ರೋಮ್ಯಾಂಟಿಕ್ ಹಾಡಿಗೆ ಮಹಿಳೆಯರ ಸಕ್ಕತ್ ಸ್ಟೆಪ್ಸ್!



ಸುದ್ದಿಲೈವ್/ಶಿವಮೊಗ್ಗ

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಮಹಿಳಾ ದಸರಾ ಕಾರ್ಯಕ್ರಮ ನಡೆದಿದೆ. ರಂಗೋಲಿ ಸ್ಪರ್ಧೆ, ಥ್ರೋಬಾಲ್, ಹಗ್ಗಜಗ್ಗಾಟ ಮೊದಲಾದ ಕಾರ್ಯಕ್ರಮಗಳು ನಡೆಯಲಿದ್ದು ಇದರಲ್ಲಿ ರಂಗೋಲಿ ಸ್ಪರ್ಧೆ ಸಧ್ಯಕ್ಕೆ ಆರಂಭಗೊಂಡಿದೆ. 

ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ಬಗೆಯ ರಂಗೋಲಿಯನ್ನ ಬಿಡಿಸಿ ಮಹಿಳೆಯರು ಗಮನ ಸೆಳೆದರು. ಸಿಂಪಲ್ ರಂಗೋಲಿ, ಈಜಿ ರಂಗೋಲಿ, 5 ಚುಕ್ಕಿ ರಂಗೋಲಿ ಹೀಗೆ ವಿವಿದ ಬಗ್ಗೆಯ ರಂಗೋಲಿಗಳನ್ನ ಇಲ್ಲಿ ಕಾಣಬಹುದಾಗಿದೆ. 

ಥ್ರೋಬಾಲ್, ಹಗ್ಗಜಗ್ಗಾಟವು ಇಂದು ನಡೆಯಲಿದ್ದು ಪಾಲಿಕೆಯ ಮುಂಭಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ವೀರಶೈವ ಕಲ್ಯಾಣ ಮಂದಿರದಲ್ಲಿ ಸಧ್ಯಕ್ಕೆ ರಂಗೋಲಿ ಸ್ಪರ್ಧೆ ನಡೆದಿದೆ. ಸ್ಪರ್ಧೆಯಲ್ಲಿ 48 ಜನ ಮಹಿಳೆಯರು ಭಾಗಿಯಾಗಿದ್ದಾರೆ.

ಹಾಡಿಗೆ ಸಕ್ಕತ್ ಸ್ಟೆಪ್ಸ್ 

ಮಹಿಳೆಯರ  ರೋಮ್ಯಾಂಟಿಕ್ ಹಾಡುಗಳು ಮತ್ತು ಡ್ಯಾನ್ಸ್ ಈ ವೇಳೆ ನಡೆದಿದೆ. ಚಳಿ ಚಳಿ ತಾಳೆನು ಈ ಚಳಿಯ ಹಾಡು, ಹಾಡಿರೋ ಹಾಡಿರೋ ಎಲ್ಲ ಸೇರಿ ಹಾಡಿರೋ ಎಂದು ಮಹಿಳೆಯರು ಕುಣಿದು ಸಕ್ಕತ್ ಸ್ಟೆಪ್ಸ್ ಇಟ್ಟಿದ್ದಾರೆ. 

ವೀರಶೈವ ಕಲ್ಯಾಣ ಮಂದಿರದಲ್ಲಿ ಮಹಿಳಾ ದಸರಾವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆ ಮುಗಿದಿತ್ತು. ವೇದಿಕೆ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತರು ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು.‌


ಆಯುಕ್ತರು ಕಾರ್ಯನಿಮಿತ್ತ ವೇದಿಕೆ ಕಾರ್ಯಕ್ರಮ ನಡೆಯೋದು ವಿಳಂಭವಾಗಿದ್ದ ಗ್ಯಾಪ್ ನಲ್ಲಿ ಮಹಿಳೆಯರು ರೋಮ್ಯಾಂಟಿಕ್ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close