ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ದಿವಾಳಿಯಾಗಲಿದೆ-ರಾಜೀವ್ ಕುಡಚಿ

 



ಸುದ್ದಿಲೈವ್/ಶಿವಮೊಗ್ಗ


ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಅವರು ಸದನದ ಒಳಗೆ ಮತ್ತು ಹೊರಗೆ ಹಾಗೂ ಸಂಘಟನಕಾರಾಗಿ ಪರಿಣಾಮಕಾರಿಯಾಗಿ ಬೆಳೆದಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನಿ ಕಾರ್ಯದರ್ಶಿ ರಾಜೀವ್ ಕುಡಚಿ ಹಾಡಿಹೊಗಳಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ 1.5 ಕೋಟಿ ಸದಸ್ಯರನ್ನ ನೇಮಿಸಿಕೊಳ್ಳುವ ಗುರಿ ಹೊಂದಿದೆ.  ರಾಜ್ಯದಲ್ಲಿ 58 ಸಾವಿರ ಬೂತ್ ಗಳನ್ನ ವಿಜೇಂದ್ರ ಅವರೇ ಪರಿಶೀಲಿಸುತ್ತಿದ್ದಾರೆ. ಹಾಗಾಗಿ ಸಮರ್ಥ ನಾಯಕರಾಗಿ ಬೆಳೆದಿದ್ದಾರೆ ಎಂದರು.


ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಹಗರಣ ಮಾಡಿದೆ. ಮೂಡ ಮತ್ತು ವಾಲ್ಮೀಕಿ ಹಗರಣ ಹಿರತು ಪಡಿಸಿ,  ಎಂ ಬಿ ಪಾಟೀಲ್ ಚುನಾವಣೆಯ ವೇಳೆ ಕೆಐಡಿಬಿ ಹಗರಣ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ದಿನೇಶ್ ಗುಂಡೂರಾವ್ ಹಗರಣ ಮಾಡಿರುವುದು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಸಂತೋಷ್ ಲಾಡ್ ಕಾರ್ಮಿಕರನ್ನ‌ ಆರೋಗ್ಯ ತಪಾಸಣೆ ನಡೆಸದೆ ಹಗರಣ ನಡೆಸಿರುವುದು ಹೊರಗೆ ಬರಲಿದೆ ಎಂದರು. 


ಹಗರಣದ ಬಗ್ಗೆ ಕಾಂಗ್ರೆಸ್ ಶಿವಮೊಗ್ಗದಲ್ಲಿ ಬಿಎಸ್ ವೈ ಕುಟುಂಬದ ಬಗ್ಗೆ ಆರೋಪ ಮಾಡಲಾಗುತ್ತಿದೆ. ಡೈವರ್ಷನ್ ಮಾಡಲು ಕಾಂಗ್ರೆಸ್ ಯತ್ನಿಸಿದರೂ ವಿಫಲರಾಗಿದ್ದಾರೆ ಎಂದು ದೂರಿದ ಅವರು, ಸಿಎಂ ಸಿದ್ದರಾಮಯ್ಯ ರೆವೆನ್ಯೂ ಡಿಪಾಸಿಟ್ ಮಾಡುವಲ್ಲಿ ವಿಫಲವಾಗಿದೆ. ಸ್ವಂತ ಮೂಲಗಳಿಂದ ಆದಾಯ ರಚಿಸಬೇಕಿತ್ತು. ಅದರಲ್ಲಿ ವಿಫಲರಾಗಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ, ಪೆನ್ಷನ್ ಗೆ ಸ್ವಂತ ಮೂಲದಿಂದ ಹಣ ಕೊಡಬೇಕಿತ್ತು. ಕಾಂಗ್ರೆಸ್ ಗೆ ಅದು ಸಾಧ್ಯವಾಗಿಲ್ಲ ಎಂದು ದೂರಿದರು. 


ರಾಜ್ಯದ ಆದಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ರೆವೆನ್ಯೂ ಸರ್ಪಲೆಸ್,  ಲಯಬಲಿಟಿ ಸೇರಿದಂತೆ ಮೂರು ಪ್ಯಾರಮೀಟರ್ ಬಗ್ಗೆ ಮಾತನಾಡುತ್ತಿದರು.  ಆದರೆ ಎರಡನೇ ಬಾರಿಯ ಸಿದ್ದರಾಮಯ್ಯ ಸರ್ಕಾರ ವಿತ್ತೀಯ ಶಿಸ್ತು ನಿಯಮಗಳನ್ನ ಉಲ್ಲಂಘೀಸಿದ್ದಾರೆ. ಇನ್ನು ಎರಡೇ ವರ್ಷದಲ್ಲಿ ಸರ್ಕಾರ ದಿವಾಳಿಯಾಗಲಿದೆ ಎಂದು ಆರೋಪಿಸಿದರು.


ಶಾಲಾ ಮಕ್ಕಳಿಗೆ ಸರಿಯಾದ ವೇಳೆ ಬಸ್ ಬರ್ತಾ ಇಲ್ಲ. ಮೋಟಾರ್ ಆಕ್ಟ್ ಪ್ರಕಾರ 8 ಲಕ್ಷ‌ ಕಿ.ಮೀ ದೂರ ಕ್ರಮಿಸಿದರೆ ಆ ವಾಹನವನ್ನ ಬಳಸುವಂತಲ್ಲ. ಆದರೆ ಸರ್ಕಾರವೇ ಉಲ್ಲಂಘನೆ ಮಾಡಿದೆ ಇದರಿಂದ ಶಕ್ತಿ ಯೋಜನೆ ಪ್ರಭಾವವಾಗಿದೆ. ಸರ್ಕಾರ ನಿಗಮಗಳಿಗೆಸ್ವಂತ ಶಕ್ತಿಯಿಂದಲೇ ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಘೋಷಣೆ ಮಾಡಿದೆ. ಆದರೆ ನಿಗಮಗಳ ಮೇಲಿನ ಸಾಲ ಅತಿಯಾಗಿದೆ ಎಂದು ದೂರಿದರು. 


ಸಾರಿಗೆ ನಿಗಮದ ಸಾಲವನ್ನ ತೀರಿಸುವುದು ಹೇಗೆ? ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಮುಂದಿನ ತಿಂಗಳಿಂದ ನೌಕರರಿಗೆ ಸಂಬಳ ಕೊಡಲು ಸಾಧ್ಯವಿಲ್ಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಹಕಾರ ಮಾಡುವಂತೆ ಪತ್ರ ಬರೆದಿದೆ. ಕಾಂಗ್ರೆಸ್ ನ ಈ ರೀತಿ ಆಡಳಿತ ಕರ್ನಾಟಕಕ್ಕೂ ಬರಲಿದೆ.  ಇದು ರಾಹುಲ್ ಗಾಂಧಿ ಮಾಡೆಲ್ ಸರ್ಕಾರ ಎಂದು ದೂರಿದರು.


ಎಗ್ಗಿಲ್ಲದ ಭ್ರಷ್ಠಾಚಾರ ಎಲ್ಲಾ ಹಂತದಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು ಒಂದು ಅಡಿಗೆ ನಿಗದಿತ ಮಾರುಕಟ್ಟೆ ಹಣದಿಂದ 100 ರೂ. ಹೆಚ್ಚಿಗೆ ಹಣ ಕೊಟ್ಟು ಖರೀದಿಸಬೇಕು. ಈ 100 ರೂ ಡಿಕೆಶಿ ಟ್ಯಾಕ್ಸ್ ಆಗಿದೆ. 224 ಮತ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ಒಂದು ರೂ. ಬಿಡುಗಡೆಯಾಗುತ್ತಿಲ್ಲ. ಈ ಸರ್ಕಾರ ಆದಷ್ಟು ಬೇಗ ತೊಲಗಬೇಕು ಎಂದು ಜನ ಬಯಸುತ್ತಿದ್ದಾರೆ ಎಂದು ದೂರಿದರು.


ದಲಿತ ನಾಯಕರಾದ ಚಲುವಾದಿ ನಾರಾಯಣ ಸ್ವಾಮಿ ಅವರು ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಚಿವ‌ಎಂಬಿ ಪಾಟೀಲ್ ಅವರು ನಾರಾಯಣ ಸ್ವಾಮಿ ಅವರನ್ನ ಶೆಡ್ ಗಿರಾಕಿ ಎಂದು ಅವಮಾನಿಸಿದ್ದಾರೆ. ಸಚಿವರ ಈ ಹೇಳಿಕೆ ದಲಿತರ ಧಮನಕ್ಕೆ ಕಾರಣವಾಗಿದೆ ಎಂದು ಆಗ್ರಹಿಸಿದರು. 


ಸಾರಿಗೆ ನಿಗಮಗಳು ಬಿಜೆಪಿ ಸರ್ಕಾರದಲ್ಲಿ ಲಾಭದಲ್ಲಿದ್ದವಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಕುಡಚಿ, 3200 ಕೋಟಿ ರೂ.ಗಳನ್ನ ನಾಲ್ಕು ಕಾರ್ಪರೇಷನ್ ಗೆ ಬೊಮ್ಮಾಯಿ ಸರ್ಕಾರ ನೀಡಿತ್ತು. ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಗೆ 3270 ಕೋಟಿ ಎತ್ತಿಟ್ಟುದೆ ಎಂದು ಬಿಂಬಿಸಲಾಯಿತು. 800 ಬಸ್ ಖರೀದಿಸಲು ಹಣ ಎತ್ತಿಟ್ಟ ಹಣವನ್ನ ಕಾಂಗ್ರೆಸ್ ಶಕ್ತಿಯೋಜನೆಗೆ ಬಳಸಿಕೊಂಡಿತು.  ಅಭಿವೃದ್ಧಿಗೆ ಒಂದು ರೂ. ನೀಡಲಿಲ್ಲ ಎಂದರು.


ಬಿಜೆಪಿ ಸರ್ಕಾರ ಸಾಲದ ಹೊರೆಯನ್ನ ಕಡಿಮೆ ಮಾಡಲಾಗಿತ್ತು. ಎಲ್ಲಾ ನಿಗಮದ 50-60 ಕೋಟಿ ಸಾಲವಿತ್ತು ಈಗ ಎಲ್ಲಾ ನಿಗಮದ್ದು 5000 ಕೋಟಿ ಹಣ ಸಾಲವಾಗಿದೆ.  ಈ ಸಾಲದ ಹೊರೆ ಹೊತ್ತುವರು ಯಾರು ಎಂದು ಪ್ರಶ್ನಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು