ಹಣ ಕೊಡದೆ ಕಾರ್ಮಿಕನಿಗೆ ವಂಚಿಸುದ್ರಾ ಮಹಿಳೆ?

 


ಸುದ್ದಿಲೈವ್/ಶಿವಮೊಗ್ಗ


ವಿನೋಬ ನಗರದಲ್ಲಿ ಮನೆಯ ಇಂಟಿರಿಯರ್ ಡೆಕೋರೇಷನ್ ಮಾಡಿಸಿಕೊಂಡು ಕಾರ್ಪೆಂಟರ್ ಒಬ್ಬರಿಗೆ ಬಾಕಿ ಹಣ ನೀಡದೆ ಸತಾಯಿಸುತ್ತಾ ಬಂದಿರುವ ಮಹಿಳೆಯೊಬ್ಬರು ಅದನ್ನ ಕೇಳಲು ಹೋದ ಕೂಲಿ ಕಾರ್ಮಿಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.


ವಿನೋಬನಗರದಲ್ಲಿ ಮಂಜುಳ ಎಂಬ ಮಹಿಳೆ ಹಾರನಹಳ್ಳಿಯ ಮಹೇಶ್ ಎಂಬ ಕಾರ್ಪೆಂಟರ್ ರಿಂದ 2 ಲಕ್ಷದ 5 ಸಾವಿರ ರೂ. ಹಣವನ್ನ ಒಂದು ಬಿಳಿ ಹಾಳೆಯ ಮೇಲೆ ಒಪ್ಪಂದ ಮಾಡಿಸಿಕೊಂಡು ಕೆಲಸ ಆಭಿಸಿದ್ದರು. ಕಾರ್ಪರೆಂಟರ್ ಮಹೇಶ್ ಇಂಟಿರಿಯರ್ ಡೆಕೋರೇಷನ್ ಸಂಪೂರ್ಣಗೊಳಿಸಿದ್ದರು.


ಕೆಲಸ ನಡೆಯುತ್ತಿದ್ದ ವೇಳೆ ಮಹಿಳೆ 70 ಸಾವಿರ ರೂ. ಹಣ ನೀಡಿದ್ದರು. ಕೆಲಸ ಮುಗಿದ ಮೇಲೆ ಹಣ ಕೇಳಿದರೆ ಮಹಿಳೆ ಕೈಗೆ ಸಿಗದೆ ಆಟಾಡಿಸಲು ಶುರು ಮಾಡಿರುವುದಾಗಿ ಕಾರ್ಪೆಂಟರ್ ಮಹೇಶ್ ಆರೋಪಿಸಿದ್ದಾರೆ.‌ ಒಂದೆರಡು ಬಾರಿ ಮಹೇಶ್ ಗೆ ಸಿಕ್ಕರೂ ಹಣ ಕೊಡುವುದಿಲ್ಲ ಹಣ ಕೇಳಲು ಬಂದರೆ ಕೊಲೆ ಮಾಡುವುದಾಗಿ ಜೇವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.


ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆಗಿದೆ.‌ ಮಹಿಳೆ ಈಗ ಬರ್ತಿನಿ ಆಗ ಬರ್ತಿನಿ ಎಂದು ಹೇಳಿ ಠಾಣೆಗೂ ಬಾರದೆ ತಲೆ ಮರೆಸಿಕೊಂಡು ಓಡಾಡುತ್ತಿರುವುದಾಗಿ ತಿಳಿದು ಬಂದಿದೆ. ಮನೆಗೂ ಪೊಲೀಸರು ಹೋಗಿ ಬಂದರೂ ಮನೆ ಲಾಕ್ ಮಾಡಿಕೊಂಡು ಬೇರೆಡೆ ಹೋಗಿರುವ ಘಟನೆಗಳು ನಡೆದಿದೆ.


ನ್ಯಾಯಯುತವಾಗಿ ಕೆಲಸ ಮಾಡಿಕೊಟ್ಟ ಕಾರ್ಪೆಂಟರ್ ಜೊತೆ ಕುಳಿತು ಸೆಟ್ಲು ಮಾಡಿಕೊಳ್ಳದೆ ಹೀಗೆ ಆಟಾಡಿಸುವುದು ನ್ಯಾಯವೇ? ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಹಿತರಕ್ಷಣ ವೇದಿಕೆ ಸಹ ಕಾರ್ಪೆಂಟರ್ ಜೊತೆ ಹೋರಾಟ ನಡೆಸುತ್ತಿದೆ. ಮಹಿಳೆ ಹೀಗೆ ಜಿದ್ದು ಮುಂದುವರೆಸುತ್ತಾರೋ ಅಥವಾ ಸಂಧಾನಕ್ಕೆ ಮುಂದಾಗುತ್ತಾರೋ ಕಾದು ನೋಡಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು