ಕೆಟ್ಟ ಮೇಲ್ಪಂಕ್ತಿ ಹಾಕುವುದನ್ನ ನಿಲ್ಲಿಸಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ-ಈಶ್ವರಪ್ಪ


ಸುದ್ದಿಲೈವ್/ಶಿವಮೊಗ್ಗ


ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ಸಚಿವ ಜಾರ್ಜ್ ಮೇಲೆ ಆರೋಪ ಕೇಳಿ ಬಂದಿತ್ತು. ಆ ವೇಳೆ ಜಾರ್ಜ್ ರಾಜೀನಾಮೆ ನೀಡಿದ್ದರು.  ನಾನು ಸಹ ಆಪಾದನೆ ಬಂದಾಗ ರಾಜೀನಾಮೆ ನೀಡಿದ್ದೆ. ಆದರೆ ಸಿಎಂ ಆಗಿರುವ ಸಿದ್ದರಾಮಯ್ಯನವರ ಮೇಲೆ ಆರೋಪ ಬಂದರೂ ರಾಜೀನಾಮೆ ನೀಡಿಲ್ಲ. ನನಗೆ ಮತ್ತು ಜಾರ್ಜ್ ಗೆ  ಒಂದು ಕಾನೂನು,  ಸಿದ್ದರಾಮಯ್ಯನವರಿಗೆ ಒಂದು ಕಾನೂನು ಇದೆಯಾ ಎಂದು ಮಾಜಿ ಡಿಸಿಎಂ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಐದು ವರ್ಷ ಪೂರ್ಣ ಮಾಡಲ್ಲ,  ಮಧ್ಯಾಂತರ ಚುನಾವಣೆ ಬರಲಿದೆ ಎಂಬ ಭವಿಷ್ಯವಿದೆ. ಆಪಾದನೆ ಬಂದಾಗ್ಯೂ ಕೂಡ ರಾಜೀನಾಮೆ ನೀಡದೆ ಕೆಟ್ಟ ಮೇಲ್ಫಂಕ್ತಿಯವನ್ನ ಸಿಎಂ ಸಿದ್ದರಾಮಯ್ಯ ಹಾಕಿದ್ದಾರೆ. ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ನೀಡಿದರೆ ರಾಜೀನಾಮೆ ನೀಡಬೇಕಾಗುತ್ತದೆ. ಅದನ್ನೇ ಮೊದಲು ಮಾಡಿ  ಸಿದ್ದರಾಮಯ್ಯನವರು ದೊಡ್ಡತನ ತೋರಬೇಕಿತ್ತು ಎಂದು ಗುಡುಗಿದರು‌ 


ಸಿದ್ದರಾಮಯ್ಯನವರು ಆರೋಪ ಮುಕ್ತರಾಗಿ ಹೊರಬರಲಿ. ಹಾಗೆ ಆಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆನು. ಕೋರ್ಟ್ ಏನೇ ತೀರ್ಪು ನೀಡಿದರೂ ರಾಜೀನಾಮೆ ನೀಡಲ್ಲ ಎಂದು ಹೇಳಬಾರದು. ಅದು ಸಹ ಕೆಟ್ಟ ಮೇಲ್ಫಂಕ್ತಿ ಹಾಕಬಾರದು ಎಂದು ಸಲಹೆ ನೀಡಿದರು‌.


ಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಕಾಂಗ್ರೆಸ್ ನಲ್ಲಿ ಹೈಕಮಾಂಡ್ ಬದುಕಿದ್ದಿಯೋ ಸತ್ತಿದ್ದೀಯೋ ಗೊತ್ತಿಲ್ಲ. ಎಲ್ಲರೂ ಸಿಎಂ ಆಕಾಂಕ್ಷಿ ಆಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು ಸಿಎಂ ಮತ್ತು ನಗರಾಭಿವೃಧಧಿ ಸಚಿವರು ಎಲ್ಲಾ ನಗರಾಭಿವೃಧ್ಧಿ ಪ್ರಾಧಿಕಾರದ ಬಗ್ಗೆ  ತನಿಕೆ ಆಗಬೇಕು ಎಂದು ಒತ್ತಾಯಿಸಿದರು. 


ಸಿಎಂ ಸಿದ್ದರಾಮಯ್ಯ ಕುಂಕುಮ ಹಾಕುತ್ತಿರಲಿಲ್ಲ. ಕೇಸರಿ ಪೇಟೆ ಹಾಕಲು ಬಂದಾಗ ಕಿತ್ತು ಹೊಗಾಯಿಸಿದ ಘಟನೆ ನಡೆದಿತ್ತು. ಈಗ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ. ದೇವರು ಅವರನ್ನ ಕಾಪಾಡಲಿ, ಮುಸ್ಲೀಂರನ್ನ ಒಲಿಸಲು ಕೃತಕವಾಗಿ ನಡೆದುಕೊಳ್ಳುವುದು ಬೇಡ. ನಿಮ್ಮಲ್ಲೂ ಹಿಂದೂತ್ವ ಮತ್ತು ದೈವಭಕ್ತಿ ಇದೆ. ಅದನ್ನ ಇಲ್ಲ ಎಂಬುವರೀತಿ ನಾಟಕ ಆಡಬೇಡಿ  ಎಂದು ಎಚ್ಚರಿಸಿದರು. 


ಕುಂದಾಪುರದ ಉಪನ್ಯಾಸಕ ರಾಧಕೃಷ್ಣರಿಗೆ ಅತ್ಯುತ್ತಮ ಉಪನ್ಯಾಸಕ ಎಂಬ ಪ್ರಶಸ್ತಿ ಲಭಿಸಿತ್ತು.‌ ಹಿಜಾಬ್ ವೇಳೆ ಅವಕಾಶ ನೀಡದ ಪ್ರಿನ್ಸಿಪಾಲ್ ಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಎಸ್‌ಡಿಪಿಐಯವರು ಆಕ್ಷೇಪಿಸಿದ್ದಕ್ಕೆ ಪ್ರಶಸ್ತಿ ತಡೆಯಲಾಗಿದೆ. ಇದನ್ನ ಸಚಿವ ಮಧು ಬಂಗಾರಪ್ಪ ರದ್ದು ಮಾಡಿಲ್ಲ ತಡೆಹಿಡಿದಿದ್ದೇವೆ ಎಂದಿದ್ದಾರೆ. ತಕ್ಷಣ ಪ್ರಶಸ್ತಿ ನೀಡಿ ಗೌರವ ನೀಡಬೇಕು ಎಂದು ಬುದ್ದಿವಾದ ನುಡಿದರು. 


ಗಣಪತಿ ಪ್ರಸಾದ ವಿತರಣೆ ವೇಳೆ ಫುಡ್ ಡಿಪಾರ್ಟ್ ಮೆಂಟ್ ತಪಾಸಾಣೆ ಮಾಡಲಿ ಎಂದು ಆದೇಶ ಆಗಿದೆ ಎಂಬ ಆದೇಶ ಹೊರಡಿಸಿದ್ದಾರೆ. ಈ ಸರ್ಕಾರಕ್ಕೆ  ತಲೆ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ ಕೇವಲ ಹಿಂದೂ ಪರ  ಮುಸ್ಲೀಂ ಪರ ಇರಿ ಎನ್ನಲ್ಲ ನ್ಯಾಯದ ಪರ ಮಾತನಾಡಿ.  ಮುಸ್ಲೀಂ ಸಂತೃಪ್ತಿ ಪಡಿಸಲು ನಾಟಕ ಆಡಬೇಡಿ ಎಂದು ಎಚ್ಚರಿಸಿದರು. 


ಹುಬ್ಬಳ್ಳಿಯಲ್ಲಿ ಸೆ.12 ರಂದು ಗಣಪತಿ ಮಹಾಮಂಡಳಿಯಿಂದ ನನಗೂ ಮತ್ತು ಶಾಸಕ ಯತ್ನಾಳ್ ಅವರಿಗೆ ಸನ್ಮಾನ ಮಾಡಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close