Girl in a jacket

ಠಾಣೆ ಎದುರು ಮಾದಿಗ ದಂಡೋರ ಹಾಗೂ ಜೈಭೀಮ್ ಸಂಘಟನೆಯಿಂದ ದಿಡೀರ್ ಧರಣಿ



ಸುದ್ದಿಲೈವ್/ಶಿವಮೊಗ್ಗ


ಆನಂದಪುರಂ ಪೊಲೀಸ್ ಠಾಣೆಯ ಎದುರು ದಾಸನಕೊಪ್ಪದ ಗ್ರಾಮಸ್ಥರು, ಜೈ ಭೀಮ್ ಸಂಘಟನೆ ಹಾಗೂ ಕರ್ನಾಟಕ ಮಾದಿಗ ದಂಡೋರ ಸಮಿತಿ ಠಾಣೆ ಮುಂದೆ ದಿಡೀರ್ ಎಂದು ಧರಣಿ ಕುಳಿತಿದ್ದಾರೆ.


ನಿನ್ನೆ ಜಯಮಾಲ ಯಾನೆ ಜೈಲಕ್ಚ್ಮಿ ಎಂಬ ವಿವಾಹಿತ ಮಹಿಳೆಯು ಗಂಡನ‌ಮನೆಯವರ ವರದಕ್ಷಿಣೆ ಕಾಟಕ್ಕೆ   ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಈ ಘಟನೆ ಸಂಬಂಧ 11 ಜನರ ವಿರುದ್ಧ ದೂರು ದಾಖಲಾಗಿತ್ತು. 



ಗಂಡ ಚರಣ್, ಮಾವ ಸುಧಾಕರ್, ಗಾಯಿತ್ರಿ,  ಸಹೋದರಿಯರಾದ ಭಾಗ್ಯ, ಜ್ಯೋತಿ ಹಾಗೂ ಇವರ ಯಜಮಾನರಾದ ಪ್ರಸನ್ನ ರಾಘವೇಂದ್ರ, ಗೌತಮ್, ಹರೀಶ, ವೀಣ ಹಾಗೂ ದೀಪ ಎಂಬುವರ ವಿರುದ್ಧ ದೂರು ದಾಖಲಾಗಿತ್ತು. 


ಮದುವೆಯಾಗಿ ಮೂರು ವರ್ಷ ಕಳೆದರು ಮನೆಯಲ್ಲಿ ಇರಲು ಬಿಡದೆ ತಂದೆ ಮನೆಯಿಂದ ಒಡವೆ ಹಣ ತೆಗೆದುಕೊಂಡು ಬಾ ಎಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನಿಡುತ್ತಿದ್ದು ಮೊನ್ನೆ, ಜಯಲಕ್ಷ್ಮಿಯ ಕುತ್ತಿಗೆಯನ್ನ ಗಂಡ ಹಿಡಿದರೆ ಅತ್ತೆ ವಿಷ ಕುಡಿಸಿದ್ದಾಳೆ. 


ಗ್ರಾಮಸ್ಥರು ತಕ್ಷಣವೇ ವಿಜಯಲಕ್ಷ್ಮಿಯನ್ನ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಆಕೆಯನ್ನ ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಇಂದು ಮಹಿಳೆಯ ಸ್ಥಿತಿ ಗಂಭೀರವಾದ ಕಾರಣ ಆರೋಪಿಗಳನ್ನ ಅಷ್ಟು ಜನರನ್ನ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆ. 


ನಾಲ್ಕು ಜನರನ್ನ ಪೊಲೀಸರು ಈ ಘಟನೆಯಲ್ಇ ಬಂಧಿಸಿದರೂ, ಇದರಲ್ಲಿ ಇಬ್ಬರನ್ನ ಬಿಟ್ಟುಕಳುಹಿಸಿದ್ದೇಕೆ? ನೊಂದ ಮಹಿಳೆಯು ಗಂಡನಮನೆಯಲ್ಲಿ ಒದ್ದಾಡುವಂತಾಗಿದೆ. ಮಹಿಳೆಗೆ ನ್ಯಾಯಕೊಡಿಸಬೇಕು. ಅಷ್ಟು ಜನ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close