Girl in a jacket

ನೋ ಪೊಲಿಟಿಕ್ಸ್ ಎಂದಿದ್ದೇಕೆ ಸಚಿವ ವಿ.ಸೋಮಣ್ಣ?

 


ಸುದ್ದಿಲೈವ್/ಶಿವಮೊಗ್ಗ

ಋಣ ಸಂದಾಯಕ್ಕೆ ಮುಂದಾದ್ರಾ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಎಂಬ ಅನುಮಾನಕ್ಕೆ ಇಂದು ಅವರು ನೀಡಿದ ಶಿವಮೊಗ್ಗದ ಭೇಟಿಯ ಹಿಂದಿನ ರಹಸ್ಯ ತಿಳಿಸುತ್ತಿದೆ. ಅವರ ಪ್ರತಿ ಮಾತಿನಲ್ಲೂ ಸಂಸದ ರಾಘವೇಂದ್ರರನ್ನ ಹಾಡಿ ಹೊಗಳಿದ್ದು ಬಿಟ್ರೆ ಸಭೆಯ ಫಲಿತಾಂಶ ಮಾತ್ರ ಶೂನ್ಯವೆನ್ನಬಹುದು. 

ಶಿವಮೊಗ್ಗಕ್ಕೆ ಬಂದು ಭೇಟಿ ಮಡುವ ಅವಶ್ಯಕತೆ ಇಲ್ಲವಾಗಿದ್ದರೂ, ಬಿಎಸ್ ವೈ ಋಣ ಸಂದಾಯಕ್ಕೆ ಸಚಿವ ಸೋಮಣ್ಣರ ಭೇಟಿ ನಡೆದಿದೆ ಎನ್ನಬಹುದು‌. ಮೊದಲಿಗೆ ಸಂಸದರೇ ಹೇಳಿದಂತೆ ಕೊಚಿಂಗ್  ಸೆಂಟರ್ ಕಾಮಗಾರಿ ಆರಂಭಗೊಂಡು  ಮೂರು ವರ್ಷ ಕಳೆದಿದೆ. ಶೇ.25% ಪ್ರಗತಿ ಸಾಧಿಸಲಾಗಿದೆ. ಉಳಿದ 75% ಕಾಮಗಾರಿ ಯಾವ ಕಾಲಕ್ಕೆ ಮುಗಿಯಲಿದೆ ಗೊತ್ತಿಲ್ಲ. ಆದರೆ ಜೂನ್ 2025 ಕ್ಕೆ ಇದರ ಲೋಕಾರ್ಪಣೆ ಮಾಡಲಾಗುವ ಬಗ್ಗೆ ಭರವಸೆ ನೀಡಲಾಗಿದೆ. 

ಅದೂ ಹೋಗಲಿ, ಹರಿಹರ-ಶಿವಮೊಗ್ಗ ರೈಲ್ವೆ ಮಾರ್ಗಕ್ಕೆ ಆರಂಭದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಈ ಮಾರ್ಗ ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರುಗೆ ತಿರುಗಿತು. ಸಂಸದರು ಇದನ್ನ ಈಗಲೂ‌ ಹರಿಹರ-ಶಿವಮೊಗ್ಗ ಮಾರ್ಗ ಹೈಜ್ಯಾಕ್ ಅಗಿಲ್ಲ ಅಂತನೇ ಹೇಳ್ತಿರೋದು. ಆದರೆ ಹರಿಹರ-ಶಿವಮೊಗ್ಗ ರೈಲ್ವೆ ಮಾರ್ಗದ ಯೋಜನೆಯ ಬಗ್ಗೆ ಇಂದು ನಡೆದ ಸಭೆಯಲ್ಲಿ ಯಾರೂ ಮಾತನಾಡಲೇ ಇಲ್ಲ. ಹೋಗಲಿ ಬಿಡಿ, ಶಿಕಾರಿಪುರ-ರಾಣೇಬೆನ್ನೂರಿನ ರೈಲ್ವೆ ಮಾರ್ಗದ ಬಗ್ಗೆ ಮಾತನಾಡುವುದಾದರೆ, 15 ವರ್ಷದ ಹಿಂದಿನ ಪ್ರಾಜೆಕ್ಟ್ ಈಗಲೂ ಪೂರ್ಣವಾಗಿಲ್ಲ. ಶಿಕಾರಿಪುರದ ತನಕ ಈ ಮಾರ್ಗ ತಲುಪುವುದಾದರೆ ಸೊರಬಕ್ಕೆ ಯಾಕಿಲ್ಲವೆಂಬ ಕೂಗು ಸಹಜವಾಗಿಯೇ ಈಗ ಕೇಳಿ ಬರುತ್ತದೆ. ಅದನ್ನೇ ಸಚಿವ ಮಧು ಬಂಗಾರಪ್ಪ ಕೇಳಿದ್ದು,  ತಪ್ಪೇನಿದೆ?

ಇದನ್ನ ಎಂಎಲ್‌ಸಿ ಬಲ್ಕಿಸ್ ಭಾನು ಅವರು ಇಂದು ಜಿಪಂ ಸಭಂಗಣದಲ್ಲಿ ಮಧು ಬಂಗಾರಪ್ಪನವರ ಮನವಿಪತ್ರವನ್ನೇ ಉಲ್ಲೇಖಿಸಿ ಮಾತನಾಡಿದರು. ಆದರೆ ಸಚಿವ ಸೋಮಣ್ಣ 'ನೋಪೊಲಿಟಿಕ್ಸ್' ಅಂದ್ರು. ಹೋಗಲಿ ಹೊಸ ಮಾರ್ಗವನ್ನಾದರೂ ಈ ಭಾಗದಿಂದ ಘೋಷಿಸುತ್ತಾರಾ ಎಂದು ಕಾದು ನೋಡುದ್ರೆ, ಮತ್ತೆ ಅದೆ ತಾಳಗುಪ್ಪ, ಸಿರಸಿ ಮೂಲಕದ ಹುಬ್ಬಳ್ಳಿ ರೈಲುಮಾರ್ಗದ ಬಗ್ಗೆ ಸಚಿವರು ಮಾತನಾಡಿದರು. ಇದೂ ನೆನಗುದಿಗೆ ಬಿದ್ದಿರುವ ಯೋಜನೆಗಳೆ. ಅಲ್ಲಿಗೆ ನೋ ಪೊಲಿಟಿಕ್ಸ್‌ನಲ್ಲೂ ರಾಜಕಾರಣ ಅಡಗಿರೋದು ಸ್ಪಷ್ಟಗೊಂಡಿದೆ. 

ಇದನ್ನ ಹೇಳಲು ಶಿವಮೊಗ್ಗಕ್ಕೆ ಸಚಿವ ವಿ.ಸೋಮಣ್ಣ ಎಲ್ಲಬಿಟ್ಟು  ಬಂದ್ರಾ? ಎಂಬ ಸಣ್ಣ ಅನುಮಾನ ಹುಟ್ಟಿದೆ. ಬಂದೆ ಪುಟ್ಟ... ಹೋದೆ ಪುಟ್ಟ ಎಂಬ ಮಾತು ಇಲ್ಲಿ ಅಕ್ಷರಶಃ ಅನ್ವಯವಾಗುತ್ತೆ.  2023 ರಲ್ಲಿ ಎರಡೂ ಕಡೆ ಸ್ಪರ್ಧಿಸಿ ಸೋತಿದ್ದ ಈಗಿನ ಕೇಂದ್ರ ಸಚಿವ ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಟ್ಟು ಬೇರೆಡೆ ಜಿಗಿಯಲು ಸಿದ್ದರಾಗಿದ್ದರು. ಬಿ.ವೈ.ವಿಜೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ನಂತರ ಅವರನ್ನ ಪಕ್ಷದಲ್ಲಿಯೇ ಉಳಿಸಿಕೊಳ್ಳಲಾಯಿತು, ಆಡಳಿತ ರೂಢ ಪಕ್ಷವಾದ ಕಾಂಗ್ರೆಸ್‌ನ ವಿರುದ್ಧ ಜನವಿರೋಧಿ ಅಭಿಪ್ರಾಯವನ್ನ ಕಲೆಹಾಕುವಲ್ಲಿ ಬಿಜೆಪಿ ಯಶಸ್ವಿಯಾದ ಪರಿಣಾಮ ಲೋಕಸಭೆಯ ಚುನಾವಣೆಯಲ್ಲಿ 17 ಸ್ಥಾನ ಪಡೆಯಲು ಸಾಧ್ಯವಾಯಿತು. ಈ ಅಲೆಯಲ್ಲಿ ವಿ.ಸೋಮಣ್ಣ ಗೆದ್ದು ಬರಲು ಸಾಧ್ಯವಾಗಿತ್ತು. ಅವರನ್ನ ಪಕ್ಷದಲ್ಲಿ ಉಳಿಸಿಕೊಂಡ ಪರಿಣಾಮ ಋಣ ಸಂದಾಯಕ್ಕೆ ಸೋಮಣ್ಣ ಮುಂದಾಗಿ ದೆಹಲಿಯಿಂದ ಶಿವಮೊಗ್ಗಕ್ಕೆ ಬಂದು ಸಭೆನಡೆಸಿ ತಮಗೆ ಬೇಕಾದವರನ್ನ ಹಾಡಿಹೊಗಳಿ ಬೇಡಿಕೆ ಇಟ್ಟವರಿಗೆ ನೋ ಪೊಲಿಟಿಕ್ಸ್ ಎಂದು ಹೇಳಿ ಎದ್ದು ಹೋಗಿದ್ದಾರೆ. 

ಇವೆಲ್ಲದರ ಬೆಳವಣಿಗೆಯ ಹಿನ್ನಲೆಯಲ್ಲಿ ಶಿವಮೊಗ್ಗಕ್ಕೆ ಅಧಿಕಾರಿಗಳನ್ನ ಕರದುಕೊಂಡು ಬಂದು ಸೋಮಣ್ಣ ಸಭೆನಡೆಸಿ ಚರ್ಚಿಸುವ  ಪ್ರಯತ್ನ ಮಾಡಿದ್ದಾರೆ ಬಿಟ್ಟರೆ ಕಾಮಗಾರಿಗೆ ವೇಗ ಮಾತ್ರ ಹೆಚ್ಚಿಸಲಿಲ್ಲ. ಅಧಿಕಾರ ವಿಲ್ಲದ ಸಂಸದರಿಗೆ  ಅಸ್ಥಿತ್ವದ ಪ್ರಶ್ನೆಯೂ ಆಗಿರುವುದರಿಂದ ಅವರರವರ ಭಾವಕ್ಕೆ ಮತ್ತು ಭಕುತಿಗೆ ಸಭೆ ನಡೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು