕ್ಷಕರೋರ್ವರು ಅನುಚಿತ ವರ್ತನೆ ಮತ್ತು ಸಭ್ಯವಲ್ಲದ ಮಾತುಗಳಿಂದ ಮಾನಸಿಕವಾಗಿ ಮತ್ತು ಲೈಂಗಿಕ ಹಿಂಸೆಗಳನ್ನ ನೀಡುತ್ತಿರುವುದನ್ನ ಖಂಡಿಸಿ ಸಂಘಟನೆಯು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಗೆ ಇಳಿದಿದೆ. 

ಕಾಲೇಜಿನ  ಶಿಕ್ಷಕನ ಅಸಭ್ಯ ವರ್ತನೆಯಿಂದ ಬೇಸತ್ತು ಮಕ್ಕಳ ಸಹಾಯವಾಣಿಗೆ ದೂರು ನೀಡಲಾಗಿತ್ತು. ಪೊಲೀಸರು ಕಾಲೇಜಿಗೆ ಭೇಟಿ ನೀಡಿ ನಂತರ ಪ್ರಾಂಶುಪಾಲರಿಗೆ ನೋಟೀಸ್ ನೀಡಲಾಗಿತ್ತು. ಇದಾಗಿ 15 ದಿನಗಳಾದರೂ ಪ್ರಾಂಶುಪಾಲರು, ಎನ್ ಇಎಸ್ ಆಡಳಿತ ಮಂಡಳಿ ಯಾವುದೇ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಪ್ರತಿಭಟಿಸಲಾಗಿದೆ. 


ಶಿಕ್ಷಕನನ್ನ ಕಾಲೇಜಿನಿಂದ ಅಮಾನತುಗೊಳಿಸಬೇಕು ಮತ್ತುಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ. ಪ್ರತಿಭಟನೆಗೂ ಮುನ್ನ ಮಾತನಾಡಿದ ಎನ್‌ಇಎಸ್‌ನ ಕಾರ್ಯದರ್ಶಿ ನಾಗರಾಜ್ ಮಾತನಾಡಿ ಆರೋಪ ಬಂದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ತನಕ ಆರೋಪಿತ ಶಿಕ್ಷಕ ಕಾಲೇಜಿಗೆ ಬರೊಲ್ಲ,  ಕಾನುನಾತ್ಮಕವಾಗಿ ಸರಿಮಾಡೋಣ, ಯಾರನ್ನೂ ರಕ್ಷಿಸೊಲ್ಲ. ಕಾನೂನು ಬಿಟ್ಟು ಕ್ರಮ ಕೈಗೊಳ್ಳಲ್ಲ ಯಾರ ಮೇಲೆ ಆಪಾದನೆ ಬಂದಾಗ ಅದನ್ನ  ನಡೆದಾಗ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close