ಸುದ್ದಿಲೈವ್/ಶಿವಮೊಗ್ಗ
ಸಾರ್ವಜನಿಕ ಉದ್ಯಮಗಳ ಮತ್ತು ಗೃಹ ವ್ಯವಹಾರಗಳ ಸಂಸದೀಯ ಸಮಿತಿಗೆ ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ ನೇಮಕಗೊಂಡಿದ್ದಾರೆ.
ಶಿವಮೊಗ್ಗ ಲೋಕಸಭಾ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಇವರನ್ನು ಕೇಂದ್ರ ಸರ್ಕಾರವು ಎರಡು ಪ್ರಮುಖ ಸಂಸದೀಯ ಸಂಸ್ಥೆಗಳಿಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿಗೆ ಮತ್ತು ಗೃಹ ವ್ಯವಹಾರಗಳ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ (DRSC) ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಈ ನೇಮಕಾತಿಗಳು ರಾಷ್ಟ್ರೀಯ ನೀತಿ ರಚನೆಯಲ್ಲಿ ಮಹತ್ವದ ಜವಬ್ದಾರಿ ಹೊಂದಿದೆ. ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ನಂತರ ಸಚಿವ ಸ್ಥಾನ ದರೆಯುವ ನಿರೀಕ್ಷೆ ಇತ್ತು. ಆದರೆ ಅವರನ್ನ ಎರಡು ಪ್ರಮುಖ ಸಂಸದೀಯ ಸಂಸ್ಥೆಗಳಿ ನೇಮಸಲಾಗಿದೆ.
ಸಾರ್ವಜನಿಕ ಉದ್ಯಮಗಳ ಸಮಿತಿಯು ಸರ್ಕಾರಿ ಸ್ವಾಮ್ಯದ ಉದ್ಯಮಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತದೆ. ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಆಂತರಿಕ ಭದ್ರತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸುತ್ತದೆ. ಈ ನೇಮಕ ಕುರಿತು ಸಂಸದರಾದ ಶ್ರೀ ಬಿ.ವೈ ರಾಘವೇಂದ್ರರವರು ಸಂಸತ ವ್ಯಕ್ತ ಪಡಿಸಿದ್ದಾರೆ.