ಪಾಕ್ ಹಾಗೂ ಪ್ಯಾಲೆಸ್ತೇನಿಪರ ಮನಸ್ಥಿತಿಯ ಬಗ್ಗೆ ಮುಸ್ಲೀ ಸಮುದಾಯ ಯೋಚಿಸಲಿ

 



ಸುದ್ದಿಲೈವ್/ಶಿವಮೊಗ್ಗ


ನಿನ್ನೆ ನಡೆದ 80 ನೇ ವರ್ಷದ ಗಣೇಶೋತ್ಸವ ನೆನಪಿನಲ್ಲಿಡುವಂತಹ ರಾಜಬೀದಿ ಉತ್ಸವ ನಡೆದಿದೆ. ಸಂತೋಷ ತಂದಿದೆ. ಆನೇಕ ಆತಂಕ ಮೂಡಿದ ಸಂದರ್ಭದಲ್ಲಿಯೂ ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ನಡೆದಿದೆ ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಯಶಸ್ವಿಯಾಗಿ ನಡೆಯಲು ಕಾರಣಿಭೂತರಾದ ಹಿಂದೂ‌ ಭಾಂಧವರಿಗೆ ಧನ್ಯವಾದಗಳು, ಕುಟುಂಬ ಸಮೇತರಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಯುವಕ ಮತ್ತು ಯುವತಿಯರಲ್ಲಿ ದೇಶಭಕ್ತ, ಮತ್ತು ಗಣಪತಿ ಮೇಲಿನ ಭಕ್ತಿಗಳನ್ನ ನೋಡಿದಾಗ‌ ವೈಭವತೆಯಿಂದ ನಡೆದಿದೆ ಎನಿಸಿದೆ ಎಂದರು. 


ವೈಭವೀಯತೆಗೆ ಶಿವಮೊಗ್ಗ ನಗರದ ಹಿಂದೂ ಸಮುದಾಯದ ವಿವಿಧ ಸಂಘಟನೆಯ ಮುಖಂಡರು, ಪ್ರಮುಖರು, ಭಾಗಿಯಾದ ಭಕ್ತರಿಗೆ ಊಟ, ಪಾನೀಯ ವ್ಯವಸ್ಥೆ ಮಾಡಿದ್ದರು. ದಾಸೋಹಕ್ಕೆ ಹೆಸರಾದ ನಗರದಲ್ಲಿ ಹಿಂದೂ ಸಮಾಜದ ವಿವಿಧ ಸಂಘಟನೆಗಳ ವ್ಯವಸ್ಥೆ ಶ್ಲಾಘನೀಯಾವಗಿದ್ದು ಪರಿಣಾಮದಿಂದ ರಾಜಬೀದಿ ಉತ್ಸವ ಯಶಸ್ವಿಯಾಗಿದೆ ಎಂದು ತಿಳಿಸಿದರು. 


ನಿನ್ನೆ ನಗರ ಕೇಸರಿ ಮಯವಾಗಿತ್ತು. ಹಿಂದೂ ಕೇಸರಿ ಅಲಂಕಾರ ಸಮಿತಿ ವ್ಯವಸ್ಥಿತವಾಗಿ ಅಲಂಕಾರ ಮಾಡಿದ್ದರು. ಇದರಿಂದ ಜಿಲ್ಲಾಡಳಿತ ಅಹಿತಕರ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮ ಒಟ್ಟುಗೂಡಿ ಬೆಳಗ್ಗಿನ ಜಾವ 4-16 ಗಂಟೆಗೆ ಭೀಮನ ಮಡಿವಿನಲ್ಲಿ ವಿಸರ್ಜನೆಯಾಗಿದೆ. ಸಮಸ್ತ ಹಿಂದೂ ಬಂಧುಗಳಿಗೆ ಧನ್ಯವಾದ ತಿಳಿಸಿದರು. 


ವಿವಿಧ ಸಂಃಟನೆಗಳು ಮಾಲಾರ್ಪಣೆ ಮಾಡಿ ಜನರ ಕಣ್ಮನಸ್ಸನ್ನ ಅರಳಿಸಿದ್ದಾರೆ.‌ ತಿಲಕರ‌ ಆಶಯದಂತೆ, ಸಾವರ್ಕರ್ ಅವರ ಅಪೇಕ್ಷೆಯಂತೆ ಯಶಸ್ವಿಯಾಗಿ ನಡೆದಿದೆ. ಪಕ್ಷ ಭೇಧ ಮರೆತು ಯಶಸ್ವಿಗೆ ಕಾರಣವಾಗಿದೆ. ಬೆಕ್ಕಿನ ಕಲ್ಮಠ ಶ್ರೀಗಳು ಪುಷ್ಪಾರ್ಚನೆ ಮಾಡಿ ರಾಜಬೀದಿ ಉತ್ಸವ ಚಾಲನೆ ಪಡೆದುಕೊಂಡಿತ್ತು ಎಂದರು. 


ಎಲ್ಲರೂ ಒಂದೇ ರೀತಿ ಯೋಚಿಸಿ  ನಡೆಸಿದ ಪರಿಣಾಮ ಯಶಸ್ವಿ ರಾಜಬೀದಿ ಉತ್ಸವ ನಡೆದಿದೆ. ರಾಜಬೀದಿ ಉತ್ಸವ ಹೇಗೆ ಎಂಬುದನ್ನ ತೋರಿಸಿಕೊಡಲಾಗಿದೆ. ನಾಗಮಂಗಲ ಮತ್ತು ಇತರೆಡೆ ಕೋಮು ಸಂಘರ್ಷ ನಡೆದಿದೆ. ಶಿವಮೊಗ್ಗ ಹೇಗಪ್ಪ ಎಂಬುದಂತಾಗಿತ್ತು. ಆದರೆ ಶಿವಮೊಗ್ಗದ ಜನ ಸಂಭ್ರಮದಿಂದ ನಡೆದಿದೆ ಎಂದರು. 


ಮುಸ್ಲೀಂ ಸಮುದಾಯ ಚಿಂತಿಸಲಿ


ಮಾಧ್ಯಮಗಳು ಸಹ ಯಾವುದೇ ದೃಶ್ಯಗಳನ್ನ ನಕಾರಾತ್ಮಕವಾಗಿ ಬಿಂಬಿಸಿಲ್ಲ ಹಾಗಾಗಿ ನಿನ್ನೆಯ ಯಶಸ್ವಿಗೆ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಸೆ.22 ರಂದು ಮಿಲಾದ್ ಮೆರವಣಿಗೆ ಯಶಸ್ವಿ ಹಾಗೂ ಶಾಂತಿಯುತವಾಗಿ ನಡೆಯಲಿ ಎಂದು ಆಶಿಸಿದರು. 


ರಾಜ್ಯದಲ್ಲಿ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಪಾಕಿಸ್ತಾನ್ ಪರ ಘೋಷಣೆ ಇತ್ತು ಈಗ ಪ್ಯಾಲೆಸ್ತೇನ್ ಪರ ಘೋಷಣೆ, ಬಾವುಟ ಹಾರಿಸಲಾಗುತ್ತಿದೆ. ಇದನ್ನ ಮುಸ್ಲೀಂ‌ಮುಖಂಡರೇ ಕುಳಿತು ಯೋಚಿಸಬೇಕಿದೆ. ಇದು ಮುಂದೊಂದು ದಿನ ಬೇರೆರೀತಿಯ ತಿರುವು ಪಡೆಯುವ ಮುನ್ನ‌ ಸಮಾಜ ಎಚ್ಚೆತ್ತುಕೊಳ್ಳಲಿ. ಮತ್ತು ಸರ್ಕಾರವೂ ಇಂತಹ ಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು