ಮುನಿರತ್ನರ ಬಂಧನದ ಹಿಂದೆ ರಾಜಕೀಯದ ವಾಸನೆಯಿದೆ-ವಿಜೇಂದ್ರ



ಸುದ್ದಿಲೈವ್/ಶಿವಮೊಗ್ಗ


ಈ ತಿಂಗಳು ಎರಡನೇ ತಾರಿಖು ಮೋದಿ ಅವರು ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶದಾದ್ಯಂತ ಯಶಸ್ವಿಯಾಗಿ ಅಭಿಯಾನ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ತಿಳಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಧ್ಯಕ್ಷರು ರಾಜ್ಯದಲ್ಲು ಯಶಸ್ವಿಯಾಗಿ ಅಭಿಯಾನ ನಡೆಯುತ್ತಿದೆ. ಇನ್ನು ಹೆಚ್ಚು ವೇಗ ಪಡೆಯಬೇಕು ಅಂತಾ ರಾಜ್ಯದಾದ್ಯಂತ ಪ್ರವಾಸ ಮಾಡ್ತಿದ್ದೇನೆ ಎಂದರು. 


ರಾಜ್ಯ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಗ್ಯಾರೆಂಟಿ ಯೋಜನೆಯಿಂದ ಅಭಿವೃದ್ಧಿ ನಡೆಯುತ್ತಿಲ್ಲ ಅಂದಿದ್ದಾರೆ. ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 


ವಾಲ್ಮೀಕಿ ಅಭಿವೃದ್ಧಿ ಹಗರಣದ ಬಗ್ಗೆ ಸ್ವತಃ ಸಿದ್ದರಾಮಯ್ಯ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ನಮ್ಮ ನಿರಂತರ ಹೋರಾಟದ ಪರಿಣಾಮ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಮುಡಾ ಹಗರಣದ ವಿರುದ್ದ ಬೆಂಗಳೂರು ಮೈಸೂರು ಪಾದಯಾತ್ರೆ ಮಾಡಿದೇವು. ಇದರ ಪರಿಣಾಮ ಸಿದ್ದರಾಮಯ್ಯ ಮೈಸೂರಿನಲ್ಲಿ ಸಮಾವೇಶ ಮಾಡಿದರು ಎಂದು ವಿವರಿಸಿದರು. 


ಕಾಂಗ್ರೆಸ್ ಹಿಂದೂ ವಿರೋಧಿ


ಕಾಂಗ್ರೆಸ್ ಸರಕಾರಕ್ಕೆ ಹಿಂದು ವಿರೋಧಿ ಮನಸ್ಥಿತಿ ಬಂದಿದೆ. ನಾಗಮಂಗಲದಲ್ಲಿ ನಡೆದ ಘಟನೆಯಲ್ಲಿ ಅಂಗಡಿ ಸುಟ್ಟಿದ್ದಾರೆ. ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪಾಂಡವಪುರದಲ್ಲಿ ಆರ್ ಎಸ್ ಎಸ್ ಕಚೇರಿಗೆ ಪೊಲೀಸರು ದಾಳಿ ಮಾಡಿದ್ದಾರೆ. ಅವರನ್ನು ಪೊಲೀಸರು ಎನ್ನುವ ಬದಲು‌ ಪುಢಾರಿಗಳು ಅಂದರೂ ತಪ್ಪಿಲ್ಲ ಎಂದು ದೈರಿದರು. 


ಸರಕಾರದ ಕುಮ್ಮಕ್ಕಿನಿಂದ ಪೊಲೀಸರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರ ರಣಹೇಡಿ ಸರಕಾರವಾಗಿದೆ. ರಾಜ್ಯದ ಗೃಹ ಮಂತ್ರಿಯನ್ನು ದೇವರೇ ಕಾಪಾಡಬೇಕು. ಯಾವುದೇ ಘಟನೆ ನಡೆದರೂ‌ ಸಣ್ಣ ಘಟನೆ ಅಂತಾರೆ. ದೇಶ ದ್ರೋಹಿಗಳಿಗೆ ಹೆಚ್ಚು ಶಕ್ತಿ ಕೊಟ್ಟಂತೆ ಆಗ್ತಿದೆ. ತಾವು ಈ ನಾಡಿನ ಮುಖ್ಯಮಂತ್ರಿ ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 


ಎಲ್ಲಾ ಸಮುದಾಯವನ್ನ ಒಟ್ಟಿಗೆ ತೆಗೆದುಕೊಂಡು ಹೋಗದ ಕಾಂಗ್ರೆಸ್


ಎಲ್ಲೋ‌ ಒಂದು ಕೋಮಿನ ಸಿಎಂ, ಗೃಹ ಸಚಿವ ಅಂತಾ ನಡೆದುಕೊಳ್ಳೋದು ಅಕ್ಷಮ್ಯ ಅಪರಾಧ. ನಮ್ಮ ನಾಡು ಶಾಂತಿಯುತವಾಗಿ ಇರಬೇಕು ಅಂದ್ರೆ ಎಲ್ಲಾ ಸಮುದಾಯವನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅಹಿಂದ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಅನ್ಯಾಯ ಮಾಡಿದ್ದಾರೆ ಎಂದರು. 


ನನ್ನನ್ನ ಆಯ್ಕೆ ಮಾಡಿರೋದು ಬಿಜೆಪಿ ಹೈಕಮಾಂಡನವರು


ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ವಿಜೇಂದ್ರ, ಯಾರು ಏನೇ ಮಾತನಾಡಿದರೂ ವಿಜಯೇಂದ್ರ‌ ಅವರನ್ನು ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿರೋದು ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾಯಾರೂ ಏನೇ ಹೇಳಿದರು ನಮ್ಮ ‌ಕಾರ್ಯಕರ್ತರು ನನ್ನನ್ನು ಒಪ್ಪಿಕೊಂಡಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು. 


ಮುನಿರತ್ನ ಬಂಧನ ವಿಚಾರದಲ್ಲೂ ಪ್ರತಿಕ್ರಿಯಿಸಿದ ರಾಜ್ಯಾಧ್ಯಕ್ಷರು ಮುನಿರತ್ನ ‌ಪ್ರಕರಣ ಎಲ್ಲರೂ ಗಮನಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ‌ಕ್ಷೇತ್ರದಲ್ಲಿ‌ ಮಂಜುನಾಥ್ ಗೆದ್ದರು. ನಾವು ಮಾಡಿದ ತಂತ್ರಗಾರಿಕೆಯಿಂದ ಗೆದ್ದರು. ರಾಜ್ಯದ ಡಿಸಿಎಂ ಸಹೋದರ ಸೋತರು. 


ಈಗಾಗಿ ರಾಜಕೀಯ ಪಿತೂರಿಗಾಗಿ ಈ ಘಟನೆ ನಡೆದಿರಬಹುದು. ತನಿಖೆ ನಂತರ ಎಲ್ಲವೂ ಬಹಿರಂಗ ಆಗಲಿದೆ. ಯಾವುದೇ ನೋಟೀಸ್ ‌ನೀಡದೇ ತರಾತುರಿಯಲ್ಲಿ ಅರೆಸ್ಟ್ ಮಾಡಿದ್ದಾರೆ ಎಂದರು. 


ಉತ್ತರ ಕರ್ನಾಟಕದ ಜನಕ್ಕೆ ಅನ್ಯಾಯವಾಗಿದೆ


ಉತ್ತರ ಕರ್ನಾಟಕದ ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿಲ್ಲ. ಉತ್ತರ ಕರ್ನಾಟಕದ ಜನತೆಗೆ ಅನ್ಯಾಯವಾಗ್ತಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಹ ಆಗಿಲ್ಲ. ಈ ಸರಕಾರ ನಾಡಿನ ಜನರ ಪಾಲಿಗೆ ಮರಣಶಾಸನ ಬರೆಯುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು. 


ಬಳ್ಳಾರಿ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮದು ಸದಸ್ಯತಾ ಅಭಿಯಾನ ನಡೆಯುತ್ತಿದೆ. ಈಗ ಮೊದಲ ಹಂತ ಆರಂಭವಾಗಿದೆ. ಅಕ್ಟೋಬರ್ ನಲ್ಲಿ ಎರಡನೇ ಸದಸ್ಯತಾ ಅಭಿಯಾನ ನಡೆಯಲಿದೆ. ಈಗಾಗಿ ಪಾದಯಾತ್ರೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸದಸ್ಯತಾ ಅಭಿಯಾನ ಮುಗಿದ ನಂತರ ಈ ಬಗ್ಗೆ ನಮ್ಮ ನಾಯಕರೆಲ್ಲಾ ಕುಳಿತು ಚರ್ಚೆ ಮಾಡ್ತೇವೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close