ಸೂಳೆಬೈಲಿನಲ್ಲಿ ಮುಸ್ಲೀಂ ಸಮುದಾಯದವರಿಂದ ಗಣೇಶನಿಗೆ ಮಾಲಾರ್ಪಣೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿಯಿದೆ. ಕೋಮು ನಡುವಿನ ಸಂಘರ್ಷ ಯಾವಾಗಲೂ ಮನೆಮಾತಾಗಿದೆ. ಆದರೆ ಇತ್ತೀಚಿನ ಕೆಲ ಉದಾಹರಣೆಗಳು ಈ ಹಣೆಪಟ್ಟಿಯನ್ನ ಹೋಗಲಾಡಿಸುವ ಸಣ್ಣ ಪ್ರಯತ್ನಗಳು ನಡೆಯುತ್ತಿದೆ. 


ಎರಡು ಮೂರು ದಿನಗಳ ಹಿಂದಷ್ಟೆ ಅಹಮದ್ ಕಾಲೋನಿಯ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮಸೀದಿ ಕಮಿಟಿಯವರೇ ಬಂದು ಹೂವಿನ ಹಾರ ಹಾಕಿ ಸೌಹಾರ್ಧತೆ ಮೆರೆದಿದ್ದರು. ಈಗ ಮತ್ತೊಂದು ಇದೇತರಹದ ಘಟನೆ ದಾಖಲಾಗಿದೆ. 



ನಗರದ ಸೂಕ್ಷ್ಮ ಪ್ರದೇಶದಲ್ಲೊಂದಾದ  ಸೂಳೇಬೈಲಿನಲ್ಲಿ ದುರ್ಗಾಂಬ ದೇವಸ್ಥಾನದಲ್ಲಿರುವ ಮಾರುತಿ ಮಲ್ಲೇಶ್ವರ ಯುವಕರ ಸಂಘದ ಗಣಪತಿ ಪ್ರತಿಷ್ಠಾನದ ವಿಸರ್ಜನಾ ಮೆರವಣಿಗೆ ನಡೆದಿದೆ.  ಸೂಳೆಬೈಲಿನ ಮುಖ್ಯ ರಸ್ತೆಯ ಸುನ್ನಿ ಮೆಕ್ಕಾ ಮಸ್ಜಿದ್ ರಸ್ರೆಯಲ್ಲಿ ಮೆರವಣಿಗೆ ಸಾಗುವ ವೇಳೆ  ಮುಸ್ಲಿಂ ಬಾಂಧವರು ಗಣಪತಿ ಪ್ರತಿಮೆಗೆ  ಮಾಲೆಯನ್ನು ತಂದು ಕೊಟ್ಟು ಗಣಪತಿ ಪೆಂಡಾಲ್‌ನವರಿಂದಲೇ ಮಾಲೆ ಹಾಕಿಸಿದ್ದಾರೆ. 


ಇದೇ ವೇಳೆ  ಮೆರವಣಿಗೆಯಲ್ಲಿನ ಭಕ್ತಾದಿಗಳಿಗೆ ಸಿಹಿ ಮತ್ತು ನೀರನ್ನ ಹಂಚಿ ಸೌಹಾರ್ಧತೆ ಮೆರೆದಿದ್ದಾರೆ. ಇವೆಲ್ಲವೂ ಸಣ್ಣ ಪುಟ್ಟ ವಿಚಾರಗಳು ಎನಿಸಿದರೂ ಇವುಗಳಿಂದಲೇ ಸೌಹಾರ್ಧತೆಗೆ ಬುನಾದಿಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ವಿಷಯವನ್ನ ತಳ್ಳಿಹಾಕುವಂತಿಲ್ಲ. 


ಈ ವೇಳೆ ತುಂಗ ನಗರ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕೆಟಿ, ಪಿಎಸ್ಐ ರಘುವೀರ, ಎಎಸ್ಐ ಶೇಖರ್ ಎನ್, ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ಯಾಮ್ ಕುಮಾರ್ ಎಂ ಎಸ್, ಲಂಕೇಶ್ ಕುಮಾರ್, ಪ್ರಶಾಂತ್ ಕುಮಾರ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳ ಶ್ರಮ ಸಹ ಈ ಸೌಹಾರ್ಧತೆಯಲ್ಲಿದೆ ಎಂಬುದನ್ನ ಮರೆಯುವ ಹಾಗಿಲ್ಲ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು