ಠೇವಣಿದಾರರಿಗೆ ಹಣ ತಿರುಗಿಸುವಂತೆ ಒತ್ತಾಯಿಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ

 


ಸುದ್ದಿಲೈವ್/ಶಿವಮೊಗ್ಗ


ಕರ್ನಾಟಕ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.‌


ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 (The Banning of Unregulated Deposit Scheme Act. 2019) ಹೂಡಿಕೆ ಮಾಡಿದವರಿಗೆ ಬಂಡವಾಳ ವಾಪಾಸ್ ಕೊಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


ಈಗಾಗಲೇ PACL, ಸಾಯಿಪ್ರಸಾದ, ಸಮೃದ್ಧ ಜೀವನ, ಗಲಿಮಾ. ಹಿಂದೂಸ್ಥಾನ, ಅಗ್ರಿಗೋಲ್ಡ್,  ಈ ಸ್ಟೋರ್ ಇಂಡಿಯಾ ಇನ್ನಿತರ ಇನ್ವೆಸ್ಟಮೆಂಟ ಕಂಪನಿಗಳಿಗೆ ಹಣ ಹೂಡಿರುವ ಗ್ರಾಹಕರು 10 ವರ್ಷದಿಂದ ಅನ್ಯಾಯವಾಗಿದೆ. ಕಂಪನಿಗಳು ಈಗಾಗಲೇ ಮುಚ್ಚಿ ಹೋಗಿವೆ.


2014 ರಿಂದ ಇಲ್ಲಿಯವರೆಗೆ ಹಣ ತುಂಬಿದ ಗ್ರಾಹಕರಿಗೆ ಹಣ ಬಂದಿಲ್ಲ ನಮ್ಮ ರಾಜ್ಯದಲ್ಲಿ ಈ ತರಹದ ಸುಮಾರು 200 ರಿಂದ 250 ಇನ್ಸಸ್ಟಮೆಂಟ ಕಂಪನಿಗಳು ಮುಚ್ಚಿಕೊಂಡಿವೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ನಾವುಗಳು ನಾವುಗಳು ದೇಶಾದ್ಯಂತ, ರಾಜ್ಯಾದ್ಯಂತ ಹಾಗೂ ಜಿಲ್ಲೆದ್ಯಾಂತ ಹೋರಾಟ ಮಾಡುತ್ತಿದ್ದೇವೆ. Buds Act 2019 ರ ಪ್ರಕಾರ ಸರ್ಕಾರ ಗ್ರಾಹಕರ ಹಣ ಹಿಂದಿರುಗಿಸಬೇಕು.


ಈ ಹಿನ್ನೆಲೆಯಲ್ಲಿ  ಸಪ್ಟೆಂಬರ 01 ರಿಂದ ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು ಶಿವಮೊಗ್ಗದಲ್ಲೂ ಪ್ರತಿಭಟನೆ ನಡೆಸಿರುವುದಾಗಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಆಗ್ರಹಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು