ಕಾಡಾನೆ ದಾಳಿ


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಸತತ 2ನೇ ದಿನವೂ ಪುರದಾಳು ಗ್ರಾಮದಲ್ಲಿ ಕಾಡಾನೆಗಳ ದಾಳಿ ನಡೆದಿದೆ. ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದ ಬೇಳೂರಿನಲ್ಲಿ ಕಾಡಾನೆ ದಾಳಿ ನಡೆದಿದೆ. 

ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿವೆ. ಮೈಲಾರ್ ರವಿ ಎಂಬುವರ ತೋಟಕ್ಕೆ ದಾಳಿ ಮಾಡಿವೆ. ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿವೆ. ಆನೆ ದಾಳಿಯಿಂದ  ತೋಟದಲ್ಲಿ ವಾಸವಿದ್ದ ಕೃಷ್ಣಪ್ಪ ಎಂಬುವರ ಕುಟುಂಬ ಭಯಭೀತಗೊಂಡಿದೆ. 

ಕಾಡಾನೆ ಸತತ ದಾಳಿಯಿಂದಾಗಿ ಪುರದಾಳು ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಆನೆಗಳ ದಾಳಿ ತಡೆಗೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ. ಎರಡು ದಿನಗಳಿಂದ ದಾಳಿ ನಡೆದರೂ ಅರಣ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದಾಗಿ ಆರೋಪಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close