ರೈತ ಸಂಘದಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ


ಸುದ್ದಿಲೈವ್/ಶಿವಮೊಗ್ಗ


ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ  ಸೇನೆ ವತಿಯಿಂದ "ರೈತರ ಕರಾಳ ದಿನಾಚರಣೆ" ಆಚರಿಸಿದೆ. ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 


 ಸಂಘಟನೆಯ ರಾಜ್ಯಾಧ್ಯಕ್ಷ ಎಚ್ಆರ್ ಬಸವರಾಜಪ್ಪ ನೇತೃತ್ವದಲ್ಲಿ ರೈತ ಸಂಘಟನೆ ಪ್ರತಿಭಟಿಸಿದೆ. ಜಿಂದಾಲ್ ಕಂಪನಿಗೆ ಅಗ್ಗದ ಬೆಲೆಗೆ  ಭೂಮಿ ಕೊಡಬಾರದು. ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಜನ ಜಾನುವಾರು ಮನೆ ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು. ಐ ಪಿ ಸೆಟ್ಟಿಗೆ ಆಧಾರ್ ನಂಬರ್ ಜೋಡಣೆ ಮಾಡಬಾರದು ಮತ್ತು ಸ್ವಯಂ ಆರ್ಥಿಕ ಯೋಜನೆ ಕೈ ಬಿಟ್ಟು ಹಿಂದಿನಂತೆ ಅಕ್ರಮ ಸಕ್ರಮ ಯೋಜನೆ ಮುಂದುವರಿಸಬೇಕು.


ಕನಿಷ್ಠ ಬೆಂಬಲ ಬೆಲೆಯನ್ನು ಕಾನಾತ್ಮಕಾಗೊಳಿಸಬೇಕು. ವಿದ್ಯುತ್ ಖಾಸಗೀ ಕರಣವನ್ನು ಕೈಬಿಡಬೇಕು. ಬಗುರ್ ಹುಕುಂ ಸಾಗುವಳಿದಾರರನ್ನು ಒಕ್ಕಲಿಬ್ಬಿಸಬಾರದು ತಕ್ಷಣವೇ ಸಾಗುವಳಿ ಹಕ್ಕುಪತ್ರ ನೀಡಬೇಕು. ಬ್ಯಾಂಕುಗಳು ಬಲವಂತದ ರೈತರ ಸಾಲ ವಸೂಲಿ ನಿಲ್ಲಿಸಬೇಕು. ಶರವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದನ್ನ ತಕ್ಷಣವೇ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದೆ. 


ಹಕ್ಕೋತ್ತಾಯ


1. ಕೃಷಿ ಐ.ಪಿ ಸೆಟ್‌ ಗಳಿಗೆ ಆಧಾರ ನಂಬರ್ ಜೋಡಣೆಯನ್ನು ಕೂಡಲೇ ಕೈಬಿಡಬೇಕು. ಕೃಷಿ ಸಾಲ ಪಡೆಯಲು ಬ್ಯಾಂಕ್‌ಗಳು NOCಗೆ ಶುಲ್ಕ ವಸೂಲಿ ಮಾಡಬಾರದು. ರೈತರ ಕೃಷಿ ಸಾಲವನ್ನು ಒತ್ತಾಯ ಪೂರ್ವಕವಾಗಿ ವಸೂಲಿ ಮಾಡಬಾರದು.


2. ರೈತರ ಜಮೀನುಗಳ ದಾರಿ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು. ಬೆಳೆ ವಿಮೆಯನ್ನು ಕಾಲಮಿತಿಯಲ್ಲಿ ಸರಿಪಡಿಬೇಕು ಹಾಗೂ ಬೆಳೆ ಪರಿಹಾರ ತಾರತಮ್ಯವನ್ನು ಸರಿಪಡಿಸಬೇಕು. 5. ಪಹಣಿ ಮತ್ತು ಭೂದಾಖಲೆಗಳನ್ನು 5ರೂ.ಗೆ ನೀಡಬೇಕು. ಇದನ್ನು ವ್ಯಾಪಾರವಾಗಿ ಪರಿಗಣಿಸದೇ ಸೇವೆಯಾಗಿ ಪರಿಗಣಿಸಬೇಕು.


3. ಭೂ ದಾಖಲೆಯನ್ನು ಗಣಕೀಕೃತಗೊಳಿಸುವುವಾಗ ತಪ್ಪುಗಳಾದಲ್ಲಿ ನೌಕರರನ್ನೇ ಹೊಣೆಗಾರರಾಗಿ ಮಾಡಬೇಕು.ತೆಂಗಿಗೆ ಬಾಧಿಸುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ ಕೂಡಲೇ ನಿಯಂತ್ರಿಸಬೇಕು. ಖಾಸಗಿ ಶಾಲೆ-ಕಾಲೇಜುಗಳು ಶುಲ್ಕ ವಸೂಲಾತಿಯಲ್ಲಿ ಕಡ್ಡಾಯವಾಗಿ ಸರ್ಕಾರಿ ನಿಯಮ ಪಾಲಿಸಬೇಕು. ಮತ್ತು ಅನಧಿಕೃತವಾಗಿ ಪಡೆದ ಶುಲ್ಕವನ್ನು ಹಿಂಪಾವತಿಸಬೇಕು.


4. ಬೋರ್‌ವೆಲ್‌ ಕೊರೆಸಲು ಸರ್ಕಾರವೇ ಬೆಲೆ ನಿಗಧಿ ಮಾಡಲು ಅಧಿಕಾರಿಗಳು, ಬೋರ್‌ವೆಲ್ ಮಾಲೀಕರು ಮತ್ತು ರೈತರು ಒಳಗೊಂಡ ಸಮಿತಿ ರಚಿಸಬೇಕು. ಸರ್ಕಾರಿ ಆಸ್ಪತ್ರೆಗಳ ಭ್ರಷ್ಟಾಚಾರ ನಿಯಂತ್ರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯ ವೆಚ್ಚದ ಬಗ್ಗೆ ಆಸ್ಪತ್ರೆ ಮುಂಭಾಗ ಮಾನವೀಯ ನೆಲೆಯಲ್ಲಿ ಬೋರ್ಡ್ ಹಾಕಬೇಕು.


05. ಬಗರ್‌ ಹುಕ್ಕುಂ ಸಾಗುವಾಳಿದಾರ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಸಾಗುವಾಳಿ ಚೀಟಿ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕೃಷಿ ಬೆಲೆ ಆಯೋಗ ವರದಿ ಮತ್ತು ಡಾ. ಸ್ವಾಮಿನಾಥನ್ ವರದಿಯಂತೆ ಬೆಲೆ ನಿಗಧಿ ಮಾಡಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳು ಹಣಕಾಸು ವ್ಯವಹಾರದ ಮೇಲೆ ಸರ್ಕಾರಗಳ ನಿಯಂತ್ರಣ ವಹಿಸಬೇಕು.


6. ಸಾಲ ನೀಡುವಾಗ ರೈತರನ್ನು ಸಿಬಿಲ್ ನಿಂದ ಹೊರತುಪಡಿಸಬೇಕು. ಶರಾವತಿ ನೀರನ್ನು ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಕೊಂಡೋಯಬಾರದು. ಇದರಿಂದ ಪರಿಸರಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದನ್ನು ತಕ್ಷಣವೇ ಕೈಬಿಡಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು