ಶಿವಮೊಗ್ಗದಲ್ಲಿ ನಿಷೇಧಿತ ಸಂಘಟನೆ ಮತ್ತು ಕೇರಳ ಮುಸ್ಲೀಂರಿಗೆ ಕಡಿವಾಣ ಹಾಕಿ-ಈಶ್ವರಪ್ಪ



ಸುದ್ದಿಲೈವ್/ಶಿವಮೊಗ್ಗ


ರಾಜ್ಯದಲ್ಲಿ ರಾಷ್ಟ್ರದ್ರೋಹಿ ಮುಸ್ಲೀಂರು ಬೆಳೆಯುತ್ತಿದ್ದಾರೆ. ನಿಷೇಧಿತ ಸಂಘಟನೆಗಳು, ಕೇರಳದ ರಾಷ್ಟ್ರದ್ರೋಹಿ ಮುಸ್ಲೀಂರು ದೇಶಾದ್ಯಂತ ಬೀಡುಬಿಟ್ಟು ರಾಷ್ಟ್ರವಿದ್ರಾವಕ ಕೆಲಸ ಮಾಡಿರುವ ಉದಾಹರಣೆ ನಮ್ಮ‌ಮುಂದೆ ಇದೆ ಎಂದು ಮಾಜಿ ಸಿಎಂ ಈಶ್ವರಪ್ಪ ಆರೋಪಿಸಿದರು.‌


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗಮಂಗಲದಲ್ಲಿ ಮಸೀದಿಯಿಂದ ತಲ್ವಾರ್, ಪೆಟ್ರೋಲ್ ಬಾಂಬ್ ಹೇಗೆ ಹೊರಬಂದವು, ಯುವಕರು ಮೆಡಿಕಲ್ ಶಾಪ್ ನಿಂದ 30 ಮಾಸ್ಕ್ ಖರೀದಿಯಾಗಿದೆ ಎಂದು ಚಲುವರಾಯ ಸ್ವಾಮಿ ಹೇಳಿದ್ದಾರೆ. ಅದೂ ಅಲ್ಲದೆ ಅವರು ಯಾರು ಯಾರಿಗೆ ಮೊದಲು ಕಲ್ಲು  ಎಸೆದರು ಎಂಬುದನ್ನ ಪರಿಶೀಲಿಸುವುದಾಗಿ ಹೇಳಿದ್ದಾರೆ. ಇಂತಹ ಹೇಳಿಕೆಗಳಿಂದಲೇ ಕೋಮು ಸಂಘರ್ಷ ನಿಲ್ಲುತ್ತಿಲ್ಲ ಎಂದು ಗುಡುಗಿದರು. 


ಸತೀಶ್ ಜಾರಕಿಹೊಳೆ ರಾಜ್ಯದಲ್ಲಿ 60 ಸಾವಿರ ಗಣಪತಿ ಪ್ರತಿಷ್ಟಾಪಿಸಲಾಗಿದೆ. ಮೋದಿಯವರು ರಾಜ್ಯದ ಯಾವುದೋ ಮೂಲೆಯಲ್ಲಿ ನಡೆದ ಘಟನೆ ಬಗ್ಗೆ ಸೀರಿಯಸ್ ಆಗಿ ಹೇಳಿದ್ದಾರೆ.  ಯಾಕೆ ಹಾಗೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಡಾ.ಪರಮೇಶ್ವರ್ ನಾಗಮಂಗಲ ಘಟನೆ ಸಣ್ಣಘಟನೆವೆಂದಿದ್ದಾರೆ. ಸಚಿವರು ಇಂತಹ ಹೇಳಿಕೆ ನೀಡುವುದನ್ನ   ನಿಲ್ಲಿಸಬೇಕು ಎಂದು ಸಲಹೆ ನೀಡಿದರು‌ 


ನಾಗಮಂಗಲ ಘಟನೆಯಲ್ಲಿ ಇಬ್ವರು ಯುವಕರು ಕೇರಳದವರು ಎಂಬುದು ಪತ್ತೆಯಾಗಿದೆ. ಯೂಸಫ್, 44 ನೇ ಆರೋಪಿ ಆಗಿದ್ದರೆ,  ನಾಸೀರ್ 61 ನೇ ಆರೋಪಿಯಾಗಿದ್ದಾನೆ. ಸಚಿವರ ಚೆಲುರಾಯ ಸ್ವಾಮಿ ಇವರಿಬ್ವರು ಕೇರಳದವನು ಎಂದು ಹೇಳಿದ್ದಾರೆ. 


ರಾಷ್ಟ್ರದ್ರೋಹಿ ಮುಸ್ಲೀಂ‌ರು ಶಾಂತಿಯುತ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ನಾಗಮಂಗಲ ಪ್ರಕರಣದಲ್ಲಿ ವಿದೇಶಿ ಸಂಚಿದೆ ಎಂದು ಪ್ರಧಾನಿ ಹೇಳಿದ್ದಾರೆ ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ಗಮನಿಸಬೇಕು. 


ಮುಸ್ಲೀಂ ವಿರೋಧಿ ಎಂದು ಮೋದಿ ಹೇಳಿಲ್ಲ. ರಾಜ್ಯ ಸರ್ಕಾರ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಇದೊಂದು ಸಂಚು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ ಪ್ರಧಾನಿ ಮೋದಿಯವರು ನಾಗಮಂಗಲ ಘಟನೆಯನ್ನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರ ಹಾಗಾಗಿ  ಸೀರಿಯಸಾಗಿ ತೆಗೆದುಕೊಳ್ಳಬೇಕೆಂದರು.‌


ನಾಳೆ ಶಿವಮೊಗ್ಗದಲ್ಲಿ ನಡೆಯುವ ಮೃವಣಿಗೆಯಲ್ಲಿ ಎಚ್ಚರ ವಹಿಸಬೇಕು


ದುಷ್ಕ್ರತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಬೇಕು ಎಂದ ಈಶ್ವರಪ್ಪ, ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜಿಸಲಾಗುತ್ತಿದೆ. ಈ ಗಣಪತಿ ರಾಜಬೀದಿ ಉತ್ಸವ ಮತ್ತೊಂದು ನಾಗಮಂಗಲ ಗಲಭೆಯಾಗದಂತೆ ಎಚ್ಚರವಹಿಸಬೇಕು. ಕೇರಳದಿಂದ ಬರುವ ಮುಸ್ಲೀಂರನ್ನ ತಡೆಯಬೇಕು ಎಂದು ಆಗ್ರಹಿಸಿದರು. 


ಮಂಗಳೂರಿನ ಬಿ.ಸಿ ರೋಡ್‌ಗೆ  ಶರತ್ ಪಂಪವೇಲ್ ಮತ್ತು ಪುನೀತ್ ಬರುವಂತೆ ಮುಸ್ಲೀಂ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಸವಾಲು ಹಾಕಿದ್ದಕ್ಕೆ ಅಲ್ಲಿಗೆ ಹೋಗಿದ್ದಾರೆ.  ಇವರನ್ನ ಪೊಲೀಸರು ಸಾಂತ್ವಾನ ಹೇಳಿ ಕಳುಹಿಸಿದ್ದಾರೆ. 


ಮಂಗಳೂರಿನಲ್ಲಿ ಏನು ಕ್ರಮ


ಇತ್ತ ಇವರಿಬ್ಬರೂ ನಾಗಮಂಗಲ ಗಲಭೆಯಲ್ಲಿ ನೊಂದ ಹಿಂದೂಗಳಿಗೆ  ಸಾಂತ್ವಾನ ಹೇಳಲು ಹೋದವರನ್ನ ಬಂಧಿಸಿದ್ದಾರೆ. ಮುಸ್ಲೀಂ ಯುವಕನ ಸವಾಲು ಪ್ತಕರಣದಲ್ಲಿ ಎಫ್ಐಆರ್ ಆಗಿದೆ. ಇದರಲ್ಲಿರುವ ಮತ್ತೋರ್ವನ ಮೇಲೆ ದೂರು ದಾಖಲಾಗಿಲ್ಲ. ಬಿ.ಸಿ ರೋಡ್‌ಗೆ ಹೋದಾಗ  ಗಲಾಟೆಯಾಗಿದ್ದರೆ ಯಾರು ಜವಬ್ದಾರರು ಎಂದು ಈಶ್ವರಪ್ಪ ಪ್ರಶ್ನಿಸಿದರು. 


ಸರ್ಕಾರ ಇವನ್ನೆಲ್ಲಾ  ಹಗೂರವಾಗಿ ತೆಗೆದುಕೊಂಡಿದೆ. ಸವಾಲು ಹಾಕಲಾಗುತ್ತಿದೆ. ಶಾಂತಿಯಿಂದ ಹಿಂದೂ ಸಮಾಜ ಇದೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ.‌ ಶಿವಮೊಗ್ಗದಲ್ಲಿ ಈ ಹಿಂದೆ ಎಸ್ ಡಿಪಿಐ ಕಾರ್ಯಕ್ರಮ ನಡೆದಾಗ ಹಿಂದೂ ಯುವಕನನ್ನ ಕೊಚ್ಚಿಹೋದರು. ವಿಧಾನ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದರು. ಕಾಂಗ್ರೆಸ್ ದುಷ್ಕ್ರತ್ಯಕ್ಕೆ ಬೆಂಬಲಿಸುವುದರಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ, ರಾಜ್ಯ ಸರ್ಕಾರದ ಪಾತ್ರ ದೊಡ್ಡದಿದೆ.‌ ಕ್ರಮ ಜರುಗಿಸಿ, ಮೋದಿ ಹೇಳಿಕೆಯನ್ನ ಹಗೂರವಾಗಿ ಪರಿಗಣಿಸಬೇಡಿ ಎಂದು ಸಲಹೆ ನೀಡಿದರು.

 

ನಾಟಕವಾಗಬಾರದು


ಶಿವಮೊಗ್ಗದಲ್ಲಿ ಗಣಪತಿ ಮೆರವಣಿಗೆಯಲ್ಲಿ ಸಿಹಿ ಹಂಚಲಾಗುತ್ತಿದೆ ಹೂವಿನ ಹಾರ ಹಾಕಲಾಗುತ್ತಿದೆ. ಸಂತೋಷ ಸ್ವಾಗತಿಸುವೆ ಆದರೆ ಇದು ನಾಟಕವಾಗಬಾರದು. ಶಿವಮೊಗ್ಗದಲ್ಲಿ ಗಲಾಟೆ ನಡೆಯುವ ಬಗ್ಗೆ ಮುನ್ಸೂಚನೆ ಇಲ್ಲ. ಆದರೆ ನಾಗಮಂಗಲ ಘಟನೆ ಶಿವಮೊಗ್ಗದಲ್ಲಿ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. 


ಮೃತ ಚಂದ್ರಶೇಖರನ್ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು


ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದು ಸರ್ಕಾರ 25 ಲಕ್ಷ ರೂ.  ಘೋಷಿಸಿತ್ತು. ಸಚಿವ ಮಹದೇವಪ್ಪನವರೊಂದಿಗೆ ಮಾತನಾಡಿದರೂ ಹಣ ಬಂದಿಲ್ಲ. ನಮ್ಮ ಶಾಸಕರು ಸಹ ಮಾತನಾಡಿದಾಗ ಮೂರು ದಿನದಲ್ಲಿ ಹಣ ಬರಲಿದೆ ಎಂದಿದ್ದರು. ಆದರೆ ಬಂದಿಲ್ಲ ಎಂದು ಈಶ್ವರಪ್ಪ ಹೇಳಿದರು. 


ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಕುಟುಂಬಕ್ಕೆ ಅಧಿಕಾರಿಗಳು ಸಾಂತ್ವಾನ ಹೇಳಬೇಕು. ನಿಗಮದ ಎಂಡಿ ಅವರು 25 ಲಕ್ಷ ರೂ. ಹಣ ಒಂದು ವಾರದಲ್ಲಿ ಬರಲಿದೆ ಎಂದಿದ್ದಾರೆ. ಅವರ ಮಗನಿಗೂ ಉದ್ಯೋಗ ನೀಡಬೇಕು ಎಂದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close