ಭಾನುವಾರ, ಸೆಪ್ಟೆಂಬರ್ 8, 2024

ಅರಬಿಳಚಿಯ ಅಷ್ಟು ಗಣಪತಿ ವಿಸರ್ಜನೆ

.            ಅರೆಬಿಳಚಿಯಲ್ಲಿ ಪೊಲೀಸರ ಸರ್ಪಗಾವಲು


ಸುದ್ದಿಲೈವ್/ಭದ್ರಾವತಿ


ಅರಬಿಳಚಿ ಕ್ಯಾಂಪ್‌ನಲ್ಲಿ  ಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿ ಡೊಳ್ಳು ಬಾರಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಅಷ್ಟು ಗಣಪತಿಯನ್ನ ಪೊಲೀಸ್ ಭದ್ರತೆಯಲ್ಲಿ ವಿಸರ್ಜಿಸಲಾಗಿದೆ


ಗಲಾಟೆಯನ್ನು ಬಿಡಿಸಲು ಹೋದ ಪೋಲೀಸರ ಮೇಲೆಯೂ ಹಲ್ಲೆ ನಡೆದಿದ್ದು ನಾಗರಾಜ್ ಮತ್ತು ವಿಶ್ವ ಎಂಬ ಇಬ್ಬರು ಪೋಲೀಸರಿಗೆ ಬಹಳ ಏಟು ಬಿದ್ದಿದೆ.  ಗಂಭೀರ ಸ್ವರೂಪದ ಗಾಯಗಳಾಗಿವೆ. ಜೊತೆಗೆ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ದಿ.ಅಣ್ಣಾಮಲೈ ಮಗ ಅರ್ಜುನ್‌ಗೂ ಏಟುಗಳ ಬಿದ್ದಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. 


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ಎ.ಜೆ.ಕಾರಿಯಪ್ಪ, ಹೊಳೆಹೊನ್ನೂರು ಠಾಣೆಯ ಪೋಲೀಸ್ ಇನ್ಸ್ಪೆಕ್ಟರ್ ಆರ್.ಎಲ್.ಲಕ್ಷ್ಮೀಪತಿ ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಗಲಭೆಯನ್ನು ಹತೋಟಿಗೆ ತಂದರು. ಈಗಾಗಲೇ ಠಾಣೆಯಲ್ಲಿ 3 ಕೇಸ್ ದಾಖಲಾಗಿದ್ದು, ಈ ಸಂಬಂದ 22 ಜನರನ್ನು ರಾತ್ರಿಯೇ ಬಂದಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದೆ. 


ಶನಿವಾರ ರಾತ್ರಿ ಎರಡು ಗುಂಪುಗಳು ನಡುವೆ ಘರ್ಷಣೆ ನಡೆದು ಹಲವರಿಗೆ ಗಾಯಗಳಾಗಿದ್ದರಿಂದ, ಎಎಸ್‌ಪಿ ನೇತೃತ್ವದಲ್ಲಿ ಗ್ರಾಮದ 12 ಗಣಪತಿ ಮೂರ್ತಿಗಳನ್ನು ಶನಿವಾರ ರಾತ್ರಿಯೇ ವಿಸರ್ಜನೆ ಮಾಡಲಾಯಿತು. ಅರಬಿಳಚಿ ಕ್ಯಾಂಪ್‌ನಲ್ಲಿ ಗಣಪತಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲು ನಟೇಶ್ ಕ್ಯಾಂಪ್‌ನ ಎಡಿ ಕಾಲೋನಿಯ ಯುವಕರು ಮತ್ತು ಭೋವಿ ಕಾಲೋನಿ ಸರ್ಕಲ್ ಗಣಪತಿ ಯುವಕ ಸಂಘದ ಯುವಕರು ಡೊಳ್ಳು ಬಾರಿಸುವವರಿಗೆ ಹೇಳುದ್ದರು. 


ಈ ಡೋಳ್ಳು ಬಾರಿಸುವವರನ್ನು ಎಡಿ ಕಾಲೋನಿಯ ಯುವಕರು ಕರೆಯಲು ಹೋದಾಗ ಮಾತಿಗೆ ಮಾತು ಬೆಳೆದು ಗಲಭೆ ಆರಂಭವಾಯಿತು ಎಂದು ಸ್ಥಳದಲ್ಲಿದ್ದ ಪೋಲೀಸರಿಂದ ತಿಳಿದಿದೆ.‌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ