MrJazsohanisharma

ಸಾಗರ ಬಸ್ ನಿಲ್ದಾಣದಲ್ಲಿ ಬೆಳೆಸಾಲದ ಹಣವನ್ನ ಕದ್ದುಕೊಂಡು ಹೋಗಿದ್ದ ಪ್ರಕರಣ, ಆರೋಪಿ ಬಂಧನ


ಸುದ್ದಿಲೈವ್/ಸಾಗರ

ಆ.26 ರಂದು ಸಾಗರದ ಆಪ್ಕೋಸ್ ನಲ್ಲಿ 1.5 ಲಕ್ಷ ರೂ. ಬೆಳೆಸಾಲವನ್ನ ಪಡೆದು ವಾಪಾಸ್ ಮಧ್ಯಾಹ್ನ ಸಾಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾದಲ್ಲಿ ಹೊನ್ನಾವರ ಕಡೆ ಹೋಗುವ ಬಸ್ ಹತ್ತಿದ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಹಣವನ್ನ ಕದ್ದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಠಾಣೆ ಪೋಲೀಸರು ಆರೋಪಿಯನ್ನ ಹಿಡಿದು ಕದ್ದ ಹಣವನ್ನ ವಶಪಡಿಸಿಕೊಂಡಿದ್ದಾರೆ. 

ಅರಳಗೋಡಿನ ಪರಮೇಶ್ವರ್, ಎಂಬುವರು ಸಾಗರ ಟೌನ್‌ಗೆ ಬಂದು ಸಾಲಪಡೆದು ಸಣ್ಣಪುಟ್ಟ ಕೆಲಸ ಮುಗಿಸಿಕೊಂಡು  ಸಾಗರ ಪೇಟೆಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ವ್ಯಕ್ತಿಗೆ ಅನುಮಾನ ಸ್ಪದವಾಗಿ ಇಬ್ಬರು ಬಂದು ಇಳಿದುಕೊಂಡು ಹೋಗಿದ್ದರು. 

ವರದಹಳ್ಳಿ ಕ್ರಾಸ್ ಬಳಿ ಪರಮೇಶ್ವರ್‌‌ಗೆ  ಅವರ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಹಣವನ್ನು ಕಳುವಾಗಿರುವ ಬಗ್ಗೆ ತಿಳಿದು ಬಂದಿದ್ದು,  ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಸದರಿ ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಮತ್ತು ಕಾರಿಯಪ್ಪ ಎ ಜಿರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಟೌನ್ ಪಿಐ ಜೆ ಬಿ ಸೀತಾರಾಮ್‌ ನೇತೃತ್ವದಲ್ಲಿ ಪಿಎಸ್ಐ ರವರುಗಳಾದ ನಾಗರಾಜ ಟಿ.ಎಂ, ಯಲ್ಲಪ್ಪ ಹಿರಗಣ್ಣನವರ, ಟಿ.ಡಿ ಸಾಗರ್ಕರ್ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ -  ಸನಾವುಲ್ಲ, ಪಿಸಿ -   ವಿಕಾಸ್, ವಿಶ್ವನಾಥ, ಕೃಷ್ಣಮೂರ್ತಿ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 

ಸದರಿ ತನಿಖಾ ತಂಡವು ಪ್ರರಕಣದ ಆರೋಪಿ ಪರಶುರಾಮ ಕ್ಯಾರಕಟ್ಟಿ, 32 ವರ್ಷ ಸೆಟಲ್ಮೆಂಟ್  ಕಾಲೋನಿ, ಗಂಗಾಧರ ನಗರ, ಹುಬ್ಬಳ್ಳಿ ಧಾರವಾಡ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ 1,00,000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಹಣವನ್ನ ಪರಮೇಶ್ವರನ್ ಗೆ ಹಿಂದಿರುಗಿಸಲಾಗಿದೆ.

Girl in a jacket

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close