ಬೈಪಾಸ್ ನಲ್ಲಿ ಸೌಹಾರ್ಧತೆ ಮೆರೆದ ಹಿಂದೂಗಳು


ಸುದ್ದಿಲೈವ್/ಶಿವಮೊಗ್ಗ

ಇಂದು ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯ ಸಂಭ್ರಮದ ಮೆರವಣಿಗೆ ನಡೆದಿದೆ. 

ಮೆರವಣಿಗೆಯು ಶಿವಮೊಗ್ಗದ ಗಾಂಧಿ ಬಜಾರ್‌ನ ಸುನ್ನಿ ಜಾಮೀಯ ಮಸೀದಿಯಿಂದ ಹೊರಟಿದೆ. ಗಾಂಧಿ ಬಜಾರ್, ನಾಗಪ್ಪನ ಕೇರಿ ಲಷ್ಕರ್ ಮೊಹಲ್ಲಾದ ಮೂಲಕ ಎಎ ವೃತ್ತ ತಲುಪಲಿದೆ.

ಸೂಳೆಬೈಲಿನಿಂದ ಮೆರವಣಿಗೆಗೆ ಹೊರಟಿದೆ. ಮೆರವಣಿಗೆ ಹೋಗುವಾಗ ಹಿಂದೂ ಬಾಂಧವರಿಂದ ಶರಬತ್ ಹಂಚಿದ್ದಾರೆ. ಸೂಳೆಬೈಲಿನ ದುರ್ಗಮ್ಮನ ದೇವಸ್ಥಾನ ಸಮಿತಿಯು ಈ ವ್ಯವಸ್ಥೆ ಮಾಡಿದೆ. ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯ ಹೇಳುವ ಮೂಲಕ ಸೌಹಾರ್ಧತೆ ಮೆರೆದಿದ್ದಾರೆ. 

ಇಲ್ಲಿನ ಗಣಪತಿ ಮೆರವಣಿಗೆ ಹೊರಟಾಗಲೂ ಸೂಳೆಬೈಲಿನ ಸುನ್ನಿ ಜಾಮಿಯಾ ಮಸೀದಿ ವತಿಯಿಂದ ಮುಸ್ಲಿಂ ಬಾಂಧವರು ಸಿಹಿ ಪಾನಕ ಮತ್ತು ಸ್ವೀಟ್ ವಿತರಣೆ ಮಾಡಿ ಗಣಪತಿಗೆ ಹೂವಿನ ಹಾರವನ್ನು ಹಾಕಲಾಗಿತ್ತು. ಈಗ ಹಿಙದೂ ಬಾಂಧವರು ಸೌಹಾರ್ಧತೆ


ಮೆರೆಯಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close