ಓಂ ಗಣಪತಿ ಮೆರವಣಿಗೆಗೆ ಚಾಲನೆ, ಜಾನಪದ ಕಲಾತಂಡದೊಂದಿಗೆ ವಿಸರ್ಜನೆಗೊಳ್ಳಲಿರುವ ರಾಮೇನಕೊಪ್ಪದ ಗಣಪ


ಸುದ್ದಿಲೈವ್/ಶಿವಮೊಗ್ಗ

 

ಶಿವಮೊಗ್ಗದ ಪ್ರತಿಷ್ಠಿತ ಗಣಪತಿ ಮೆರವಣಿಗೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಓಂ ಗಣಪತಿಯ ರಾಜಬೀದಿ ಉತ್ಸವಕ್ಕೆ ಚಾಲನೆ ದೊರೆತಿದೆ. ತಹಶೀಲ್ದಾರ್ ಗಿರೀಶ್‌ರಿಂದ ಚಾಲನೆ ದೊರೆತಿದೆ. 


ಅಶೋಕ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಬಿಹೆಚ್ ರಸ್ತೆ, ಕೃಷ್ಣಕೆಫೆಯ ಕೆಳಭಾಗದ ರಸ್ತೆ ಮೂಲಕ ಭೀಮನ ಮಡುವಿನಲ್ಲಿ ಓಂ ಗಣಪತಿ ವಿಸರ್ಜನೆಯಾಗಲಿದೆ. ಗಣಪತಿ ಪ್ರತಿಷ್ಠಾಪನೆಗೊಂಡು 12 ನೇ ದಿನವಾದ ಇಂದು ವಿಸರ್ಜನೆ ಮಾಡಲಾಗುತ್ತಿದೆ. 


ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯನ್ನ ಸ್ಥಗಿತಗೊಳಿಸಿದ ಸಂದರ್ಭದಲ್ಲಿ ಓಂ ಗಣಪತಿ ಮುನ್ನಾಲೆಗೆ ಬಂದಿತ್ತು. 1997 ರಿಂದ 2003 ರವರೆಗೆ ಹಿಂದೂ ಮಹಾಸಭಾ ಗಣಪತಿ ಮೆರವಣೆಗೆಯನ್ನ ಸಮಿತಿಯವರೆ ರದ್ದುಗೊಳಿಸಿದ್ದರು. ಯಾವಾಗ ಮಾಜಿ ಡಿಸಿಎಂ ಈಶ್ವರಪ್ಪನವರಿಗೆ ಬಳೆ ಕುಂಕುಮವನ್ನ ಕಳುಹಿಸಲಾಗುತ್ತದೆಯೋ ಆಗ ಓಂ ಗಣಪತಿ ವಿಸರ್ಜನಾ ಮೆರವಣಿಗೆಯನ್ನ ವಿಜೃಂಭಣೆಯಾಗಿ ಆಚರಿಸಲಾಗಿತ್ತು. 


ಜಾನಪದ ಕಲಾತಂಡದೊಂದಿಗೆ ಹೊರಟ ಗಣಪ


ರಾಮೇನಕೊಪ್ಪ ಗ್ರಾಮದ ಪ್ರಸಿದ್ಧ 35 ನೇ ವರ್ಷ ವಿನಾಯಕ ಗೆಳೆಯರ ಬಳಗದ ಗಣೇಶೋತ್ಸವದ ವಿಸರ್ಜನಾ ಪೂರ್ವ ಮೆರವಣಿಗೆ ಇಂದು ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ‌. 


ರಾಮೇನಕಪ್ಪದ ಮುಖ್ಯಬೀದಿಗಳಿಂದ ಸಂಜೆ 5 ಗಂಟೆಯ ಸುಮಾರಿಗೆ  ಹೊರಡುವ ಗಣಪತಿಯನ್ನ, ತುಂಗ ಬಲದಂಡೆ ಚಾನೆಲ್‌ನಲ್ಲಿ ವಿಸರ್ಜಿಸಲಾಗುತ್ತದೆ ಎಂದು ಸಮಿತಿಯು ತಿಳಿಸಿದೆ



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು