ಕೊಳೆತ ಸ್ಥಿಯಲ್ಲಿ ಮಹಿಳೆಯ ಶವಪತ್ತೆ




ಸುದ್ದಿಲೈವ್/ಶಿವಮೊಗ್ಗ


ನಗರದ ಗೋಪಾಳ ಗೌಡ ಬಡಾವಣೆಯ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು ಬಿಎಸ್ ಎಸ್ ಕಾಯ್ದೆ ಪ್ರಕಾರ ಅನುಮಾನಸ್ಪದ ಸಾವು ಎಂದು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 


ಸುಧಾ ಎಂಬ 48 ವರ್ಷದ ಮಹಿಳೆಯೊಬ್ಬಳು ಮನೆಯ ಚಿಲಕ ಹಾಕಿಕೊಂಡು  ಸಾವು ಕಂಡಿದ್ದು, ಶವದ ವಾಸನೆಯಿಂದ ಅಕ್ಕಪಕ್ಕದ ಮನೆಯವರು 112 ಗೆ ತಿಳಿಸಿದ ನಂತರ ಮನೆಯ ಬಾಗಿಲು ಮುರಿದು ನಂತರ ಶವವನ್ನ ಹೊರ ತೆಗೆಯಲಾಗಿದೆ. 


ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸುಧಾರವರು ಮದುವೆಯಾಗಿದ್ದರೂ ಗಂಡನಿಂದ ದೂರ ಉಳಿದು  ಪ್ರತ್ಯೇಕವಾಗಿ ಬದುಕು ಕಟ್ಟಿಕೊಂಡಿದ್ದರು. ಇವರಿಗೆ ಮಗನೊಬ್ಬನಿದ್ದು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾನೆ. 


ತುಂಗನಗರ ಠಾಣೆಯಲ್ಲಿ ಮಹಿಳೆ ಸಾವಿನ ಬಗ್ಗೆ ಅನುಮಾನಸ್ಪದ ಸಾವೆಂದು ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close