ಎಂಎಲ್‌ಸಿಗೆ ತುಲಾಬಾರ



ಸುದ್ದಿಲೈವ್/ಶಿವಮೊಗ್ಗ


59 ನೇ ಗಣೇಶೋತ್ಸವ ಅಂಗವಾಗಿ ಎಂಎಲ್‌ಸಿ ಡಾ.ಧನಂಜಯ ಸರ್ಜಿ ಅವರಿಗೆ ತುಲಾಬಾರ ನಡೆದಿದೆ. ಹಿರಿಯರೊಬ್ಬರು ಚುನಾವಣೆಯಲ್ಲಿ ಗೆದ್ದವೇಳೆ ಗಣಪತಿ ಉತ್ಸವದಲ್ಲಿ ಡಾ.ಸರ್ಜಿ ಅವರಿಗೆ ತುಲಾಬಾರ ನಡೆಸುವುದಾಗಿ ಹರಕೆ ಹೊತ್ತುಕೊಂಡಿದ್ದು ಆ ಹರಕೆಯನ್ನ ನಿನ್ನೆ ಡಾ.ಸರ್ಜಿ ನಡೆಸಿಕೊಟ್ಟಿದ್ದಾರೆ. 


ಶಿವಮೊಗ್ಗ ನಗರದ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ 59 ನೇ ಗಣೇಶೋತ್ಸವದ ಅಂಗವಾಗಿ ಭಾನುವಾರ  ತುಲಾಭಾರ ಸೇವೆಯನ್ನ ಹಮ್ಮಿಕೊಳ್ಳಲಾಗಿತ್ತು.‌ 


ಡಾ.ಸರ್ಜಿ ಅವರು  ಕುಟುಂಬ ಸಮೇತರಾಗಿ ತುಲಾಬಾರದಲ್ಲಿ ಪಾಲ್ಗೊಂಡು ಹರಕೆ ನಡೆಸಿಕೊಟ್ಟಿದ್ದಾರೆ.  ಬೆಲ್ಲದ ತುಲಾಭಾರ ಸೇವೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು. ಈ ವೇಳೆ ಸಮಾಜದ ಅಧ್ಯಕ್ಷರಾದ ಶ್ರೀ ಭಾಸ್ಕರ್ ಜಿ ಕಾಮತ್ , ನಿರ್ದೇಶಕರುಗಳು,  ಸಮಾಜದ ಮಾತೃ ಮಂಡಳಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close