Girl in a jacket

ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟ ಸಮಿತಿ ಅಸ್ಥಿತ್ವಕ್ಕೆ

 



ಸುದ್ದಿಲೈವ್/ಹೊಸನಗರ

ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಶರಾವತಿ ಮೂಲದಲ್ಲಿ ಪಂಪ್ ಸ್ಟೋರೇಜ್ ಮತ್ತು ಬೆಂಗಳೂರಿಗೆ ನದಿ  ಹರಿಸುವುದನ್ನ ವಿರೋಧಿಸಿ ನಾಳೆಯಿಂದ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬರಲಿದೆ.

ಈ ಬಗ್ಗೆ ಇಂದು ಹೊಸನಗರದ ಮೂಲೆಗದ್ದೆ ಮಠದಲ್ಲಿ ಸಭೆನಡೆದಿದೆ. 15 ದಿನಗಳಲ್ಲಿ ಸರ್ಕಾರ  ಈ ಎರಡೂ ಯೋಜನೆಗಳನ್ನ ರದ್ದುಗೊಳಿಸದಿದ್ದಲ್ಲಿ ಹಂತ ಹಂತದ ಹೋರಾಟ ನಡೆಸಲು ಸಭೆ ನಿರ್ಧರಿಸಿದೆ.

ಪಂಪ್ ಸ್ಟೋರ್ ಮತ್ತು ಶರಾವತಿ ನದಿಯನ್ನ ಬೆಂಗಳೂರಿಗೆ ಹರಿಸುವುದನ್ನ ತಕ್ಷಣ ರದ್ದು ಮಾಡಬೇಕು. ಇದಕ್ಕಾಗಿ ಸಮಿತಿ ಸಹ ರಚಿಸಲಾಗಿದೆ. ಸಮಿತಿಯಲ್ಲಿ 35 ಜನ ಸದಸ್ಯರಿದ್ದಾರೆ.‌ ಹೊಸನಗರದ ಮೂಲಗದ್ದೆ ಮಠದ  ಅಭಿನವ ಚನ್ನಬಸವ ಮಹಾಸ್ವಾಮಿಗಳು  ಕಾರ್ಯಾಧ್ಯಕ್ಷರಾಗಿದ್ದು ಗೌರವಾಧ್ಯಕ್ಷರಾಗಿ ನಾ.ಡಿಸೋಜಾ ಅವರು  ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು.

15 ದಿನಗಳಲ್ಲಿ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾದ ಸ್ವರೂಪ ಬದಲಾಗಲಿದೆ. ಇಂದು ನಡೆದ ಸಭೆಯಲ್ಲಿ ಹೊನ್ನಾವರದಿಂದ ಹೋರಾಟ ಸಮಿತಿಯವರು ಭಾಗಿಯಾಗಿದ್ದರು. ಮಂಗಳೂರು, ಧಾರವಾಡ, ಉತ್ತರ ಕನ್ನಡ ಎಲ್ಲಡೆ ಭಾಗಿಯಾಗಿದ್ದರು.  ಪಕ್ಷಾತೀತವಾದ ಹೋರಾಟಕ್ಕೆ ಸಭೆ ನಿರ್ಣಯಿಸಿದೆ.

ರೈತರ ಒಕ್ಕಲೆಬ್ಬಿಸುವ ವಿಚಾರದಲ್ಲಿ ಶರಾವತಿ ಉಳುಸಿ ಹೋರಾಟ ಸಮಿತಿ ಸಪೋರ್ಟ್ ಇದೆ. ಆದರೆ ಕೂಲಂಕುಶವಾಗಿ ಪರಿಶೀಲಿಸಿ ಬೆಂಬಲ ನೀಡಲು ಸಭೆ ತೀರ್ಮಾನಿಸಿತು.‌. ಇಂದು ಮತ್ತು ನಾಳೆ ಸಮಿತಿ 25 ಜನರ ತಂಡದ ಸಮಿತಿ ರಚನೆ ಆಗಲಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು