Girl in a jacket

ಕಾಂಗ್ರೆಸ್ ಸರ್ಕಾರವನ್ನ ತೊಘಲಕ್ ಸರ್ಕಾರವೆಂದಿದ್ದೇಕೆ ಸಂಸದ ರಾಘವೇಂದ್ರ?


ಸುದ್ದಿಲೈವ್/ಶಿವಮೊಗ್ಗ

25% ಉರ್ದು ಭಾಷಿಗರು ಹೆಚ್ಚಿರುವ ಜಾಗದಲ್ಲಿ ಅಂಗನವಾಡಿ ಕಾರ್ಯಕರ್ತರು ಉರ್ದು ಭಾಷೆ ಕಲಿತಿರಬೇಕೆಂಬ ಸರ್ಕಾರದ ಆದೇಶದ ವಿರುದ್ಧ ಸಂಸದ ರಾಘವೇಂದ್ರ ಕೆಂಡಮಂಡಲಗೊಂಡಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತರಾಗಲು ಬಯಸುವವರಿಗೆ ಈ ಆದೇಶ ಹೊರಡಿಸಿರುವ ಕಾಂಗ್ರೆಸ್ ಸರ್ಕಾರ ತೊಘಲಕ್ ಸರ್ಕಾರವಾಗಿದೆ ಎಂದು ಆರೋಪಿಸಿದರು. 

ಕರ್ನಾಟಕದಲ್ಲಿ ಕನ್ನಡ ಭಾಷೆ ಇದ್ದಾಗಲೂ ಸಹ ಉರ್ದು ಭಾಷೆಯನ್ನ ಕಡ್ಡಾಯಗೊಳಿಸಲು ಹೊರಟಿರುವ ರಾಜ್ಯ ಸರ್ಕಾರ ಉರ್ದು ಭಾಷಿಗರ ತುಷ್ಠೀಕರಣಗೊಳಿಸಲು ಮುಂದಾಗಿರುವುದು ಎಷ್ಟು ಸರಿ? ರಾಷ್ಟ್ರೀಯ ಭಾಷೆ ಹಿಂದಿ ಭಾಷೆಯನ್ನ ಪರ್ಯಾಯವಾಗಿ ತಂದಾಗ ಇದೇ ಕಾಂಗ್ರೆಸ್ ಆಕ್ಷೇಪಿಸಿತ್ತು. 

ಇಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ನಾಳೆ ಇದೇ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಈ ಆದೇಶ ತಂದು ಉರ್ದು ಕಲಿಯಲು ಪ್ರೋತ್ಸಹಿಸಲು ಸರ್ಕಾರ ಹೊರಟಿದೆ. ಮುಸ್ಲೀಮರ ಮತದಾರರನ್ನ ಸೆಳೆಯಲು ತುಷ್ಠೀಕರಣ ಮಾಡಲು ಹೊರಟಿದೆ ಎಂದು ಸಂಸದರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು