ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗಕ್ಕೆ ವಂದೆ ಭಾರತ್ ರೈಲು ಬರಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಪುನರ್ಉಚ್ಚರಿಸಿದ್ದಾರೆ. ಕರ್ನಾಟಕಕ್ಕೆ ಹೊಸದಾಗಿ ಮೂರು ವಂದೆ ಭಾರತ್ ರೈಲು ಬರಲಿದೆ. ಅದರಲ್ಲಿ ಒಂದು ಶಿವಮೊಗ್ಗ-ಬೆಂಗಳೂರಿನ ನಡುವೆ ಸಂಚರಿಸುವುದಾಗಿ ಹೇಳಿದ್ದಾರೆ.
ನಿನ್ನೆ ನಗರದ ಬಿಜೆಪಿ ಕಚೆರಿಯಲ್ಲಿ ನಡೆದ ಮಹಿಳಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯನ್ನ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕಕ್ಕೆ ಬರುವ ಒಂದು ರೈಲನ್ನ ಶಿವಮೊಗ್ಗಕ್ಕೆ ಕೊಡುತ್ತೇನೆ ಎಂದು ಕೇಂದ್ರ ಸಚಿವ ಸೊಮಣ್ಣ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಾಗುವ ಎಲ್ಲಾ ರೀತಿಯ ಸೌಲತ್ತುಗಳನ್ನು ಹೊಂದಿದೆ ಎಂದಿರುವ ಸಂಸದರು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣವನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
ಕೋಟೆ ಗಂಗೂರಿನಲ್ಲಿ ರೈಲ್ವೆ ಸರ್ವಿಸ್ ಕೇಂದ್ರವನ್ನ ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಇದರಿಂದ 10ರಿಂದ 12 ರಾಜ್ಯಳಿಗೆ ರೈಲ್ವೇ ಸಂಪರ್ಕ ದೊರಕುತ್ತದೆ. 2008ರ ಹಿಂದೆ ಒಂದೇ ಒಂದು ಮೀಟರ್ ರೈಲ್ವೆ ಹಳಿಯನ್ನು ಹಾಕಲು ಆಗಿರಲಿಲ್ಲ. ನಾನು ಎಂಪಿ ಆದ ನಂತರ ಶಿವಮೊಗ್ಗದಿಂದ ತಾಳ್ಗುಪ್ಪದವರೆಗೆ ಬ್ರಾಡ್‌ಗೇಜ್ ಸೌಲಭ್ಯವನ್ನು ಮಾಡಲಾಯಿತು ಎಂದರು.
ಸೋಲಿನ ಬಗ್ಗೆ ಮಾತು
ಬಿಜೆಪಿಯ ತಪ್ಪಿನಿಂದ ಮತ್ತು ಕಾಂಗ್ರೆಸ್ ನ ಹೊಸ ಭರವಸೆಯಿಂದ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಜನ ಶಾಪ ಹಕುತ್ತಿದ್ದಾರೆ. ಗ್ಯಾರೆಂಟಿಗಳಿಂದ ಜೀವನ ನಡೆಯಲ್ಲ ಎಂಬುದನ್ನ ಜನ ಅರಿತಿದ್ದಾರೆ. ಗ್ಯಾರೆಂಟಿ ಗಳಿಗೆ ಕಙಡೀಷನ್ ಹಾಕಲಾಗುತ್ತಿದೆ. ಹಗರಣಗಳು ಈ ರಾಜ್ಯ ಸರ್ಕಾರವನ್ನ ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಜನರಿಗೆ ವಿಶ್ವಾಸ ಮೂಡಿಸುತ್ತಿದೆ. 100 ದಿನಗಳಿಗೆ ಒಮ್ಮೆ ಕೆಲಸಗಳ ಬಗ್ಗೆ ರಿವ್ಯೈವ್ ನಡೆಯುತ್ತಿದೆ ಯಾವ ಕೆಲಸಗಳು ಎಷ್ಟು ಆಗಿವೆ ಬಾಕಿ ಉಳಿದಿರುವ ಕೆಲಸಗಳೆಷ್ಟು ಎಂದು ಪರಿಸೀಲಿಸಲಾಗುತ್ತಿದೆ ಎಂದರು.