ಸುದ್ದಿಲೈವ್/ಶಿವಮೊಗ್ಗ
ನೂನ್ಯತೆ ಸಮಸ್ಯೆಗಳಿಂದ ಕೂಡಿರುವ ಕುವೆಂಪು ವಿಶ್ವ ವಿದ್ಯಾಲಯ ಐಸಿಯುವಿನಲ್ಲಿದೆ ಉಳಿಸುವ ಹಂತಕ್ಕೆ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿವಿಯನ್ನ ಆರಂಭದಲ್ಲಿ ಶಿವಮೊಗ್ಗದಲ್ಲಿ ಶುರು ಮಾಡಲು ವಿಘ್ನ ಉಂಟಾಗಿತ್ತು. ರಾಜ್ಯದ ಬೇರೆಡೆ ಹೋಗುವ ಹಂತಕ್ಕೆ ತಲುಪಿತ್ತು. ಬಂಗಾರಪ್ಪನವರು ಅದನ್ನ ಶಿವಮೊಗ್ಗಕ್ಕೆ ತಂದಿದ್ದಾರೆ. ಕುವೆಂಪು ವಿವಿ ಮುಚ್ಚಬಾರದು ಆರಂಭದಲ್ಲಿ ಶ್ರಮವಹಿಸಲಾಗಿತ್ತು ಎಂದು ಹೇಳಿದರು.
ನೂನ್ಯತೆಗಳಿವೆ. ಅವ್ಯವಹಾರ ನಡೆದಿದೆ. ಅದನ್ನ ಉಳಿಸಬೇಕಿದೆ. ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಚಾಮರಾಜ ನಗರದಿಂದ ಬೀದರ್ ವರೆಗೆ ಮಾನವ ಸರಪಳಿ ರಚಿಸಲಾಗುತ್ತಿದೆ ಮಕ್ಕಳು ಈ ವೇಳೆ ಗಿಡ ನಡೆಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 65 ಕಿಮಿ ಮಾನವ ಸರಪಳಿ ನಡೆಯಲಿದೆ ಎಂದರು.
ಕಸ್ತೂರಿ ರಂಗನ್ ವರದಿ ಪಶ್ವಿಮ ಘಟ್ಟದಲ್ಲಿ ಬದಕಲು ಸಾಧ್ಯವಾಗದಂತಾಗಿದೆ. ಮಂಕಾಳು ವೈದ್ಯ, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್ ನಾನು ಸಮಿತಿಯಲ್ಲಿದ್ದೇವೆ. ಪಶ್ಚಿಮ ಘಟ್ಟದ ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿ ಜಾರಿ ಬೇಡ ಎಂದಿತ್ತು ಆದರೆ ಕೇರಳ ಕೆಲವೊಂದು ಬದಲಾವಣೆ ಮೂಲಕ ಜಾರಿ ಮಾಡಿದೆ.
ಈಗ ಪಶ್ಚಿಮ ಘಟ್ಟದಲ್ಲಿಲ್ಯಾಂಡ್ ಸ್ಲೈಡಿಂಗ್ ಹೆಚ್ಚಾದ ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಒತ್ತಡ ಹೆಚ್ಚಾಗಿದೆ. ಸಮಿತಿ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಸಿಎಂ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಭೆ ನಡೆಸಿ ಎಂಬ ಸಲಹೆ ನೀಡಲಾಗಿದೆ. ಕ್ರಮ ಕೈಗೊಳ್ಳ ಬೇಕಿದೆ. ಮಾರ್ಪಾಟುವಿಲ್ಲದೆ ಜಾರಿಯಾದರೆ ಇದು ಮುಂದಿನ ದಿನಗಳಲ್ಲಿ ಗಂಡಾಂತರವಾಗಲಿದೆ. 60 ದಿನಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗಲಿದೆ ಎಂದರು.
ಜನರಿಗೆ ಅನುಕೂಲ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ಕಸ್ತೂರಿರಂಗನ್ ವರದಿ ಜಾರಿಯಾಗಬೇಕಿದೆ. ಕುವೆಂಪು ವಿವಿಯಲ್ಲಿ ಸ್ವಾಯತ್ತತೆ ಇದೆ. ಏನು ಕ್ರಮ ಕೈಗೊಳ್ಳಬೇಕು ಎಲ್ಲವೂ ತಪ್ಪಾಗಿದೆ. ಯಾರು ತಪ್ಪು ಮಾಡಲಾಗುತ್ತಿದೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಅನುದಾನ ಕೊಡಿಸುವ ಮುಂಚೆ ಎಲ್ಲವೂ ಸರಿಪಡಿಸಬೇಕಿದೆ ಎಂದರು.
ಕಸ್ತೂರಿ ರಂಗನ್ ವರದಿ ಜಾರಿಯಾದ ಮೇಲೆ ಆಗುಂಬೆಯಲ್ಲಿ ಟನಲ್ ನಿರ್ಮಾಣದ ಬಗ್ಗೆ ಏನಾಗಲಿದೆ ಎಂಬ ಪ್ರಶ್ನೆಗೆ ಸಚಿವರು ಯಾರು ಟನಲ್ ಪ್ರಸ್ತಾಪಿಸಿದ್ದಾರೋ ಅವನ್ನ ಕೇಳಿ ಎಂದು ಹೇಳಿದರು.
ಏರ್ ಪೋರ್ಟ್ ರಿನೀವಲ್ ಗೆ ಬಂದಿದೆ. ಕಳೆದ ತಿಂಗಳು ಅವಧಿ ಮುಗಿದಿದೆ. ಒಂದು ವರ್ಷಕ್ಕೆ ರಿನೀವಲ್ ಕೇಳಿದ್ದಕ್ಕೆ ಒಂದು ತಿಂಗಳು ನೀಡಲಾಗಿದೆ. ಸೆ.23 ಕೊನೆಯ ದಿನವಾಗಿದೆ. ಸರ್ವಿಸ್ ಸೆಂಟರ್ ಆರಂಭಿಸಬೇಕು. ಎಂಬಿ ಪಾಟೀಲ್ ಏನು ಮಾಡ್ತಾರೆ ಕಾದು ನೋಡಬೇಕಿದೆ ಎಂದ ಸಚಿವರು ಸೆ.26 ರಲ್ಲಿ ನಮ್ಮ ಶಾಲೆ ನಮ್ಮ ಜವಬ್ದಾರಿ ಕಾರ್ಯಕ್ರಮವನ್ನ ಸುವರ್ಣ ಸೌಧದಲ್ಲಿ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ 26 ಸಾವಿರ ವಾಟ್ಸಪ್ ಗ್ರೂಪ್ ರಚಿಸಲಾಗುತ್ತಿದೆ ಎಂದರು.
ಕುವೆಂಪು ವಿವಿಯನ್ನ ಹದಗೆಡಿಸಲಾಗಿದೆ. ಅದನ್ನ ರಿಪೇರಿ ಮಾಡಲು ಸಮಯಬೇಕು. ಆದರೆ ನ್ಯಾಯ ಒದಗಿಸಿಕೊಡಲಾಗುವುದು. ಅದರಂತೆ ಕಮಲಾಪುರ ಮತ್ತು ಕುಟ್ರಹಳ್ಳಿ ಟೋಲ್ ವಿರುದ್ಧ ಪ್ರತಿಭಟನೆ ನಡೆದಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸೊರಬ ಮಾಜಿ ಶಾಸಕರ ವಿರುದ್ಧ ಗರಂ ಆದ ಮಧು ಬಂಗಾರಪ್ಪ ನನ್ನ ಲೆವಲ್ ಗೆ ಪ್ರಶ್ನೆ ಕೇಳಿ. ಸೋತವರ ವಿರುದ್ಧ ನಾನೇಕೆ ಮಾತನಾಡಲಿ. ರಿಯಲ್ ಎಸ್ಟೇಟ್ ನಡೆಸಿದವರು ಯಾರು ಜಿಲ್ಲೆಯಲ್ಲಿ? ಅವರ ಪಕ್ಷದಲ್ಲಿ ಯಾವ ಕಡೆ ಎಂಟ್ರಿ ಹೊಡೆಯಬೇಕೆಂಬುದೇ ಅವರಿಗೆ ಗೊಂದಲವಿದೆ ಅವರಿಗೆ ನಾನೇಕೆ ಉತ್ತರಿಸಲಿ ಎಂದು ಹೇಳಿದರು.