ಸುದ್ದಿಲೈವ್/ಶಿವಮೊಗ್ಗ
ಪಕ್ಷದ ಹಿರಿಯ ಮುಖಂಡರನ್ನ ಗಣನೆಗೆ ತೆಗೆದುಕೊಳ್ಳಲ್ಲ ಎಂಬ ಆರೋಪವನ್ನ ನಾನು ಒಪ್ಪುವುದಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಂದು ಪ್ರಧಾನಿ ಮೋದಿಯವರ ಜನ್ಮದಿನ, ಮೋದಿ ಸರ್ಕಾರದ 100 ನೇ ದಿನ ಪುರೈಸಿದ ಹಿನ್ನಲೆಯಲ್ಲಿ ರಾಜಕೀಯ ಮಾತು ಬೇಡ ಎಂಬ ಮಾತನಾಡಿದ
ನಿಮ್ಮ ಪಕ್ಷದಲ್ಲಿಯೇ ನಿಮ್ಮವಿರುದ್ಧ ಆಕ್ಷೇಪಗಳಿವೆ ಎಂಬ ಮಾಧ್ಯಮದ ಪ್ರಶ್ನೆಗೆ ಕ್ಯಾಮೆರಾ ಆಫ್ ಮಾಡಿದರೆ ಮಾತನಾಡುತ್ತೇನೆ ಎಂದು ಹಾಸ್ಯವಾಗಿಯೇ ಮಾತನಾಡಿದರು. ನನ್ನ ವಿರುದ್ಧ ಅನೇಕ ನಾಯಕರು ಮಾತನಾಡಿದ್ದಾರೆ. ಪಕ್ಷದ ಹಿತದೃಷ್ಠಿಯಿಂದ ಎಲ್ಲವನ್ನೂ ನುಂಗಿಕೊಂಡಿದ್ದೇನೆ.
ನನ್ನ ಮುಂದೆ ಇರುವ ಗುರಿ ಏನೆಂದರೆ ಬಿಜೆಪಿಯನ್ನ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವಂತಹದ್ದಾಗಿದೆ. ಪಕ್ಷದ ಹೈಕಮಾಂಡ್ ನನಗೆ ಪಕ್ಷವನ್ನಮುನ್ನಡೆಸುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ ಜವಬ್ದಾರಿಯನ್ನ ನೀಡಿದ್ದಾರೆ. ಪಕ್ಷದ ಜವಬ್ದಾರಿಯನ್ನ ಸರಿಯಾಗಿ ನಿರ್ವಹಿಸುತ್ತೇನೆ ಎಂದರು.
ಜವಬ್ದಾರಿ ನೀಡಿದ್ದಕ್ಕೆ ವಿರೋಧನಾ ಎಂಬ ಪ್ರಶ್ನೆಗೆ ಸೂಕ್ತ ಉತ್ತರವನ್ನ ಮುಂದಿನ ದಿನಗಳಲ್ಲಿ ನೀಡುವೆ ಎಂದ ರಾಜ್ಯಾಧ್ಯಕ್ಷರಿಗೆ ನಿನ್ನೆ ಭೀಮೇಶ್ವರ ದೇವಸ್ಥಾನದಲ್ಲಿ ಹಿರಿಯರ ಜೊತೆ ಕುಳಿತಿದ್ದಾಗ ಹಿರಿಯರು ಏನಾದರೂ ಮಾತನಾಡಿದ್ರ ಎಂಬ ಪ್ರಶ್ನೆಗೆ ಒಂದೇ ಸಾಲಿನಲ್ಲಿ ಉತ್ತರಿಸುವೆ ಎಂದರು.
ಹೋರಾಟಗಾರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಮಗ ಎಂಬ ಹೆಮ್ಮೆಯಿದೆ. ಆದರೆ ಅಹಂಕಾರವಿಲ್ಲ. ಪಕ್ಷದ ಹಿರಿಯರನ್ನ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಮಾತನ್ನ ನಾನು ಒಪ್ಪಲ್ಲ ಎಂದು ಖಂಡ ತುಂಡವಾಗಿ ಹೇಳಿದರು.
ಇಂದು ನಡೆಯುತ್ತಿರುವ ಹಿಙದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿವೈ.ವಿಜೇಂದ್ರ ಹಾವೇರಿಗೆ ತೆರಳುತ್ತಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಶಿವರಾಜ್, ಅಣ್ಣಪ್ಪ ಮಾಲ್ತೇಶ್ ಉಪಸ್ಥಿತರಿದ್ದರು.