ಗಣಪತಿ ಹಬ್ಬಕ್ಕೆ ಮೂರ್ತಿಗಳ ಮಾರಾಟ ಜೋರು

 


ಸುದ್ದಿಲೈವ್/ಶಿವಮೊಗ್ಗ


ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿ ಮಾರಾಟ ಭರದಿಂದ ಸಾಗಿದೆ. ಮನೆಯಲ್ಲಿ ಕೂರಿಸುವ ಮೂರ್ತಿಗಳು, ಪೆಂಡಾಲ್ ನಲ್ಲಿ ಕೂರಿಸುವ ಮೂರ್ತಿಗಳ ಮಾರಾಟ ಭರದಿಂದ ಸಾಗಿದೆ. 


ಪೆಂಡಾಲ್ ಗಳಲ್ಲಿ 1½ ಅಡಿ ಮೂರ್ತಿಗಳಿಂದ ಹಿಡಿದು 4 ಅಡಿ ಗಣಪ,  6 ಅಡಿ ಗಣಪನನ್ನ ಕೂರಿಸಲಾಗುತ್ತಿದೆ. 1½ ಅಡಿ ಗಣಪನಿಗೆ 2.500 ರೂ.ನಗದು ನಿಗದಿಯಾಗಿದೆ. ಮೂರ್ತಿಯ ಅಲಂಕಾರ ಹೆಚ್ಚಾಗಿದ್ದರೆ ಅಧಿಕ ಹಣ ನಿಗದಿಯಾಗಿದೆ. 4 ಅಡಿ ಗಣಪನಿಗೆ 6 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಅದೂ ಸಹ ಅಲಂಕಾರ ಕಡಿಮೆ ಇದ್ದರೆ ಈ ಹಣ ಇಲ್ಲವಾದಲ್ಲಿ ನಗದು ಜಾಸ್ತಿ



ಅಡಿಗಳಲ್ಲಿ  ಗಣಪನೇ ಕೊನೆಯ ಅಡಿನೇ 6 ಅಡಿಯಾಗಿರುವುದರಿಂದ 18 ಸಾವಿರ -20 ಸಾವಿರದಿಂದ ಆರಂಭವಾಗಿದೆ.  1½ ಅಡಿ 1200 ರಿಂದ 5000 ರೂ.ಗೆ ಮಾರಾಟಬಾಗುತ್ತಿದೆ. ಮೈದಾನದಲ್ಲಿ  50 ಕ್ಕೂ ಹೆಚ್ಚು ಪೆಂಡಾಲ್ ಹಾಕಲಾಗಿದೆ. 


ನ್ಯಾಮತಿ, ಕುಂಸಿ,  ಚನ್ನಗಿರಿ, ಹೊನ್ನಾಳಿ ಕಡೆಯಿಂದ ಮಾರಾಟಕ್ಕೆ ಪೆಂಡಾಲ್ ಹಾಕಲಾಗಿದೆ. ಸಂಜೆಯ ವರೆಗೂ ಗಣಪತಿ ಕೊಂಡಯ್ಯಲಾಗುತ್ತಿದೆ. ರಾಮೇನಕೊಪ್ಪದ 5 ಅಡಿ ಗಣಪನಿಗೆ 12½ ಸಾವಿರ ರೂ.ಗೆ ಮಾರಾಟವಾಗಿದೆ. ಎತ್ತಿನ ಮೂತಿಯ ಮೇಲೆ ಗಣಪನ ಅಲಂಕಾರ ಇರುವುದರಿಂದ ಇದರ ಬೆಲೆ ಹೆಚ್ಚಾಗಿದೆ.





ಮನೆಗಳಿಗೆ ಪರಿಸರ ಸ್ನೇಹಿ ಗಣಪನನ್ನ ಕೊಂಡಯ್ಯಲಾಗುತ್ತಿದೆ. 500 ರೂ.ನಿಂದ ಮೂರು ಸಾವಿರದ ಗಣಪತಿ ಮೂರ್ತಿ ಮಾರಾಟವಾಗುತ್ತಿದೆ. ಇಲ್ಲೂ ಸಹ ಅಕಂಕಾರ ಹೆಚ್ಚಾದರೆ ಹಣ ಹೆಚ್ಚಾಗಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು