ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗಕ್ಕೆ ಸಿಡ್ಬಿ ಬ್ಯಾಂಕ್ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಎಂದು ಸಂಸದ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸತ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ನವರನ್ನ ಭೇಟಿಯಾಗಿದ್ದೆ ಶಿವಮೊಗ್ಗಕ್ಕೆ ಸಣ್ಣ ಕೈಗಾರಿಕೆಗೆ ಅನುಕೂವಾಗುವ ಬ್ಯಾಂಕ್ ನೀಡುವಂತೆ ಕೋರಲಾಗಿತ್ತು. ನಾಳೆ ಸೆಡ್ಬಿ ಬ್ಯಾಂಕ್ ನ ಡಿಜಿಎಂ ರೀಜಿನಲ್ ಆಫೀಸರ್ ಭೇಟಿ ನೀಡಲಿದ್ದಾರೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಈ ಕ್ಷೇತ್ರಕ್ಕೆ ಬಲಪಡಿಸಲು, ಹಣಕಾಸಿನ ಎಕೋ ಸಿಸ್ಟಮ್ ನ್ನ ಬಲಪಡಿಸಬೇಕಿದೆ. ಸೆಡ್ಬಿ ಬ್ಯಾಂಕ್ ಗೆ ಎಸ್ಬಿಐ ಮತ್ತು ನಬಾರ್ಡ್ ನ ಶೇರ್ ಹೋಲ್ಡಿಂಗ್ ಇರುತ್ತದೆ. 17000 ಜನ ಉದ್ಯೋಗ ಪಡೆಯಲಿದ್ದಾರೆ. ಸಾಗರ, ಶಿಕಾರಿಪುರ ಸೇರಿದಂತೆ ಜಿಲ್ಲೆಯಲ್ಲಿ 7 ಇಂಡಸ್ಟ್ರೀಯಲ್ ಏರಿಯಾ ಇದೆ 10 ಎಸ್ಟೇಟ್ ಗಳು ಹೆಚ್ಚಾಗಲಿದೆ. ಸ್ಟಾರ್ಟ್ ಅಪ್, ಇಂಡಸ್ಡ್ರೀಯಲ್ ಬೂಸ್ಟ್ ಆಗಲಿದೆ.
ಎಂಎಸ್ ಎಂ ಇ ಲೋನ್ ಸಿಗುತ್ತಿರುವ ಸಾಲ ಸೌಲಭ್ಯ ಇದೇ ಸಿಡ್ಬಿ ಇಂದ ಸಿಗಲಿದೆ. ನೇರವಾಗಿ ಸಿಡ್ಬಿ ಬ್ಯಾಂಕ್ ಆದರೆ 8% ನಲ್ಲಿ ನೇರವಾಗಿ ಸಾಲ ಸಿಗಲಿದೆ. ಒಂದು ಕೋಟಿ ವರೆಗೆ ಸಾಲಸಿಗಲಿದೆ. ಹಣಕಾಸು ಸಚಿವರಿಗೆ ಮನವಿ ಮಾಡಿದ ಒಂದು ವಾರದಲ್ಲಿ ಸ್ಪಂಧನೆ ಸಿಗುತ್ತಿದೆ ಎಂದರು.
ವಿಮಾನ ನಿಲ್ದಣ ರಿನಿವಲ್ ಗೆ ಮೊದಲ ಐದುವರ್ಷಕ್ಕೆ ಪ್ರತಿವರ್ಷ ರಿನಿವಲ್ ಆಗಬೇಕಿತ್ತು. ಆಗಿಲ್ಲ. ಒಂದು ತಿಂಗಳಿಗೆ ರಿನಿವಲ್ ಆಗಿದೆ. ಒಂದು ವರ್ಷ ಕೊಡಬೇಕಿತ್ತ. ಈ ತಿಂಗಳ 27 ಕೊನೆಯ ದಿನಾಂಕವಾಗಿದೆ.
ರಿನೀವಲ್ ಗೆ, 14 ಉಪಕರಣಗಳ ಬೇಡಿಕೆಗಳಿತ್ತು 12 ಆಗಿದೆ. ಫ್ಲೈಟ್ ಜೆಟ್ ಗೆ ಮೆಕಾನಿಕ್ ಬೇಕಿತ್ತು. ಧೂಳಿತ್ತು ಎಂಬ ಕಸರಣಕ್ಕೆ ಟಾರ್ ಹಾಕಲಾಗಿದೆ. ನೈಟ್ ಲ್ಯಾಂಡ್ ಗೆ ಅವಕಾಶ ನೀಡಲಾಗಿದೆ. ವಿಸಿಬಿಲಿಟಿ ಗೆ ಮರಗಿಡ ಕಡಿಯಲಾಗಿದೆ. ಲೈಸೆನ್ಸ್ ರಿನೀವಲ್ ಗೆ ಎರಡು ಮೂರು ಬೇಡಿಕೆ ಇನ್ನೂ ಈಡೇರಿಲ್ಲ. ವರದಿ ಸಿದ್ದವಾಗುತ್ತಿದೆ ಎಂದರು.