Girl in a jacket

ವಿದ್ಯಾರ್ಥಿಯ ಪ್ರಾಜೆಕ್ಟ್ ವರ್ಕ್‌ಗೆ ಸಹಿ ಹಾಕದ ಇಂಗ್ಲೀಷ್ ಮುಖ್ಯಸ್ಥರು-ಠಾಣೆ ಮೆಟ್ಟಿಲೇರಿದ ಪ್ರಕರಣ-ಮುರಿದು ಬಿದ್ದ ಸಂಧಾನ

 


ಸುದ್ದಿಲೈವ್/ಶಿವಮೊಗ್ಗ

ಕೋಟೆ ಪಿಐ ಹರೀಶ್ ಪಟೇಲ್ ನೇತೃತ್ವದಲ್ಲಿ ನಡೆದ ಮೊದಲನೇ ಸಂಧಾನದ ಮಾತಕತೆ ಮುರಿದುಬಿದ್ದಿದ್ದು ಎರಡನೇ ಸುತ್ತಿನ ಮಾತುಕತೆ ಅ.04 ರಂದು ನಡೆಯುವ ಸಾಧ್ಯತೆ ಇದೆ. ಸಹ್ಯಾದ್ರಿ ಕಾಲೇಜಿನ ಇಂಗ್ಲೀಶ್ ವಿಭಾಗದ ಮುಖ್ಯಸ್ಥ ಶಿವಾನಂದ ಸ್ವಾಮಿ ಹಾಗೂ ಅಂತಿಮ ವಿದ್ಯಾರ್ಥಿ ನಡುವೆ ಉಂಟಾದ ತೀಸ್ರಾ ಕೋಟೆ ಠಾಣೆ ಮೆಟ್ಟಿಲೇರಿತ್ತು.

ಮೆಟ್ಟಿಲೇರಿದ ಪ್ರಕರಣಕ್ಕೆ ಸಂಧಾನವೆಂಬ ಮದ್ದು ತಾತ್ಕಾಲಿಕ ಫಲಕೊಟ್ಟಿಲ್ಲ. ಅಂತಿಮ ವರ್ಷದ ಬಿ.ಎ ವಿದ್ಯಾರ್ಥಿಯೊಬ್ಬ ತನ್ನ ಪ್ರೋಜೆಕ್ಟ್ ವರ್ಕ್ ನ್ನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ‌ ಶಿವಾನಂದ ಸ್ವಾಮಿ ಅವರಿಂದ ಸಹಿ ಮಾಡಿಸಲು ಹಲವು ದಿನಗಳಿಂದ ಪ್ರಯತ್ನಿಸಿದ್ದಾನೆ.

ಶಿವಾನಂದ ಸ್ವಾಮಿಗಳು ಸಹಿ ಮಾಡಲು ಆಟಾಡಿಸಿದ್ದಾರೆಂದು ಆರೋಪಿಸುರುವ ವಿದ್ಯಾರ್ಥಿ ಕರೆ ಮಾಡಿದಾಗ ಕರೆಸ್ವೀಕರಿಸದೆ, ಕೆಲವೊಮ್ಮೆ ಕರೆಸ್ವೀಕರಿಸಿದಾಗ ನಾಳೆ ಬಾ, ನಾಡಿದ್ದು ಬಾ ಎಂದು ಆಟಾಡಿಸಿದ್ದಾರೆ ಆರೋಪಿಸಿದ್ದಾನೆ.

ಶಿವಾನಂದ ಸ್ವಾಮಿಗಳನ್ನ ಹಲವು ಬಾರಿ ಊರಿನಿಂದ ಕಾಲೇಜಿಗೆ ಬಂದ ವಿದ್ಯಾರ್ಥಿ ವಾಪಾಸಾಗಿದ್ದು ಇದೆ. ಇತ್ತೀಚೆಗೆ ಕಾಲೇಜಿಗೆ ಉಪನ್ಯಾಸಕರನ್ನ ಹುಡುಕಿಕೊಂಡು ಬಂದಿದ್ದ ವಿದ್ಯಾರ್ಥಿ ಹುಡುಕಿದ್ದಾನೆ. ಸಿಗದಿದ್ದಾಗ ಶಿವಾನಂದ ಸ್ವಾಮಿಗೆ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಮುಖ್ಯಸ್ಥರು ಪದೇ ಪದೇ ಕರೆ ಮಾಡುತ್ತಿದ್ದಿಯ ಏನು ನಿನ್ನ ಸಮಸ್ಯೆ ಎಂದಿದ್ದಾರೆ. ಪ್ರಾಜೆಕ್ಟ್ ವರ್ಕ್ ಗೆ ಸಹಿ ಹಾಕಿಲ್ಲ ಸಾರ್ ಹಾಕಿಕೊಡಿ ಎಂದಿದ್ದಾನೆ.

ಸಹಿ ಹಾಕೊಲ್ಲ. ಯಾರಿಗೆ ದೂರು ಕೊಡುತ್ತೋ ಕೊಡು ಎಂದು ಧಮ್ಕಿ ಹಾಕಿರುವುದಾಗಿ ವಿದ್ಯಾರ್ಥಿ ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೋಟೆ ಪೊಲೀಸ್ ಠಾಣೆಯಲ್ಲಿ ಈ ದೂರು ಸಧ್ಯಕ್ಕೆ ಎಫ್ಐಆರ್ ಆಗಿಲ್ಲ. ಸಂಧಾನಕ್ಕೆ ಯತ್ನಿಸಲಾಗಿದೆ. ಸಂಧಾನ ಸಧ್ಯಕ್ಕೆ ಮುರಿದು ಬಿದ್ದಿದೆ. ಆದರೆ ಈ ವಿದ್ಯಾರ್ಥಿಯ ಸಮಸ್ಯೆ ಹೇಗೆ ಎಫ್ಐಆರ್ ಆಗುತ್ತೆ ಎಂಬುದೇ ಕುತೂಹಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು