ಸುದ್ದಿಲೈವ್/ಶಿವಮೊಗ್ಗ
15 ದಿನಗಳ ಕೆಳಗೆ ಹುಬ್ಬಳ್ಳಿಯಲ್ಲಿ ಗಜಾನನ ಮಿತ್ರ ಮಂಡಳಿ ಯತ್ನಾಳ್ ಮತ್ತು ನನಗೆ ಸಂಗೊಳ್ಳಿ ರಾಯಣ್ಣ ಖಡ್ಗಕೊಟ್ಟು ಸನ್ಮಾನ ಮಾಡಿದ್ದರು. ಅದರ ಫಲಿತಾಂಶವೇ ಆರ್ ಸಿಬಿ ಹುಟ್ಟಿಗೆ ಕಾರಣ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಶಿವಮೊಗ್ಗದಲ್ಲಿ ಪುನರುಚ್ಚರಿಸಿದ್ದಾರೆ
ವಿನೋಬ ನಗರದಲ್ಲಿರುವ ಮೃತ ಚಂದ್ರಶೇಖರ್ ಅವರ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ಕುರಿತು ಚಂದ್ರಶೇಖರನ್ ಪತ್ನಿ ಕವಿತಾರಿಗೆ ವಿಷಯ ತಿಳಿಸಿ ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಜಮಖಂಡಿಯ ಜಕನೂರಿನಲ್ಲಿ ವಿಶೇಷ ಸಭೆ ನಡೆದಿತ್ತು ಅಲ್ಲಿ ಯತ್ನಾಳ್ ಮತ್ತು ನನ್ನ ಉಪಸ್ಥಿತಿ ಆಕಸ್ಮಿಕವಾಗಿತ್ತು. ಯತ್ನಾಳ್ ನನ್ನ ಕುರಿತು ಮಾತನಾಡಿ ಈಶ್ವರಪ್ಪನವರಿಗೆ ಅನ್ಯಾಯವಾಗಿದೆ. ಅವರನ್ನ ಪಕ್ಷಕ್ಕೆ ತಂದು ಸಿಎಂ ಮಾಡುವುದಾಗಿ ಯತ್ನಾಳ್ ಹೇಳಿದರು.
ಇದೇ ವೇಳೆ ಜಯಮೃತ್ಯುಂಜಯ ಸ್ವಾಮಿಗಳು ರಾಯಣ್ಣ ಮತ್ತು ಚನ್ನಮ್ಮಳ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಯಾಕೆ ಸಂಘಟನೆ ಮಾಡಬಾರದು ಎಂದು ಹೇಳಿದ್ದರು ಅದರ ಫಲಿತಾಂಶವೇ ಆರ್ ಸಿ ಬಿ(ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡು ಮೂರು ತಿಂಗಳಾದರೂ ಪರಿಹಾರವಿರಲಿಲ್ಲ. ಈಗ ನಿಗಮದ ಎಂಡಿ ಅವರು ಕರೆ ಮಾಡಿ ನಾಳೆ ಬೆಂಗಳೂರಿಗೆ ಬಂದು ಚೆಕ್ ತೆಗೆದುಕೊಂಡು ಹೋಗಲು ಹೇಳಿದ್ದಾರೆ. ಅಟ್ರಾಸಿಟಿ ಹಣವೂ ಕೊಡಲು ಸಿದ್ದರಿದ್ದರು.
ಇದರ ಬಗ್ಗೆ ರಾಷ್ಟ್ರಭಕ್ತ ಬಳಗ ಹೋರಾಟ ನಡೆಸಿತ್ತು ಪರಿಹಾರ ದೊರೆತಿದೆ. ಉದ್ಯೋಗ ಮತ್ತು ಪೆನ್ಷನ್ ಹಣ ಬಾಕಿ ಉಳಿದಿದೆ. ಅದರ ಬಗ್ಗೆಯೂ ಮುಂದಿನದಿನಗಳಲ್ಲಿ ಹೋರಾಡುವುದು ಎಂದರು.