ಸಾಮಾಜಿಕ ಜಾಲತಾಣದಲ್ಲಿ ಸುನ್ನಿ ಜನಾಂಗಕ್ಕೆ ಅವಹೇಳನ-ದೂರು ದಾಖಲು



ಸುದ್ದಿಲೈವ್/ಶಿವಮೊಗ್ಗ

ಸಾಮಾಜಿಕ ಜಾಲತಾಣದಲ್ಲಿ ಮುಸ್ಲೀಂ ಸುನ್ನಿ ಜನಾಂಗದ ವಿರುದ್ಧ ಅವ ಹೇಳನಕಾರಿ ವಿಡಿಯೋ  ಹರಿದು ಬಿಟ್ಟ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ  ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮುನಾವರ ಪಾಷ ಎಂಬುವರು, ಶಿವಮೊಗ್ಗದಲ್ಲಿ ಈದ್ ಮೀಲಾದ್ ಹಬ್ಬದ ಮೇರವಣಿಗೆ ಆದ ನಂತರ ಸೆ.26 ರಂದು ಟಿಪ್ಪುನಗರದ ಟಿಪ್ಪು ಮಸೀದಿ ಹತ್ತಿರ  ತನ್ನ ಮೊಬೈಲ್ ನ ಫೇಸ್ ಬುಕ್ ನ್ನು ನೋಡುತ್ತಿರುವಾಗ 01 ನೇ ತಿರುವು ಟಿಪ್ಪುನಗರ ಬಲಭಾಗ ಶಿವಮೊಗ್ಗ, ಟೌನ್ ವಾಸಿಯಾದ ಉಬೇದುಲಾ ಎಂಬ ವ್ಯಕ್ತಿ ಇಸ್ಮಾಂ ಧರ್ಮದ ಖ್ಯಾತ ಸೂಫಿ ಗುರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಅಗೌರವ ಸಲ್ಲಿಸುವ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.  

ಸಾಮಾಜಿಕ ಜಾಲಾತಣವಾದ ಫೇಸ್ ಬುಕ್ ಗೆ ಪೋಸ್ಟ ಮಾಡಿ ಜನಾಂಗಗಳ ಮತ್ತು ಪಂಗಡಗಳ ನಡುವೆ ದ್ವೇಷ ವೈರತ್ವ, ವೈಮನಸ್ಸು ಹುಟ್ಟಿಸುವಂತೆ  ವಿಡಿಯೋದಲ್ಲಿ ಚಿತ್ರೀಕರಿಸಿರುವುದು  ಕಂಡು ಬಂದಿದೆ.

ಈ ರೀತಿ ಸುನ್ನಿ ಮುಸ್ಲಿಂರಿಗೆ ನೋವುಂಟುಮಾಡುವ ರೀತಿ ಸಮಾಜದಲ್ಲಿ ಜನರನ್ನು ಎತ್ತಿಕಟ್ಟುವ ಉದ್ರೀಕ್ತಗೊಳಿಸುವ ಸಾಮಾಜಿಕ ಶಾಂತಿ ಕದಡುವ ಹಾಗೆ ಉರ್ದು ಬಾಷೆಯಲ್ಲಿ ಮಾತನಾಡಿರುವ ವಿಡಿಯೋವನ್ನು ಹರಿಬಿಟ್ಟ ಉಬೇದುಲ್ಲಾ ವಿರುದ್ಧ ,  ನಗರದ ಸುನ್ನಿ ಮುಂಖಡರುಗಳೊಂದಿಗೆ ಚರ್ಚಿಸಿ ಮುನಾವರ ಪಾಶರವರು ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close