ಸುದ್ದಿಲೈವ್/ಶಿವಮೊಗ್ಗ
ಸಾಲಬಾದೆಗೆ ಬೆದರಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯ ದ್ಯಾವಿನಕೆರೆಯಲ್ಲಿ ನಡೆದಿದೆ.
ತಿಮ್ಮರಾಜು ಎಂಬ 50 ವರ್ಷದ ರೈತ ದ್ಯಾವಿನಕೆರೆಯ ಸರ್ವೆ ನಂ 83 ರಲ್ಲಿ ಎರಡು ಎಕರೆ ಜಮೀನು ಹೊಂದಿದ್ದರು. ಅರ್ಧ ಅಡಿಕೆ ಅರ್ಧ ಜೋಳ ಬೆಳೆದಿದ್ದರು. ಕಳೆದ ವರ್ಷ ಜೋಳ ಬೆಳೆದರೂ ಮೂರು ಬೋರು ಕೈಕೊಟ್ಟ ಪರಿಣಾಮ ಬೆಳೆ ನಾಶವಾಗಿತ್ತು.
ಹೊಸ ಬೋರು ಕೊರೆಯಿಸಲು ಮತ್ತು ಬೆಳೆ ಸಾಲವಾಗಿ ಡಿಸಿಸಿ ಬ್ಯಾಂಕ್ ನಲ್ಲಿ 2,20,000 ಸಾವಿರ ರೂ. ಹಣವನ್ನ ಸಾಲ ಮಾಡಿದ್ದರು. ಈ ವರ್ಷವೂ ಅತಿವೃಷ್ಠಿಯಿಂದಾಗಿ ಜೋಳ ಕೈಕೊಟ್ಟಿದೆ. ಈ ವಿಷಯವಾಗಿ ತಿಮ್ಮರಾಜು ಮಗನ ಬಳಿ ಹೇಳಿಕೊಂಡಿದ್ದರು.
ಮಗನೂ ಸಹ ಹೇಗಾದರೂ ಸಾಲ ತೀರಿಸೋಣ ಅದರ ಬಗ್ಗೆ ಚಿಂತಿಸ ಬೇಡಿ ಎಂದು ಧೈರ್ಯ ನೀಡುದ್ದರು. ನಿನ್ನೆ ಜಮೀನಿಗೆ ಹೋಗಿಬರುವುದಾಗಿ ಹೇಳಿ ಹೊಲದ ಕಡೆಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಬಾರದ ತಿಮ್ಮರಾಜುವಿಗೆ ಮಗಳು ಕರೆ ಮಾಡಿದಾಗ ತೊದಲು ಮಾತನಾಡಿದ್ದಾರೆ.
ಎಲ್ಲಿದ್ದೀರ ಎಂದಾಗ ತೋಟದಲ್ಲಿ ಇರುವುದಾಗಿ ಹೇಳಿದ್ದರು. ತಕ್ಷಣ ಮಗಳು ಅಳಿಯ ಸ್ಥಳಕ್ಕೆ ಧಾವಿಸಿದ್ದಾರೆ. ಮಲಗಿಕೊಂಡು ವಾಂತಿ ಮಾಡುತ್ತಿದ್ದ ತಿಮ್ಮರಾಜುವರನ್ನ ತಕ್ಷಣವೇ ಮೆಗ್ಗಾನ್ ಗೆ ಕರೆತರಲಾಗಿತ್ತು. ನಿನ್ನೆ ಮಧ್ಯಾಹ್ನದಿಂದ ಸಂಜೆಯವರೆಗೆ ಈ ಘಟನೆ ಸಂಭವಿಸಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮರಾಜು (50) ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಪ್ರಕರಣ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.