ಪಿಡಬ್ಲೂಡಿ ಕ್ವಾಟ್ರಸ್ ನ ಕಳ್ಳತನ ಪ್ರಕರಣ ಓರ್ವನ ಬಗ್ಗೆ ಸುಳಿವು




ಸುದ್ದಿಲೈವ್/ಶಿವಮೊಗ್ಗ


ಬಸವನಗುಡಿಯ ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಡಿಸಿ ಪಿಎ ದೀಪಕ್, ಜಡ್ಜ್ ಚಾಲಕ ಪ್ರಕಾಶ್, ರೇಶ್ಮೆ ಇಲಾಖೆಯ ಮುರುಳೀಧರ್, ಎಸ್‌ಡಿಎ ಸಂಧ್ಯ, ವಾಣಿಜ್ಯ ಜಂಟಿಕಚೇರಿಯ ನಂದಿನಿ ಅವರು ಪ್ರತ್ಯೇಕ ದೂರನ್ನ ದಾಖಲಿಸಿದ್ದಾರೆ.



ಈ ಪ್ರಕರಣದಲ್ಲಿ ಓರ್ವನ ಬಗ್ಗೆ ಪೊಲೀಸರಿಗೆ ಪಕ್ಕಾ ಮಾಹಿತಿಯ ಸುಳಿವು ತಿಳಿದು ಬಂದಿದೆ. ಹೊರಗಡೆಯಿಂದ ಬಂದು ಕಳುವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. 


ಮುರುಳೀಧರ್ ಅವರು ಮತ್ತೂರಿಗೆ ಗಣಪತಿ ಹಬ್ಬಕ್ಕೆ ತೆರಳಿದಾಗ ಪಿಡಬ್ಲೂಡಿ ಕ್ವಾಟ್ರಸ್ ನಲ್ಲಿದ್ದ ಮನೆಯ ಲಾಕರ್ ಮುರಿದು ಮನೆಯಲ್ಲಿದ್ದ ಒಟ್ಟು 9.95,000/- ಮೌಲ್ಯದ ಒಟ್ಟು 199 ಗ್ರಾಂ ಚಿನ್ನಾಭರಣ ಕಳುವಾಗಿದೆ. ಡಿಸಿ ಪಿಎ ದೀಪಕ್ ಅವರ ಮನೆಯಲ್ಲಿ 69 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು ಸೇರಿ ಒಟ್ಟು 4,12000 ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಳುವಾಗಿದೆ. 


ವಾಣಿಜ್ಯ ಇಲಾಖೆಯ ನಂದಿನಿಯವರು ಅಜ್ಜಂಪುರದಲ್ಲಿರುವ ಅಣ್ಣನ ಮನೆಗೆ ಹಬ್ಬಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ  22 ಗ್ರಾಂ ಚಿನ್ನಾಭರಣ, 46 ಗ್ರಾಂ ಬೆಳ್ಳಿ,  ಒಂದು ಟೈಟಾನ್ ವಾಚ್ ಸೇರಿದಂತೆ ಒಟ್ಟು 1,02,400 ರೂ ಮೌಲ್ಯದ ವಸ್ತುಗಳು ಕಳುವಾಗಿದೆ. 


ಎಸ್ ಡಿಎ ಸಂಧ್ಯರವರು ಶಿವಮೊಗ್ಗದಲ್ಲಿರುವ ಅಣ್ಣನ ಮನೆಗೆ ಹಬ್ಬಕ್ಕೆ ತೆರಳಿದಾಗ 1,15000/- ರೂ. ನಗದು, 300 ಗ್ರಾಂ ಬೆಳ್ಳಿದೀಪ,  ತಲಾ 100 ಗ್ರಾಂನ 3 ಬೆಳ್ಳಿ ಕಾಯಿನ್ ಕಳುವಾಗಿದೆ. ಎಲ್ಲಾ ಪ್ರಕರಣಗಳಲ್ಲಿ ಮನೆಯ ಇಂಟರ್ ಲಾಕರ್ ಒಡೆದು ಕಳ್ಳತನ ಮಾಡಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close